ಜೆಡಿಎಸ್‌ ಅಭಿವೃದ್ಧಿ ಕೆಲಸಕ್ಕೆ ಸಿಎಂ ಉದ್ಘಾಟನೆ: ಎಚ್‌.ಡಿ.ರೇವಣ್ಣ ಆರೋಪ

ಯಾವುದೋ ಗ್ಯಾರಂಟಿ ಯೋಜನೆ ಇಟ್ಟುಕೊಂಡು ಉಳಿದ ಎಲ್ಲಾ ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆ. ಜೆಡಿಎಸ್‌ ಮಾಡಿದ ಅಭಿವೃದ್ಧಿ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಟೇಪ್ ಕತ್ತರಿಸಿ ಉದ್ಘಾಟನೆ ಮಾಡುತ್ತಾರೆ.

Mla HD Revanna Slams On CM Siddaramaiah At Hassan gvd

ಹಾಸನ (ಫೆ.25): ಯಾವುದೋ ಗ್ಯಾರಂಟಿ ಯೋಜನೆ ಇಟ್ಟುಕೊಂಡು ಉಳಿದ ಎಲ್ಲಾ ಅಭಿವೃದ್ಧಿ ಕೆಲಸಗಳು ಶೂನ್ಯವಾಗಿದೆ. ಜೆಡಿಎಸ್‌ ಮಾಡಿದ ಅಭಿವೃದ್ಧಿ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದು ಟೇಪ್ ಕತ್ತರಿಸಿ ಉದ್ಘಾಟನೆ ಮಾಡುತ್ತಾರೆ. ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ಈ ಸರ್ಕಾರರ ತಂದಿದೆ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು. ನಗರದ ಡೈರಿ ವೃತ್ತದಲ್ಲಿರುವ ಶ್ರೀಮತಿ ಎಲ್ ವಿ.(ಸರ್ಕಾರಿ) ಪಾಲಿಟೆಕ್ನಿಕ್ ೭೫ನೇ ವರ್ಷದ ಅಮೃತಮಹೋತ್ಸವ ಹಾಗೂ ಹಳೆಯ ವಿದ್ಯಾರ್ಥಿ ಮತ್ತು ಕ್ರೀಡಾ ಸಂಘದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಓದಿದ ಶ್ರೀಮತಿ ಎಲ್.ವಿ. ಸರಕಾರಿ ಪಾಲಿಟೆಕ್ನಿಕ್ ಕಾಲೇಜನ್ನು ರಾಜ್ಯ ಮತ್ತು ದೇಶದಲ್ಲೆ ಮೊದಲ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ರೇವಣ್ಣ ಭರವಸೆ ನೀಡಿದರು. ಹಾಸನ ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪ್ರಸ್ತುತ ೧೨೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅರಸೀಕೆರೆಯ ವೆಂಕಟಸ್ವಾಮಿ ಕುಟುಂಬ ೪೦ ಎಕರೆ ಭೂಮಿಯನ್ನು ದಾನವಾಗಿ ಕೊಟ್ಟು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ದೊರಕಲು ಅನುಕೂಲ ಮಾಡಿಕೊಟ್ಟರು. ಈ ದೇಶಕ್ಕೆ ಸ್ವಾತಂತ್ರ ಬಂದು ೭೫ ವರ್ಷಗಳಾದರೂ ಉತ್ತಮವಾದ ಶಿಕ್ಷಣ ಮತ್ತು ಮೂಲಭೂತ ಸೌಕರ್ಯ ಕೊಡುವಲ್ಲಿ ಸಂಪೂರ್ಣ ಶಿಕ್ಷಣ ಕೊಡುವಲ್ಲಿ ಸಂಪೂರ್ಣ ಸರ್ಕಾರವು ವಿಫಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಯೋಧ್ಯೆ ರೈಲಿಗೆ ಬೆಂಕಿ ಹಚ್ತೇವೆ ಅಂದವರನ್ನು ಒದ್ದು ಒಳಗೆ ಹಾಕಿ: ಪ್ರಲ್ಹಾದ್ ಜೋಶಿ

‘ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅನೇಕ ಕಾಲೇಜು ಕೊಡಲಾಯಿತು. ನಾನು ಇಂಧನ ಸಚಿವ ಆಗಿದ್ದಾಗ ಹಾಸನಕ್ಕೆ ಐನೂರು ಕಂಪ್ಯೂಟರ್ ಕೊಡಿಸಲಾಯಿತು. ಕುಮಾರ್ ಸ್ವಾಮಿ ಅವರ ಆಡಳಿತದಲ್ಲಿ ಶೈಕ್ಷಣಕ್ಕೆ ಹೆಚ್ಚಿನ ಪ್ರೋತ್ಸಹ ಕೊಡಲಾಯಿತು. ಈಗಿನ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು. ಒಬ್ಬ ಟೀಚರ್ ನೇಮಕ ಮಾಡಲು ಇನ್ನು ಆಗಿಲ್ಲ. ಯಾವುದೋ ಗ್ಯಾರಂಟಿ ಯೋಜನೆ ಕೊಟ್ಟು ಉಳಿದ ಯಾವ ಅಭಿವೃದ್ಧಿ ಮಾಡುತ್ತಿಲ್ಲ’ ಎಂದು ದೂರಿದರು. ‘ನಮ್ಮ ಆಡಳಿತದಲ್ಲಿ ಈ ಜಿಲ್ಲೆಯಲ್ಲಿ ಇಪ್ಪತ್ತು ಕಾಲೇಜು ಮಾಡಿಕೊಡಲಾಯಿತು. ಪ್ರಸ್ತುತದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ನನ್ನ ಒತ್ತಾಯವಾಗಿದೆ. 

ಯಾವ ಅಪರಾಧ ಮಾಡದಿದ್ದರೂ ನನ್ನ ಮೇಲೆ ಮೂರು ತರಹದ ತನಿಖೆ ಮಾಡಿದರು. ರಾಜ್ಯ ಸರ್ಕಾರವು ಆರೋಗ್ಯಕರ ಚಿಂತನೆ ಮಾಡದೇ ಹೋದರೇ ಈಗಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲೆಗಳು ಬಾಗಿಲು ಮುಚ್ಚುವ ಪರಿಸ್ಥಿತಿ ಬರುತ್ತದೆ’ ಎಂದು ಎಚ್ಚರಿಸಿದರು. ಇಡೀ ರಾಜ್ಯ, ಭಾರತದಲ್ಲಿ ಈ ಎಲ್.ವಿ. ಪಾಲಿಟೆಕ್ನಿಕ್ ಕಾಲೇಜನ್ನು ನಂಬರ್ ಒನ್ ಸ್ಥಾನಕ್ಕೆ ತರುತ್ತೇನೆ. ಸರಕಾರಿ ಶಿಕ್ಷಣ ಸಂಸ್ಥೆ ಇಂದು ಖಾಸಗಿ ಹಿಡಿತದಲ್ಲಿ ಇದೆ. ಈ ಕಾಲೇಜನ್ನು ಮಾದರಿ ಕಾಲೇಜು ಆಗಿ ಮಾಡೆ ಮಾಡುತ್ತೇನೆ ಎಂದು ಪಣತೊಟ್ಟರು. ಈ ಕಾಲೇಜಿಗೆ ಐವತ್ತು ಕೋಟಿ ಖರ್ಚು ಮಾಡಿ ಅಭಿವೃದ್ಧಿ ಮಾಡಲಾಗುವುದು. ನಾಲ್ಕು ಪಥದ ರಸ್ತೆ ರೆಡಿ ಇದ್ದು, ಹೊಸ ಬಸ್ ನಿಲ್ದಾಣ ದಿಂದ ಹೊಸಕೊಪ್ಪಲುವರೆಗೆ ಮಾಡಲಾಗುವುದು ಎಂದರು.

ನಮ್ಮ ನಿಷ್ಠೆ ಎದೆ ಬಗೆದು ತೋರಿಸಲು ಆಗೋದಿಲ್ಲ: ಸಿ.ಟಿ.ರವಿ

ಶಾಸಕ ಎಚ್.ಪಿ. ಸ್ವರೂಪ್, ಶ್ರೀಮತಿ ಎಲ್ ವಿ. (ಸರ್ಕಾರಿ) ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲೆ ಎಸ್.ಬಿ. ವೀಣಾ, ರಿಜಿಸ್ಟರ್ ಎಸ್. ವಿಜಯಶ್ರೀ, ಸ್ಮೃತಿ ಮಂದಾರ ಅಲ್ಯುಮ್ನಿ ಅಸೋಸಿಯೇಷನ್ ಅಧ್ಯಕ್ಷ ಹೆಚ್.ಎಸ್. ಜಗದೀಶ್, ಸಂಸ್ಥಾಪಕ ಅಧ್ಯಕ್ಷ ಮೇಜರ್ ವೆಂಕಟೇಶ್, ಸಿವಿಲ್ ವಿಭಾಗಧಿಕಾರಿ ಡಿ .ಕುಮಾರ್, ಉಪನ್ಯಾಸಕರಾದ ಲೋಕೇಶ್, ಡಾ. ಬಿ.ವಿ. ಮಧು, ಎಚ್.ಪಿ. ಚಂದನ್, ನಟರಾಜು, ಪಾಂಡುರಂಗ, ಜವರಪ್ಪ, ಸತ್ಯನಾರಾಯಣ್, ಅರುಣ್ ದಾಸ್, ಸಿ,ಜೆ. ಪ್ರಕಾಶ್, ನಾಗರಾಜು, ಹನುಮಂತರಾಯ್, ಕಾಳೇಗೌಡ, ಆನಂದ್ ಪೂಜಾರ್ ಇದ್ದರು. ಸುಧಾಮಣಿ ಸ್ವಾಗತಿಸಿದರು. ಕಾಲೇಜು ಸಿಬ್ಬಂದಿ ರೇಖಾ ಪ್ರಾರ್ಥಿಸಿದರು.

Latest Videos
Follow Us:
Download App:
  • android
  • ios