ಕರ್ನಾಟಕ ಭ್ರಷ್ಟರಾಜ್ಯ ಆಗುತ್ತಿದೆ, ರಾಜಕೀಯ ವ್ಯವಸ್ಥೆ ಬೇಸರ ತಂದಿದೆ: ಶಾಸಕ ಬಸವರಾಜ ರಾಯರೆಡ್ಡಿ

ಕರ್ನಾಟಕ ಭ್ರಷ್ಟರಾಜ್ಯ ಆಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಮಾನ ಮರ್ಯಾದೆ ಹಾಳಾಗುತ್ತಿದೆ. ಇದರ ಬಗ್ಗೆ ನನಗೂ ನೋವಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಸಿಎಂ ಕೆಲಸ ಮಾಡಬೇಕು. ಇದರಿಂದ ಕರ್ನಾಟಕಕ್ಕೆ ಕೆಟ್ಟಹೆಸರು ಬರುತ್ತಿದೆ ಎಂದು ಹಿರಿಯ ಕಾಂಗ್ರೆಸ್‌ ಧುರೀಣ, ಶಾಸಕ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.

Mla Basavaraj Rayareddy Slams On Congress Govt gvd

ಕೊಪ್ಪಳ (ಆ.13): ಕರ್ನಾಟಕ ಭ್ರಷ್ಟ ರಾಜ್ಯ ಆಗುತ್ತಿದೆ. ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಮಾನ ಮರ್ಯಾದೆ ಹಾಳಾಗುತ್ತಿದೆ. ಇದರ ಬಗ್ಗೆ ನನಗೂ ನೋವಿದೆ. ಇದನ್ನು ತೊಲಗಿಸುವ ನಿಟ್ಟಿನಲ್ಲಿ ಸಿಎಂ ಕೆಲಸ ಮಾಡಬೇಕು. ಇದರಿಂದ ಕರ್ನಾಟಕಕ್ಕೆ ಕೆಟ್ಟಹೆಸರು ಬರುತ್ತಿದೆ ಎಂದು ಹಿರಿಯ ಕಾಂಗ್ರೆಸ್‌ ಧುರೀಣ, ಶಾಸಕ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಕಾರ್ಯಕರ್ತರು, ಪ್ರಮುಖರಿಗೆ ಔತಣಕೂಟ ಏರ್ಪಡಿಸಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ತಡೆಗಟ್ಟುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಷ್ಟುಹೆಚ್ಚು ಸೂಕ್ತ, ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ಗುತ್ತಿಗೆದಾರರ ಸಂಘದಿಂದ ಶೇ.15ರಷ್ಟು ಕಮಿಷನ್‌ ಆರೋಪ ಕೇಳಿ ಬಂದಿದೆ. ಈ ಹಿಂದೆ ಬಿಜೆಪಿಯಲ್ಲಿ ಶೇ.40 ಕಮಿಷನ್‌ ಆರೋಪ ಮಾಡಿದ್ದರು. ಈಗ ಶೇ.15ರಷ್ಟು ಕಮಿಷನ್‌ ಎಂದು ಆರೋಪ ಮಾಡುತ್ತಿದ್ದಾರೆ ಎಂದು ವಿಷಾಧಿಸಿದರು.

ಮೋದಿ 3ನೇ ಬಾರಿ ಪ್ರಧಾನಿ ಆಗ್ತಾರೆ: ಸಂಸದ ಮುನಿಸ್ವಾಮಿ

ಚುನಾವಣೆ ವ್ಯವಸ್ಥೆ ಸಹ ಹದಗೆಟ್ಟಿದೆ. ನಾಮಪತ್ರ ನೀಡುವ ದಿನದಿಂದಲೇ ರಾಜಕೀಯ ವ್ಯವಸ್ಥೆ ಹದಗೆಡುತ್ತಿದೆ. ಈ ಬಗ್ಗೆ ಸಿಎಂ, ಪ್ರಧಾನಿ ಗಮನಕ್ಕೆ ತಂದಿದ್ದೇನೆ. ಇದು ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗಬೇಕು. ಚುನಾವಣೆ ಎಂಬುದು ಒಂದು ಭ್ರಷ್ಟಾಚಾರ ಆಗಿದೆ ಎಂದರು. ವರ್ಗಾವಣೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಸಚಿವರು ಕ್ಲಾಸ್‌ ಒಂದರಿಂದ ಉಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು. ಈ ಬಗ್ಗೆ ಸಿಎಂಗೆ ಪತ್ರ ಬರೆಯುತ್ತಿದ್ದೇನೆ. ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಮಾಡಬೇಕು ಎಂದರು.

ಎಂಪಿ ಚುನಾವಣೆಗೆ ನಿಲ್ಲಲ್ಲ: ಔತಣಕೂಟದ ಬಗ್ಗೆ ಯಾರು ಏನೇ ಅಂದುಕೊಂಡರೂ ಅದು ತಪ್ಪು. ನಾನು ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ. ಔತಣಕೂಟಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ. ಈ ಹಿಂದೆಯೂ ನಾನು ಸಾರ್ವಜನಿಕರು, ಮುಖಂಡರು, ಅಧಿಕಾರಿಗಳಿಗೆ ಔತಣಕೂಟ ನೀಡಿದ್ದೇನೆ ಎಂದರು. ಈಗಾಗಲೇ ನಾನು 12 ಚುನಾವಣೆ ಎದುರಿಸಿದ್ದೇನೆ. ಈ ರೀತಿಯ ಪ್ರಸ್ತುತ ಚುನಾವನೆಗಳು ನನಗೆ ಬೇಸರ ತಂದಿವೆ. ಇನ್ನು ಮುಂದೆ ನಾನು ಚುನಾವಣೆಗೆ ನಿಲ್ಲುವುದಿಲ್ಲ. ರಾಜಕೀಯ ವ್ಯವಸ್ಥೆ ನನಗೆ ಬೇಸರ ತಂದಿದೆ. 

ಸಿಪಿಸಿ ತಿದ್ದುಪಡಿ ಮೂಲಕ ಬಡವರ ಪ್ರಕರಣ ವಿಲೇವಾರಿ ಮಾಡಬೇಕು: ಸಚಿವ ಎಚ್‌.ಕೆ.ಪಾಟೀಲ್‌

ಲೋಕಸಭೆಗೆ ನಾನು ನಿಂತರೆ ಜನರು ನಮ್ಮಂತವರನ್ನು ಗೆಲ್ಲಿಸುವುದಿಲ್ಲ. ಈ ಹಿಂದೆ ನಾನು ಎಂಪಿ ಆಗಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯ ಮಾಡಿದೆ. ಆದರೆ ಅಭಿವೃದ್ಧಿ ಚರ್ಚೆ ಆಗುತ್ತಿಲ್ಲ. ಲೋಕಸಭೆಗೆ ನಿಲ್ಲಬೇಕು ಎಂದುಕೊಂಡಿದ್ದರೂ ಜನ ಸೋಲಿಸುತ್ತಾರೆ. ಅದಕ್ಕೆ ನಾನು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಕೆಆರ್‌ಡಿಬಿ ಅಧ್ಯಕ್ಷ ಆಗಲು ನನಗೆ ಆಸಕ್ತಿ ಇಲ್ಲ. ನಾನೇ ಅಜಯ್‌ ಸಿಂಗ್‌ ಅಧ್ಯಕ್ಷ ಆಗಲಿ ಎಂದು ಬರೆದುಕೊಟ್ಟಿದ್ದೇನೆ. ಕೆಕೆಆರ್‌ಡಿಬಿಗೆ ನಾನೇ ಎಲ್ಲ ಸದಸ್ಯರ ಹೆಸರು ಶಿಫಾರಸು ಮಾಡಿದ್ದೇನೆ. ಅಜಯ್‌ ಸಿಂಗ್‌ ಒಳ್ಳೆಯ ವ್ಯಕ್ತಿ. ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಒಳ್ಳೆಯದಾಗುತ್ತದೆ ಎಂದರು.

Latest Videos
Follow Us:
Download App:
  • android
  • ios