ಶಾಸಕ ಸಂಗಮೇಶ್‌ಗೆ ಕೊಟ್ಟಿದ್ದು 50 ಕೋಟಿ ಅಲ್ಲ, 500 ಕೋಟಿ ಆಫರ್‌: ಈಶ್ವರಪ್ಪ ವ್ಯಂಗ್ಯ

 ಶಾಸಕ ಬಿ.ಕೆ. ಸಂಗಮೇಶ್‌ ಬಿಜೆಪಿಗೆ ಬರಲು .50 ಕೋಟಿ ಅಲ್ಲ, 500 ಕೋಟಿ ಆಫರ್‌ ಕೊಟ್ಟಿದ್ದು, ಸಂಗಮೇಶ್‌ ಬೆಲೆ ಡಿ.ಕೆ.ಶಿವಕುಮಾರ್‌ಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

MLA Sangamesh was offered 500 crores, not 50 crores says Eshwarappa  rav

ಶಿವಮೊಗ್ಗ (ನ.3) : ಶಾಸಕ ಬಿ.ಕೆ. ಸಂಗಮೇಶ್‌ ಬಿಜೆಪಿಗೆ ಬರಲು .50 ಕೋಟಿ ಅಲ್ಲ, 500 ಕೋಟಿ ಆಫರ್‌ ಕೊಟ್ಟಿದ್ದು, ಸಂಗಮೇಶ್‌ ಬೆಲೆ ಡಿ.ಕೆ.ಶಿವಕುಮಾರ್‌ಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ವ್ಯಂಗ್ಯವಾಡಿದರು.

ಈಶ್ವರಪ್ಪ ಬಾಯ್‌ಬಿಟ್ರೆ ಶಿವಮೊಗ್ಗದಲ್ಲಿ ಗಲಭೆ ಸೃಷ್ಟಿಯಾಗುತ್ತೆ: ಸಿ.ಎಂ.ಇಬ್ರಾಹಿಂ ಆರೋಪ

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಗಮೇಶ್‌ ಅವರನ್ನು ಬಿಜೆಪಿಗೆ ಕರೆತರಲು 50 ಕೋಟಿ ನೀಡುವ ಆಮಿಷ ಒಡ್ಡಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅವರಿಗೆ ಶಾಸಕರ ಬೆಲೆ ಗೊತ್ತಿಲ್ಲ. ನಾನು ಮಾಡಿದ್ದು 500 ಕೋಟಿ ಆಫರ್‌ ಎಂದು ಲೇವಡಿ ಮಾಡಿದ ಅವರು, ಶಿವಮೊಗ್ಗದಲ್ಲಿ ಗಲಾಟೆಗೆ ನಾನೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್‌ ಅವರು ಹೇಳಿಕೆ ಅಶ್ವರ್ಯ ತಂದಿದೆ. ಅವರ ಹೇಳಿಕೆಗೆಲ್ಲ ಉತ್ತರ ಕೊಡುವ ಅಗತ್ಯ ಇಲ್ಲ ಎಂದು ತಳ್ಳಿಹಾಕಿದರು.

ಈ ಜನ್ಮದಲ್ಲಿ ಸಿದ್ದರಾಮಯ್ಯ ಸಿಎಂ ಅಗಲ್ಲ:

ಬಿ.ಆರ್‌.ಅಂಬೇಡ್ಕರ್‌, ಜಗಜೀವನ ರಾಮ್‌ ಅವರನ್ನು ಸೋಲಿಸಿದ ಕಾಂಗ್ರೆಸ್‌ಗೆ ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಇಲ್ಲ. ಬಿಜೆಪಿಯವರಿಗೆ ಹಿಂದುಳಿದವರ ಬಗ್ಗೆ ಪ್ರೀತಿ ಇದ್ದರೆ ಈಶ್ವರಪ್ಪನವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕಿತ್ತು. ಏಕೆ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಮೇಲಿನ ಪ್ರೀತಿಗೆ ಧನ್ಯವಾದ. ಆದರೆ, ನನ್ನನ್ನೇ ಮುಖ್ಯಮಂತ್ರಿ ಮಾಡಬೇಕು ಎನ್ನುವ ಅವರ ವ್ಯಂಗ್ಯ ಸರಿಯಲ್ಲ. ಪ್ರಧಾನಿ ಮೋದಿಯವರು ಕೂಡ ಹಿಂದುಳಿದವ ವರ್ಗದವೇ. ಸಿದ್ದರಾಮಯ್ಯ ಈ ಜನ್ಮದಲ್ಲಿ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹರಿಹಾಯ್ದರು.

ಕಾಂಗ್ರೆಸ್‌ನವರು ಬಿಜೆಪಿಗರು ಲಂಚ ಪಡೆಯುತ್ತಿದ್ದಾರೆ ಎಂದು ದಾಖಲೆ ಇಲ್ಲದೆ ಹೇಳುತ್ತಿದ್ದಾರೆ. ಆದರೆ, ನಾವು ಹಾಗಲ್ಲ. ದಾಖಲೆ ಇಟ್ಟುಕೊಂಡು ಮಾತನಾಡುತ್ತೇವೆ. ಈಗಾಗಲೇ ನಮ್ಮ ಪಕ್ಷದ ಎನ್‌.ಆರ್‌. ರಮೇಶ್‌ ಅವರು, ಸಿದ್ದರಾಮಯ್ಯ .1.30 ಕೋಟಿ ಲಂಚ ತೆಗೆದುಕೊಂಡ ಬಗ್ಗೆ ದಾಖಲೆ ಸಮೇತ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್‌ ಭ್ರಷ್ಟಾಚಾರಗಳನ್ನೆಲ್ಲ ಬಯಲು ಮಾಡುತ್ತೇವೆ ಎಂದು ಖಾರವಾಗಿ ಹೇಳಿದರು.

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ವಿಶೇಷ ಸಮಾವೇಶವನ್ನು ಕಲಬುರಗಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಎಲ್ಲ ಸಿದ್ಧತೆ ನಡೆದಿದೆ. ಹಿಂದುಳಿದ ವರ್ಗ ಬಿಜೆಪಿ ಜೊತೆ ಇದೆ ಎನ್ನವುದನ್ನು ಇದು ಸಾಬೀತುಪಡಿಸುತ್ತದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪಾಲಿಕೆ ಮೇಯರ್‌ ಶಿವಕುಮಾರ್‌, ಉಪಮೇಯರ್‌ ಲಕ್ಷ್ಮೀಶಂಕರ್‌ ನಾಯ್ಕ…, ಎಸ್‌.ಎನ…. ಚನ್ನಬಸಪ್ಪ ಮತ್ತಿತರರು ಇದ್ದರು.

ಕೆರೆ ತುಂಬಿಸಿದ ಬಿಜೆಪಿ ಸರ್ಕಾರ ಸ್ಮರಿಸಿ: ಎಂ.ಬಿ.ಪಾಟೀಲಗೆ ಈಶ್ವರಪ್ಪ ಟಾಂಗ್‌

ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂದು ಸುಮ್ಮನೆ ಕೈ ಬೀಸಿದರೆ ಸಾಕು, ರಾಹುಲ್‌ ಗಾಂಧಿ ಗಾಳಿಯಲ್ಲಿ ತೂರಿಕೊಂಡು ಹೋಗುತ್ತಾರೆ. ಎಲ್ಲಿ ಅಂತ ಹುಡುಕಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಸಂದರ್ಭದಲ್ಲಿ ಎಲ್ಲ ಕಡೆ ಬರುತ್ತಾರೆ. ಆಗ ರಾಹುಲ್‌ ಗಾಂಧಿ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರು ಧೂಳಿಪಟ್ಟಆಗುತ್ತಾರೆ

-ಕೆ.ಎಸ್‌.ಈಶ್ವರಪ್ಪ, ಮಾಜಿ ಸಚಿವ

Latest Videos
Follow Us:
Download App:
  • android
  • ios