ವಿಜಯಪುರ (ಫೆ.4): ಕಳಪೆ ಸಾಧನೆ ಮಾಡಿದ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಚಿವರು ವಿಧಾನಸೌಧ, ವಿಕಾಸಸೌಧ ಕಡೆ ಸುಳಿಯುತ್ತಿಲ್ಲ. ಅವರ ಆಪ್ತ ಸಹಾಯಕರೂ ಸಿಗುತ್ತಿಲ್ಲ. ಶಾಸಕರಾದ ನಾವೇ ಅವರನ್ನು ಹುಡುಕಾಡಬೇಕಿದೆ ಎಂದು ಸ್ವಪಕ್ಷೀಯ ಸಚಿವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು

ಸಚಿವ ಸಂಪುಟ ವಿಸ್ತರಣೆಯಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು. ಕಳಪೆ ಸಾಧನೆ ಮಾಡಿದ ಸಚಿವರನ್ನು ಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು. ಸಚಿವ ಸ್ಥಾನ ಕಳೆದಕೊಂಡರೆ ಅವರೇನೂ ಬಂಡಾಯವೇಳುವುದಿಲ್ಲ, ಬಂಡಾಯವೆದ್ದು ಚುನಾವಣೆಗೆ ಹೋದರೂ ಅವರು ಮರು ಆಯ್ಕೆಯಾಗುವುದಿಲ್ಲ ಎಂದರು.

ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲ. ಕಾಡಿಬೇಡಿ ಮಂತ್ರಿ ಆಗುವ ಸ್ವಭಾವ ನನ್ನದಲ್ಲ, ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ. ನನ್ನದೇ ಆದ ಸಾಮ್ರಾಜ್ಯ ನಿರ್ಮಿಸಿದ್ದೇನೆ. ಬಯೋಡೆಟಾ ಹಿಡಿದುಕೊಂಡು ಓಡಾಡುವ ರಾಜಕಾರಣಿ ನಾನಲ್ಲ ಎಂದಿದ್ದಾರೆ.

ಎಚ್‌ಡಿಕೆ ಮಿಣ ಮಿಣ ಪೌಡರಿಗೆ ಯತ್ನಾಳ್ ಕಮೆಂಟ್ ಇದು

ಸುಸ್ಥಿರ ಸರ್ಕಾರಕ್ಕಾಗಿ ಕೆಲ ಸಚಿವರು ತ್ಯಾಗ ಮಾಡಬೇಕು. ಎಲ್ಲ ಸ್ಥಾನಮಾನ ಪಡೆದವರು ತ್ಯಾಗ ಮಾಡಬೇಕು. ಸಚಿವರ ಮೌಲ್ಯಮಾಪನ ನಡೆಸಬೇಕು ಎಂದು ಸಿಎಂ ಅವರಿಗೆ ಮನವಿ ಮಾಡಿದ್ದೇನೆ ಎಂದರು.