ಸಿಎಂ ಸಿದ್ದರಾಮಯ್ಯ ಹೆಣ ಬಂದರೂ ಬಿಜೆಪಿಗೆ ಸೇರಿಸಲ್ಲ: ಶಾಸಕ ಯತ್ನಾಳ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ. ಅವರ ಹೆಣ ಬಂದರೂ ಕೂಡ ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯಿಸಿದರು.

ವಿಜಯಪುರ (ಸೆ.14): ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲ. ಅವರ ಹೆಣ ಬಂದರೂ ಕೂಡ ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಖಾರವಾಗಿ ಪ್ರತಿಕ್ರಿಯಿಸಿದರು. ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿಗೆ ನನ್ನ ಹೆಣ ಕೂಡ ಹೋಗಲ್ಲ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಬಿಜೆಪಿಗೆ ಜೀವಂತವಾಗಿ ಬಂದರೂ ಕರೆದುಕೊಳ್ಳುವುದಿಲ್ಲ. ಸಿದ್ದರಾಮಯ್ಯ ಅಂಗಲಾಚಿ ಬೇಡಿಕೊಂಡರೂ ನಾವು ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ. ನಮಗೆ ಸಿದ್ದರಾಮಯ್ಯನವರ ಅವಶ್ಯಕತೆ ಇಲ್ಲ. ಇನ್ನು ಅವರ ಹೆಣದ ಮಾತು ದೂರ ಉಳಿಯಿತು ಎಂದರು.
ಬಿಜೆಪಿ ವಿಷದ ಹಾವು ಎಂದ ಉದಯ ನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕರುಣಾನಿಧಿ ತಳಿಯೆ ವಿಷದ ಹಾವು. ಅದು ಕೆಟ್ಟ ತಳಿ ಇದೆ. ಈ ತಳಿ ದೇಶಕ್ಕೆ ನಿಷ್ಠೆಯಿಲ್ಲ. ಧರ್ಮಕ್ಕೂ ನಿಷ್ಠೆಯಿಲ್ಲ. ಒಂದು ಕಾಲದಲ್ಲಿ ಎಲ್‌ಟಿಟಿಇಗೆ ಬೆಂಬಲ ನೀಡಿದವರು. ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲಿಸಿದವರು. ಅವರಿಂದ ಇನ್ನೇನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸನಾತನ ಧರ್ಮ ಕಾಗೆ ಎಂದು ಟೀಕಿಸಿದ ಪ್ರಕಾಶ ರೈ ವಿರುದ್ಧವೂ ಯತ್ನಾಳ ವಾಗ್ದಾಳಿ ನಡೆಸಿ, ಪ್ರಕಾಶ ರೈ ಎನ್ನುವ ಹಂದಿ ನಮ್ಮ ರಾಜ್ಯದಲ್ಲಿ ಇದೆ. ಸ್ವಚ್ಛ ಮಾಡಲು ಹಂದಿ ಇರುತ್ತದೆ. ಅದೇ ರೀತಿ ನಮ್ಮಲ್ಲೂ ಪ್ರಕಾಶ ರೈ ಎನ್ನುವ ಹಂದಿ ಇದೆ ಎಂದು ಟೀಕಿಸಿದರು.
ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ಸನಾತನ ಧರ್ಮದ ಬಗ್ಗೆ ಮಾತನಾಡುವವರು ನಾಶವಾಗಿ ಹೋಗುತ್ತಾರೆ. ಕ್ಯಾನ್ಸರ್, ಏಡ್ಸ್ ರೀತಿ ಕೆಲ ಜನರು ಇದ್ದಾರೆ. ಸನಾತನ ಧರ್ಮ ಅದನ್ನು ನಾಶ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದಿ ಚುಂಚನಗಿರಿ ಸ್ವಾಮಿ, ಮೂರುಸಾವಿರ ಮಠದ ಗುರುಗಳು ಮಾತನಾಡಿದ್ದಾರೆ. ಆದರೆ, ಉಳಿದ ಸ್ವಾಮಿಗಳು ಇದರ ವಿರುದ್ಧ ಧ್ವನಿ ಎತ್ತಿಲ್ಲ. ಸಿದ್ದರಾಮಯ್ಯನವರ ಬಳಿ ಮಠಕ್ಕೆ ಅನುದಾನ ತರುವ ಉದ್ದೇಶದಿಂದ ಮೌನ ವಹಿಸಿರಬಹುದು. ಧರ್ಮಗುರುಗಳು ಧರ್ಮದ ರಕ್ಷಣೆಗೆ ಇರಬೇಕು. ಆದರೆ, ಬಹುತೇಕ ಮಠಾಧೀಶರು ಸನಾತನ ಧರ್ಮದ ವಿರುದ್ಧ ಟೀಕಿಸುವವರ ವಿರುದ್ಧ ಧ್ವನಿ ಎತ್ತಬೇಕು ಎಂದು ತಿಳಿಸಿದರು.
ತಮಿಳುನಾಡಿಗೆ ನೀರು ಹರಿಸಿದರೆ ರೈತರಿಗೆ ಅನ್ಯಾಯ ಮಾಡಿದಂತೆ: ಬೊಮ್ಮಾಯಿ ಕಿಡಿ
ಧಮ್, ತಾಕತ್ತಿದ್ದರೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬಿ.ಕೆ.ಹರಿಪ್ರಸಾದ ವಿರುದ್ಧ ಕ್ರಮಕೈಗೊಳ್ಳಬೇಕು. ತಾಕತ್ತಿದ್ದರೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಸವಾಲು ಹಾಕಿದರು. ಜಾತಿ ನಿಂದನೆ ಹಾಗೂ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸುಧಾಕರ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅವರನ್ನು ಸಂಪುಟದಿಂದ ವಜಾಗೊಳಿಸಿ, ಪಕ್ಷದಿಂದ ಹೊರ ಹಾಕಬೇಕು ಎಂದು ಆಗ್ರಹಿಸಿದರು.