Asianet Suvarna News Asianet Suvarna News

ಮಗನಿಗೆ ಟಿಕೆಟ್‌ ಸಿಗದಿದ್ರೆ ಈಶ್ವರಪ್ಪ 2ನೇ ಯತ್ನಾಳ್: ಶಾಸಕ ಬೇಳೂರು ಗೋಪಾಲಕೃಷ್ಣ

ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಜ.12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. 

Mla Beluru Gopalakrishna Slams On KS Eshwarappa At Shivamogga gvd
Author
First Published Jan 12, 2024, 10:23 PM IST

ಶಿವಮೊಗ್ಗ (ಜ.12): ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಜ.12 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಯುವನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್, ಮಧುಬಂಗಾರಪ್ಪ, ಡಾ.ಎಂ.ಸಿ ಸುಧಾಕರ್ ಸೇರಿದಂತೆ ಸಚಿವ ಸಂಪುಟದ ಸಚಿವರು ಭಾಗವಹಿಸಲಿದ್ದಾರೆ ಎಂದರು.

ಮೂವರು ಡಿಸಿಎಂ ವಿಚಾರವಾಗಿ ಈಶ್ವರಪ್ಪ ಅವರು ದಿನ ಕೊರಗುತ್ತಾ, ಒಂದಿಷ್ಟು ಬೊಗಳುತ್ತಾ ಇದ್ದಾರೆ. ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳೋ ಹಾಗೆ ಈಶ್ವರಪ್ಪ ಎಲ್ಲೂ ಕೇಸ್ ಹಾಕಿಸಿಕೊಂಡವರಲ್ಲ‌. ಈಗ ಡಿಸಿಎಂ ವಿಚಾರಕ್ಕೆ ಜಿಲ್ಲೆಗೊಂದು ಡಿಸಿಎಂ ಮಾಡಿ ಎಂದು ಹೇಳಿದ್ದಾರೆ. ನಿಮ್ಮ ಕಾಲದಲ್ಲಿ ಮೂವರು ಡಿಸಿಎಂ ಇರಲಿಲ್ಲವಾ. ನೀವು ಡಿಸಿಎಂ ಮಾಡಬಹುದು ನಾವು ಮಾಡುವ ಹಾಗಿಲ್ವಾ. ಸುಮ್ಮನೆ ಮಾತಾಡೋದು ಅವರಿಗೆ ಚಟ. ಹಾಗಾಗೀ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

ರಾಜಕಾರಣಕ್ಕಾಗಿ ಬಟ್ಟೆ ಹರಿದುಕೊಳ್ಳದಿರಿ: ಶಾಸಕ ಪ್ರದೀಪ್ ಈಶ್ವರ್

ಯಡಿಯೂರಪ್ಪ ಮಗ ರಾಜ್ಯಾಧ್ಯಕ್ಷರಾಗಿದ್ದಕ್ಕೆ ಈಶ್ವರಪ್ಪ ಒಲಿಸುತ್ತಿದ್ದಾರೆ. ಮಗನ ಹಾವೇರಿ ಟಿಕೆಟ್ ಗಾಗಿ ಹೀಗೆ ಮಾಡ್ತಿದ್ದಾರೆ. ಮಗನಿಗೆ ಟಿಕೆಟ್ ಕೊಟ್ಟಿಲ್ಲ ಎಂದರೇ ನಾಳೆನೇ ಬುಶ್ ನಾಗಪ್ಪ ಆಗ್ತಾರೆ. ಈಶ್ವರಪ್ಪ ಸೆಕೆಂಡ್ ಯತ್ನಾಳ್ ಆಗ್ತಾರೆ. ಈಗ ಟಿಕೆಟ್ ಸಿಗುತ್ತೇ ಅನ್ನೊ ಕಾರಣಕ್ಕೆ ಹತ್ರಾ ಹೋಗ್ತಿದ್ದಾರೆ.ಹಿರಿಯರಾದ ಈಶ್ವರಪ್ಪ ಸರ್ಕಾರದ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಲಿ ಎಂದು ಖಾರವಾಗಿ ಹೇಳಿದರು.

ವಿಜಯೇಂದ್ರ ಈಗ ರಾಜ್ಯಾಧ್ಯಕ್ಷರಾಗಿದ್ದಾರೆ. ಅಪ್ಪನ ಆಶೀರ್ವಾದದಿಂದ ರಾಜ್ಯಾಧ್ಯಕ್ಷರಾಗಿದ್ದಾರೆ. ರಾಜ್ಯಾಧ್ಯಕ್ಷನಾಗಿದ್ದೀನಿ ಅಂತಾ ಪುಲ್ ಆಕ್ಟೀವ್ ಆಗಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ 28 ಸ್ಥಾನ ಗೆಲ್ತೀವಿ ಅಂತಾ ಹೇಳಿದ್ದಾರೆ. 28ಸ್ಥಾನ ಬರದೇ, ಒಂದು ಸ್ಥಾನ ಕಡಿಮೆಯಾದ್ರೂ ಇವರು ರಾಜೀನಾಮೆ ಕೊಡ್ತಾರಾ? ಬರದ ಬಗ್ಗೆ ಮಾತನಾಡಲು ಆರ್‌.ಅಶೋಕ್ ಅವರಿಗೆ ಯಾವ ಯೋಗ್ಯತೆ ಇದೆ. ಅವರು ಅಧಿಕಾರದಲ್ಲಿ ಇದ್ದಾಗ ಬರ ಪರಿಹಾರ ಕೊಟ್ಟಿದ್ರಾ? ಈಗ ಮಾತಾನಾಡೋಕೆ ಹೊರಟಿದ್ದೀರಲ್ಲಾ. ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕೊಟ್ರೆ ದಿವಾಳಿ ಅಂತೀರಾ. ಈಗ ಮೋದಿ ಗ್ಯಾರಂಟಿ ಕೊಟ್ರೆ ದೇಶ ಹಾಳಾಗಲ್ವ ಎಂದು ಪ್ರಶ್ನಿಸಿದರು.

ಬಿ.ಕೆ.ಹರಿಪ್ರಸಾದ್‌ಗೆ ಮಂಪರು ಪರೀಕ್ಷೆ ಮಾಡಬೇಕು ಅಂತಾ ಹೇಳ್ತಾ ಇದ್ದಾರೆ. ಕೋವಿಡ್ ಹಗರಣದಲ್ಲಿ ವಿಜಯೇಂದ್ರಗೆ ಮೊದಲು ಮಂಪರು ಪರೀಕ್ಷೆ ಮಾಡಿಸಬೇಕು. ಇವರು ಎಷ್ಟು ಹಣ ತಿಂದಿದ್ದಾರೆ ಎಂದು ಮಂಪರು ಪರೀಕ್ಷೆ ಮಾಡಬೇಕು. ನಾವು ಹರಿಪ್ರದ್ದ್‌ಗೆ ಮಂಪರು ಪರೀಕ್ಷೆ ಮಾಡಿಸುತ್ತೀವಿ ನೀವು ರೆಡಿ ಇದ್ದೀರಾ. 40 ಸಾವಿರ ಕೋಟಿ ಹಣ ಸಂಬಂಧ ಇವರು ಪರೀಕ್ಷೆ ಮಾಡಿಸಿಕೊಳ್ತಾರಾ. ಅವರದ್ದೇ ಶಾಸಕರು ವಿಜಯೇಂದ್ರ ಬಗ್ಗೆ ಮಾತನಾಡ್ತಿದ್ದಾರೆ. ಇವರು ನಮ್ ಬಗ್ಗೆ ಮಾತಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಬಿ.ಕೆ.ಸಂಗಮೇಶ್ವರ ಮಾತನಾಡಿ, ಮೋದಿ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಕೇವಲ ಕೋಮು ಭಾವನೆಗಳನ್ನು ಕೆರಳಿಸಿ ಅಧಿಕಾರದಲ್ಲಿದೆ. ರಾಜ್ಯ ಸರ್ಕಾರ 5 ಗ್ಯಾರಂಟಿಗಳಲ್ಲಿ ಜನರಿಗೆ ತಲುಪಿಸಿ ಉತ್ತಮ ಆಡಳಿತ ನೀಡಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕ್ರಮ ಆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಹೋಗುತ್ತಿಲ್ಲ. ನಮ್ಮ ಆತ್ಮದಲ್ಲಿ ಶ್ರೀ ರಾಮನಿದ್ದಾನೆ. ಇಲ್ಲಿಂದಲೇ ಕೈ ಮುಗಿಯುತ್ತೇವೆ ಎಂದರು.

ಭ್ರಷ್ಟಾಚಾರದಿಂದ ನೆಮ್ಮದಿಯ ಬದುಕಿಲ್ಲ: ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಪಕ್ಷ ವಿರೋಧ ಚಟುವಟಿಕೆ ಹಿನ್ನೆಲೆ ಚಂದ್ರೇಗೌಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ನನ್ನ ವಿರುದ್ಧ ಆರೋಪ ಮಾಡಕ್ಕೆ ಬಂದಿರುವವರೆಲ್ಲ ಕಳ್ಳರು. ಆ ವಿಚಾರ ಪ್ರಸ್ತಾಪಿಸಬೇಡಿ ಅವರ್ಯಾರು ದೊಡ್ಡ ಮನುಷ್ಯರಲ್ಲ. ಜಾತ್ಯತೀತ ಪ್ರಸ್ತಾಪ ಮಾಡುತ್ತಿದ್ದ ಜೆಡಿಎಸ್ ನವರು ಕೋಮುವಾದಿ ಬಿಜೆಪಿ ಜೊತೆ ಸೇರಿಕೊಂಡಿದ್ದಾರೆ. ಜೆಡಿಎಸ್ ನವರು ದೊಡ್ಡ ಕೋಮುವಾದಿಗಳು ಎಂದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್,ಪ್ರಮುಖರಾದ ಎಂ.ಶ್ರೀಕಾಂತ್, ಎನ್.ರಮೇಶ್ ಮತ್ತಿತರರು ಇದ್ದರು.

Follow Us:
Download App:
  • android
  • ios