ಸಿಎಂ ಬಗ್ಗೆ ಬಾಯಿಗೆ ಬಂದಂತೆ ಮಾತನಾಡೋದನ್ನು ನಿಲ್ಲಿಸಿ: ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ
ರಾಜಕೀಯದಲ್ಲಿ 40-50 ವರ್ಷ ಅನುಭವ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಗ್ಗೆ ಪ್ರತಾಪ್ ಸಿಂಹ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ (ಜ.12): ಪ್ರತಾಪ್ ಸಿಂಹ ಬಾಯಿ ಮುಚ್ಚುಕೊಂಡು ಇರಬೇಕು, ಬಾಯಿ ತೆವಲು ಕಡಿಮೆ ಮಾಡಿಕೊಳ್ಳಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಗುಡುಗಿದರು. ತಾಲ್ಲೂಕಿನ ಅಗಲಗುರ್ಕಿ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯತಿ ಕಟ್ಟಡಕ್ಕೆ ಶಂಕು ಸ್ಥಾಪನೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯದಲ್ಲಿ 40-50 ವರ್ಷ ಅನುಭವ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಬಗ್ಗೆ ಪ್ರತಾಪ್ ಸಿಂಹ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಮೋಕ್ ಬಾಂಬ್ ಹಾಕಿದವರಿಗೆ ಪಾಸ್: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ ಹಾಕಿದವರಿಗೆ ಲೋಕಸಭೆಯ ಒಳಗೆ ಪ್ರವೇಶಿಸಲು ಪಾಸ್ ಕೊಟ್ಟಿರುವ ನೀವು ದೇಶದ್ರೋಹಿಗಳಲ್ವಾ, ಉತ್ತರ ಕೊಡಿ. ಒಂದು ವೇಳೆ ಕಾಂಗ್ರೆಸ್ ಎಂಪಿ, ಎಂಎಲ್‌ಎ ಸ್ಮೋಕ್ ಬಾಂಬ್ ಹಾಕಿದವರಿಗೆ ಪಾಸ್ ಕೊಟ್ಟಿದ್ರೆ ನೀವು ಏನ್ ಪಟ್ಟ ಕಟ್ಟುತ್ತಿದ್ರಿ ಎಂದು ಪ್ರಶ್ನಿಸಿದರು. ಕೇಂದ್ರ ಸರ್ಕಾರ ಐದು ಅಕ್ಕಿ ಕೊಡ್ತು ಅಂತ ಹೇಳ್ತಿರಲ್ಲಾ. ಆಹಾರ ಭದ್ರತೆ ಕಾಯ್ದೆ ಜಾರಿಗೆ ಬಂದಿದ್ದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ. ಕೇಂದ್ರ ಕೇಂದ್ರ ಸರ್ಕಾರ ಕರ್ನಾಟಕದ ಜನತೆಗೆ ಭಿಕ್ಷೆ ನೀಡುತ್ತಿಲ್ಲಾ. ಅವರ ಹಕ್ಕನ್ನು ನೀಡುತ್ತಿದೆ. ಅಕ್ಕಿ ಕೊಡಿ ಎಂದು ಕೇಂದ್ರ ಸರ್ಕಾರವನ್ನು ಕೇಳಿದರೆ ಕೊಡಲಿಲ್ಲ. ಬಿಪಿಎಲ್ ಪಡಿತರದಾರರಿಗೆ ಅಕ್ಕಿ ನೀಡಲು ಹಣ ನೀಡುತ್ತಿದ್ದೇವೆ. ಬಿಜೆಪಿಯವರಿಗೆ ನಾಚಿಕೆಯಾಗಬೇಕು ಎಂದರು.
ದೇಶಕ್ಕೆ ಪ್ರಧಾನಿ ಮೋದಿಯವರೇ ಗ್ಯಾರಂಟಿ: ಕೇಂದ್ರ ಸಚಿವ ಕ್ರಿಶನ್ ಪಾಲ್
ಅನುದಾನ ನೀಡುವಲ್ಲಿ ಅನ್ಯಾಯ: ಜಿಎಸ್‌ಟಿ ರೂಪದಲ್ಲಿ ನಾವು 4 ಲಕ್ಷ ಕೋಟಿ ರೆವಿನ್ಯೂ ಕೇಂದ್ರಕ್ಕೆ ಕೊಟ್ಟರೂ, ಅವರು 50 ಸಾವಿರ ಕೋಟಿ ಕೊಡಕ್ಕೂ ಒದ್ದಾಡ್ತಿದ್ದಾರೆ. ಇದರ ಬಗ್ಗೆ ಬಿಜೆಪಿ ಸಂಸದರು ಯಾವತ್ತಾದ್ರೂ ಬಾಯಿಬಿಚ್ಚಿದ್ದಾರಾ. 25 ಜನ ಎಂಪಿಗಳಿದ್ದಾರಲ್ಲಾ ಅವರಿಗೆ ಮರ್ಯಾದೆ ಇದ್ರೆ ಬಾಯಿಬಿಚ್ಚಲಿ. ಈಗ ಲೋಕಸಭಾ ಚುನಾವಣೆ ಬರ್ತಿದೆ ಅದಕ್ಕೆ ಬಾಯಿ ಬಡ್ಕೋತಿದ್ದಾರೆ ಎಂದರು. ನೀವು ಒಂದು ಕಲ್ಲು ಹಾಕಿದ್ರೆ ನಾವು ನಾಲ್ಕು ಕಲ್ಲು ಹಾಕಕ್ಕೂ ಬರುತ್ತೆ. ಪ್ರತಾಪ್ ಸಿಂಹ ನಿಮಗೆ ನಾನು ರಿಕ್ವೆಸ್ಟ್ ಮಾಡುತ್ತಿದ್ದೇನೆ ಎಂದು ತಿಳಿಯಬೇಡಿ, ವಾರ್ನ್ ಮಾಡುತ್ತಿದ್ದೇನೆ, ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ರೆ, ಎಲ್ಲಾ ಕಾಂಗ್ರೆಸ್ ಅಖಾಡವೇ ಬಂದು ಮೈಸೂರಿನ ನಿಮ್ಮ ಮನೆಯ ಮುಂದಿರಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.
ಟಿಕೆಟ್ ಕೊಟ್ಟರೆ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ: ಈ ಸಲ ನೀವು ಲೋಕಸಭಾ ಚುನಾವಣೆಯಲ್ಲಿ ಸೋಲ್ತೀರ ಬಿಡಿ. ಆಮೇಲೆ ಯತೀಂದ್ರಣ್ಣ ಗೆಲ್ತಾರೆ ಎಂದು ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯ ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದರು. ಹೈಕಮಾಂಡ್ ಹೇಳಿದರೆ ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಿದ್ದೇನೆ. ಇಲ್ಲಿ ಮಾಜಿ ಸಚಿವ ಡಾ. ಕೆ ಸುಧಾಕರ್‌ಗೆ ಟಿಕೆಟ್ ಕೊಟ್ಟರೆ, ಕಾಂಗ್ರೆಸ್‌ನಿಂದ ನನಗೆ ಟಿಕೆಟ್ ಕೊಡಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ರಾಜಕಾರಣಕ್ಕಾಗಿ ಬಟ್ಟೆ ಹರಿದುಕೊಳ್ಳದಿರಿ: ಶಾಸಕ ಪ್ರದೀಪ್ ಈಶ್ವರ್
ಲೋಕಸಭಾ ಚುನಾವಣೆಗೆ ಚಿಕ್ಕಬಳ್ಳಾಪುರದಿಂದ ಮಾಜಿ ಸಂಸದ ಡಾ.ಎಂ. ವೀರಪ್ಪ ಮೊಯ್ಲಿ, ಎಐಸಿಸಿ ಯುವ ಕಾಂಗ್ರೆಸ್ ಪ್ರಧಾನ ಖಾರ್ಯದರ್ಶಿ ರಕ್ಷಾ ರಾಮಯ್ಯ, ಡಾ.ಎಂ.ಸಿ.ಬಾಲಾಜಿ, ಮಾಜಿ ಸಚಿವ ಶಿವಶಂಕರರೆಡ್ಡಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ರವಿ ಹೆಸರು ಕೇಳಿ ಬರುತ್ತಿದೆ. ಪಕ್ಷ ಯಾರಿಗೇ ಟಿಕೆಟ್ ನೀಡದರೂ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದರು.