ಗ್ಯಾರಂಟಿ ಯೋಜನೆಗಾಗಿ ಶಾಸಕರ ಅನುದಾನ ಸ್ಥಗಿತ: ಡಿಸಿಎಂ ಡಿ.ಕೆ. ಶಿವಕುಮಾರ್‌ ಸ್ಪಷ್ಟನೆ

ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದ್ದರಿಂದ ಶಾಸಕರು 10 ಕೋಟಿ ರೂ.ಗಳಿಂದ 300 ಕೋಟಿ ರೂ. ಅನುದಾನ ಕೇಳಿದರೆ ಕೊಡಲು ಸಾಧ್ಯವಿಲ್ಲ ಎಂದು ಡಿಸಿಎಂ ಶಿವಕುಮಾರ್‌ ಹೇಳಿದ್ದಾರೆ.

MLA grant freeze for guarantee scheme DCM DK Sivakumar clarification sat

ಬೆಂಗಳೂರು (ಜು.25):  ರಾಜ್ಯದಲ್ಲಿ ಶಾಸಕರು ಭಾರಿ ಆಸೆಯಲ್ಲಿದ್ದಾರೆ. ಕ್ಷೇತ್ರದ ಜನರಿಗೆ ಕೊಟ್ಟ ಮಾತುಗಳನ್ನು ಈಡೇರಿಸಬೇಕು ಎಂದು ಶಾಸಕರು 10 ಕೋಟಿ ರೂ.ಗಳಿಂದ 300 ಕೋಟಿ ರೂ.ವರೆಗೆ ತಮ್ಮ ಕ್ಷೇತ್ರಗಳಿಗೆ ಅನುದಾನ ಕೇಳುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕಾಗಿದ್ದರಿಂದ ಕೇಳಿದಷ್ಟು ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಶಾಸಕರೂ ಕೂಡ ಸಚಿವರ ಮೇಲೆ ಆರೋಪ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನು ಬರೆದಿಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಶಾಸಕರು, ಸಚಿವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಇದೆಲ್ಲಾ ಊಹಾಪೋಹ ಆಗಿದೆ. ನಮಗೂ ಸ್ವಲ್ಪ ಕೆಲಸಗಳಿವೆ. ಸಚಿವ ಸಂಪುಟ ಸಭೆ, ಶಾಸಕಾಂಗದ ಸಭೆ ಮಾಡುತ್ತಿದ್ದೇವೆ. ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡಲಾಗುತ್ತಿದ್ದು, ಯಾವುದೇ ಭ್ರಷ್ಟಾಚಾರ ಇಲ್ಲದೇ ಯೋಜನೆಗಳು ನಡೆಯುತ್ತವೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಬೇಕಾಗಿದೆ ಎಂದರು.

Karnataka Govt Topple: ಡಿ.ಕೆ. ಶಿವಕುಮಾರ್ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ: ಬಿಜೆಪಿ ಟೀಕೆ

ಇನ್ನು ಶಾಸಕರು ಕೆಲವು ಎಲ್ಲ ಶಾಸಕರು ಭಾರಿ ಆಸೆಯಲ್ಲಿದ್ದಾರೆ. ನಾವು ಕ್ಷೇತ್ರದ ಜನರಿಗೆ ಆ ಭರವಸೆ ಕೊಟ್ಟಿದ್ದೇವೆ, ಈ ಭರವಸೆಗಳನ್ನು ಈಡೇರಿಸಲು 10 ಕೋಟಿ ರೂ. ಕೊಡಿ, 100 ಕೋಟಿ ರೂ. ಕೊಡಿ, 300  ಕೋಟಿ ರೂ. ಅನುದಾನಗಳನ್ನು ಕೊಡಿ ಎಂದು ಕೇಳುತ್ತಿದ್ದಾರೆ. ಆದರೆ, ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕಾಗಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಅನುದಾನ ಕೊಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಶಾಸಕರೂ ಕೂಡ ತಡೆದುಕೊಳ್ಳಬೇಕು. ಅನುದಾನಕ್ಕಾಗಿ ಒಂದು ವರ್ಷ ಕಾಯುವುದು ಅನಿವಾರ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ. 

ಈಗ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಕೆಲವೆಡೆ ಸಮಸ್ಯೆ ಆಗುತ್ತಿದೆ. ಬಹಳಷ್ಟು ಜನರು ಹೊಸದಾಗಿ ಶಾಸಕರಾಗಿದ್ದೀರಿ, ಮಳೆಗಾಲದ ಅವಧಿಯಲ್ಲಿ ಸಮಸ್ಯೆ ಉಲ್ಬಣಗೊಂಡ ಪ್ರದೇಶಗಳಿಗೆ ಪ್ರವಾಸ ಮಾಡಿ ಜನರರೊಂದಿಗೆ ಚರ್ಚೆ ಮಾಡುವ ಕೆಲಸವನ್ನು ಮಾಡಿ. ನಮ್ಮ ಶಾಸಕರಿಗೆ ಈಗ ಮಾರ್ಗದರ್ಶನ ಮಾಡುತ್ತಿದ್ದೇವೆ. ಇನ್ನು ಕೆಲವು ಶಾಸಕರು ಅಧಿಕಾರಿಗಳ ಬಗ್ಗೆ ಮನವಿ ಮಾಡಿದ್ದರು. ಆದರೆ, ಈ ಬಗ್ಗೆ ಮತ್ತೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Latest Videos
Follow Us:
Download App:
  • android
  • ios