Asianet Suvarna News Asianet Suvarna News

ಗೆಲುವಿನ ಹರಕೆ ತೀರಿಸಿದ ಶಾಸಕ ನಾಗೇಂದ್ರ: ರಾಜಸ್ಥಾನದ ಅಜ್ಮೀರ ದರ್ಗಾಕ್ಕೆ ಭೇಟಿ

ಗೆಲುವಿನ ಹಿನ್ನೆಲೆ ಅಲ್ಪ ಸಂಖ್ಯಾತರ ದೈವವಾಗಿರೋ ಅಜ್ಮೀರ ದರ್ಗಾಕ್ಕೆ ಭೇಟಿ ನೀಡಿ ಪುಷ್ಪ ಚಾದರ್ ಅರ್ಪಿಸಿ ಶಾಸಕ ನಾಗೇಂದ್ರ ಹರಕೆ ತೀರಿಸಿದ್ದಾರೆ. 

mla nagendra visited ajmer dargah in rajasthan after win against sriramulu ash
Author
First Published May 24, 2023, 10:48 AM IST

ಬಳ್ಳಾರಿ (ಮೇ 24, 2023) : ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಗುರು ಶ್ರೀರಾಮುಲು ಅವರನ್ನೇ ಸೋಲಿಸಿ ಅಚ್ಚರಿ ಮೂಡಿಸಿ ಶಾಸಕನಾದ ನಾಗೇಂದ್ರ ಗೆಲುವಿನ ಹರಕೆ ತೀರಿಸಿದ್ದಾರೆ. ರಾಜಸ್ಥಾನದಲ್ಲಿರೋ ಅಜ್ಮೀರ ಸೂಫಿ ಸಂತ ಖ್ವಾಜಾ ಗರೀಬ್ ನವಾಜ್ಗೆ ತೆರಳಿ ಹರಕೆ ತೀರಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರವಾದ ಶ್ರೀರಾಮುಲು ತವರೂರಲ್ಲಿ ಸೋಲಿಸೋದು ಅಷ್ಟು ಸುಲಭವಾಗಿರಲಿಲ್ಲ. ಅಲ್ಪಸಂಖ್ಯಾತರು ನಿರ್ಣಾಯಕ‌ರಾಗಿರೋ ಕ್ಷೇತ್ರವಿದ್ರೂ ಇಲ್ಲಿ ಶ್ರೀರಾಮುಲು ಹೆಸರು ಒಂದು ಬ್ರಾಂಡ್ ಅಗಿತ್ತು. ಈವರೆಗೆ ಇಲ್ಲಿ ಸೋಲದ ಶ್ರೀರಾಮುಲುಗೆ ಇದೀಗ ನಾಗೇಂದ್ರ ಸೋಲಿನ ರುಚಿ ತೋರಿಸಿದ್ದಾರೆ. ಈ ಹಿನ್ನೆಲೆ ಗೆಲುವಿನ ಹಿನ್ನೆಲೆ ಅಲ್ಪ ಸಂಖ್ಯಾತರ ದೈವವಾಗಿರೋ ಅಜ್ಮೀರ ದರ್ಗಾಕ್ಕೆ ಭೇಟಿ ನೀಡಿ ಪುಷ್ಪ ಚಾದರ್ ಅರ್ಪಿಸಿ ಶಾಸಕ ನಾಗೇಂದ್ರ ಹರಕೆ ತೀರಿಸಿದ್ದಾರೆ. 

ಇದನ್ನು ಓದಿ: ಶ್ರೀರಾಮುಲು ಅವರಂತ ದೊಡ್ಡ ನಾಯಕನನ್ನು ಸೋಲಿಸಿರುವೆ, ನಾನು ಮಂತ್ರಿ ಆಕಾಂಕ್ಷಿ: ನಾಗೇಂದ್ರ

ಶಾಸಕ ನಾಗೇಂದ್ರ ಅವರಿಗೆ ಆಂಧ್ರ ಸಚಿವ ಸಹೋದರ ಗುಮ್ಮನೂರು ಜಯರಾಂ ಸಾಥ್ ಕೊಟ್ಟಿದ್ದಾರೆ. ಅಜ್ಮೀರ ದರ್ಶನ ಬಳಿಕ ಇದೀಗ ದೆಹಲಿಗೆ ತೆರಳಿರೋ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ ಸಚಿವ ಸ್ಥಾನಕ್ಕೆ ಲಾಬಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 

ಮಂತ್ರಿ ಸ್ಥಾನದ ಆಕಾಂಕ್ಷಿ: ನಾಗೇಂದ್ರ
ಶ್ರೀರಾಮುಲು ಅವರಂತ ದೊಡ್ಡ ನಾಯಕನನ್ನು ಸೋಲಿಸಿರುವೆ. ಇವರನ್ನ ಸೋಲಿಸಿ ಬಂದ್ರೇ ಉನ್ನತ ಸ್ಥಾನ ಕೊಡೋದಾಗಿ ದೆಹಲಿಯ ನಾಯಕರು ಹೇಳಿದ್ರು. ನಾನು ಮಂತ್ರಿ ಆಕಾಂಕ್ಷಿಯಾಗಿದ್ದೇನೆ ಅಂತ  ಶಾಸಕ ನಾಗೇಂದ್ರ ಫಲಿತಾಂಶ ಬಂದ ಬಳಿಕವೇ ಹೇಳಿಕೊಂಡಿದ್ದರು. 

ಇದನ್ನೂ ಓದಿ: Karnataka Election Result 2023: ಬಳ್ಳಾರಿಗೆ ಜನರಿಗೆ ಕೊಟ್ಟ ಮಾತು ಈಡೇರಿಸುತ್ತಾರಾ ರಾಹುಲ್ ಗಾಂಧಿ

ಸುವರ್ಣ ನ್ಯೂಸ್ ಜತೆ ಮಾತನಾಡಿದ್ದ ನಾಗೇಂದ್ರ ಅವರು, ನನ್ನ ವಿರುದ್ಧ ಗೆಲ್ಲಲು ಶ್ರೀರಾಮುಲುಗೆ ನೂರು ಕೋಟಿ ಖರ್ಚು ಮಾಡಿದ್ರು ಜನರು ಹಣದ ಅಮಿಷಕ್ಕೆ ಒಳಗಾಗದೇ ನನ್ನ ಕೈ ಹಿಡಿದಿದ್ದಾರೆ. ಹಣದ ಮೂಲಕ ನಮ್ಮ ಕಾರ್ಯಕರ್ತರು, ನಾಯಕರನ್ನು ಖರೀದಿ ಮಾಡಲು ಹೋದ್ರು. ಆದ್ರೆ ಯಾರು ಕೂಡ ಹಣ‌ ಮುಟ್ಟಲಿಲ್ಲ.  ತೆಗೆದುಕೊಂಡವರು ಕೂಡ ವಾಪಸ್ ಕೊಟ್ರು. ಆದರೂ, ವೈಯಕ್ತಿಕವಾಗಿ ಶ್ರೀರಾಮುಲು ಸೋಲು ನೋವು ತಂದಿದೆ ಅಂತ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ ತಿಳಿಸಿದ್ದಾರೆ. 

ನನ್ನ ಗೆಲುವಿಗಾಗಿ ಹೋರಾಟ ಮಾಡಿದ್ದೇನೆ. ಆದ್ರೆ ಶ್ರೀರಾಮುಲು ಕ್ಷೇತ್ರ ಆಯ್ಕೆ ವಿಚಾರದಲ್ಲಿ ಎಡವಿದ್ರು. ಖಂಡಿತವಾಗಿ ಈ ಬಾರಿ ನಾನು ಸಚಿವ‌ನಾಗ್ತೇನೆ ಎಂದು ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಇದೆ. ದೊಡ್ಡ ಅವಕಾಶ ಕೊಡ್ತಾರೆ ಎನ್ನುವ ವಿಶ್ವಾಸವಿದೆ. ರಾಹುಲ್ ಗಾಂಧಿ ಎಲ್ಲಿ ಹೋಗಿ ಪ್ರಚಾರ ಮಾಡಿದ್ರು ಗೆಲ್ತಾರೆ. ಅವರ ಕಾಲ್ಗುಣ ಚೆನ್ನಾಗಿದೆ. ದೇಶದಲ್ಲಿ ಅವರು ಉನ್ನತ ಸ್ಥಾನ ಅಲಂಕರಿಸುತ್ತಾರೆ ಎಂದು ಸಹ ಶಾಸಕ ನಾಗೇಂದ್ರ ಹೇಳಿದ್ದು, ಅಧಿಕಾರಕ್ಕೆ ಬಂದ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದಿದ್ದಾರೆ. 

ಇದನ್ನೂ ಓದಿ: 'ಕೈ'ಗೆ ಕಣ್ಮುಚ್ಚಿ ಮತ ಹಾಕ್ರಿ, ನಾನು ಈ ಮಣ್ಣಿನ ಮಗ ನನ್ನ ಮರ್ಯಾದೆ ಉಳುಸ್ರಿ: ಖರ್ಗೆ

Follow Us:
Download App:
  • android
  • ios