ರೇಣುಕಾಚಾರ್ಯ ಸಮಯ ಪ್ರಜ್ಞೆಯಿಂದ ತಪ್ಪಿದ ದೊಡ್ಡ ಅನಾಹುತ

* ದಾವಣಗೆರೆ ಜಿಲ್ಲೆ ಹೊನ್ನಾಳಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ  ಆಕ್ಸಿಜನ್ ಕೊರತೆ
* ಶಾಸಕ ಎಂ.ಪಿ ರೇಣುಕಾಚಾರ್ಯರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ 
* ಎಸ್ಕಾರ್ಟ್ ಮೂಲಕ ಆಕ್ಸಿಜನ್ ಸಿಲಿಂಡರ್ ತಂದು 40 ಸೋಂಕಿತ ಜೀವ ಉಳಿಸಿದ ರೇಣುಕಾಚಾರ್ಯ

mla renukacharya Saved 40 Peoples Life after solved oxygen shortage issue in honnali rbj

ದಾವಣಗೆರೆ, (ಮೇ.18): ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ದಾವಣಗೆರೆ ಜಿಲ್ಲೆ ಹೊನ್ನಾಳಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿರುವ ಕೊರೋನಾ ಸೋಂಕಿತ ಪಾಲಿನ ದೇವರಾಗಿದ್ದಾರೆ.

"

ಪ್ರತಿನಿತ್ಯವೂ ಆಸ್ಪತ್ರೆಯಲ್ಲಿನ ಸೋಂಕಿತರು, ಲಸಿಕೆ ಪಡೆಯುವವರು, ಸಿಬ್ಬಂದಿಗೆ ಉಪಾಹಾರವನ್ನು ರೇಣುಕಾಚಾರ್ಯ ನೀಡುತ್ತಿದ್ದಾರೆ. ಇದೀಗ ಸರಿಯಾದ ಸಮಯಕ್ಕೆ  ಆಕ್ಸಿಜನ್ ತಂದು ಕೊಟ್ಟು 40 ಸೋಂಕಿತ ಜೀವ ಉಳಿಸಿದ್ದಾರೆ.

ಬಾಣಸಿಗನಾದ ರೇಣುಕಾಚಾರ್ಯ: ಶಾಸಕರಿಂದ ಸೋಂಕಿತರಿಗೆ ಉಪಹಾರ ನೀಡೋ ಕಾರ್ಯ

ಹೌದು... ಆಕ್ಸಿಜನ್ ಕೊರತೆ ಮತ್ತೆ ಮತ್ತೆ ಕಾಡಲಾರಂಭಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ರಾತ್ರೋರಾತ್ರಿ ಆಕ್ಸಿಜನ್  ಖಾಲಿಯಾದ ಹಿನ್ನೆಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇಂದು(ಮಂಗಳವಾರ) ಸಹ ಮತ್ತೆ ಆಮ್ಲಜನಕ ಕೊರತೆ ಸಮಸ್ಯೆ ತಲೆದೋರಿತ್ತು. ಶಾಸಕ ಎಂ.ಪಿ ರೇಣುಕಾಚಾರ್ಯರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ.

ತಾಲೂಕು ಪಂಚಾಯಿತಿಯಲ್ಲಿ ಹೊನ್ನಾಳಿಯ ಅಧಿಕಾರಿಗಳ ಸಭೆಗೆ ಶಾಸಕ ರೇಣುಕಾಚಾರ್ಯ ಅವರು ಆಗಮಿಸುತ್ತಿದ್ದಂತೆ, ಆಸ್ಪತ್ರೆಯಿಂದ ಆಮ್ಲಜನಕ ಖಾಲಿಯಾಗಿದೆ ಎಂಬ ಮಾಹಿತಿ ಬಂದಿದೆ. 

45 ಜನರು ಆಕ್ಸಿಜನ್ ಬೆಡ್ ನಲ್ಲಿದ್ದು, ಕೇವಲ ಒಂದೂವರೆ ಗಂಟೆಗೆ ಆಗುವಷ್ಟು ಮಾತ್ರ ಆಕ್ಸಿಜನ್ ಸಿಲಿಂಡರ್ ಇತ್ತು. ಹೇಗಾದರೂ ಮಾಡಿ ಜನರ ಪ್ರಾಣ ಉಳಿಸಲೇಬೇಕೆಂದು ಪಣ ತೊಟ್ಟ ಶಾಸಕರು ಹರಿಹರದ ದಿ ಸದರನ್ ಗ್ಯಾಸ್ ಸಂಸ್ಥೆಗೆ ಹೋಗುವ ಮಾರ್ಗ ಮಧ್ಯೆ ಜಗಳೂರಿಗೆ ಆಮ್ಲಜನಕ ಸಿಲಿಂಡರ್ ಕೊಂಡೊಯ್ಯಲಾಗುತ್ತಿತ್ತು. 

ಹೊನ್ನಾಳಿಯಲ್ಲಿ ಪರಿಸ್ಥಿತಿ ಗಂಭೀರವಾಗಿದ್ದರ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಜಗಳೂರಿ ಗೆ ಹೋಗುತ್ತಿದ್ದ ಸಿಲಿಂಡರ್ ಗಳನ್ನು ಹೊನ್ನಾಳಿ ಸರ್ಕಾರಿ ಆಸ್ಪತ್ರೆಗೆ ಪೊಲೀಸ್ ಎಸ್ಕಾರ್ಟ್ ಮೂಲಕ ತಂದರು. ಈ ಮೂಲಕ 40 ಸೋಂಕಿತರ ಜೀವ ಕಾಪಾಡಿದರು.

Latest Videos
Follow Us:
Download App:
  • android
  • ios