Asianet Suvarna News Asianet Suvarna News

ಬಿಜೆಪಿ ತೊರೆಯುತ್ತಾರೆ ಸುದ್ದಿಗೆ ಸ್ಪಷ್ಟನೆ ಕೊಟ್ಟ ಶಾಸಕ ಅರವಿಂದ್ ಬೆಲ್ಲದ್

* ಬಿಜೆಪಿ ತೊರೆಯುತ್ತಾರೆ ಎನ್ನುವ ವದಂತಿಗೆ ಸ್ಪಷ್ಟನೆ ಕೊಟ್ಟ ಶಾಸಕ ಅರವಿಂದ್ ಬೆಲ್ಲದ್
* ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ
* ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದ  ಅರವಿಂದ್ ಬೆಲ್ಲದ್

mla arvind bellad Gives Clarifications about Quit BJP gossip rbj
Author
Bengaluru, First Published Sep 20, 2021, 8:13 PM IST
  • Facebook
  • Twitter
  • Whatsapp

ಬೆಂಗಳೂರು, (ಸೆ.20):  ಅಚ್ಚರಿ ಎಂಬಂತೆ ಸಿಎಂ ರೇಸ್‌ನಲ್ಲಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್‌ಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನವೂ ಸಿಗಲಿಲ್ಲ.

ಇದರಿಂದ ಅವರು ತೀವ್ರ ಅಸಮಾಧಾನಗೊಂಡಿದ್ದು, ಬಿಜೆಪಿ ತೊರೆಯುತ್ತಾರೆ ಎನ್ನುವ ಗಾಸಿಪ್ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ.

ಸಿಗದ ಸಚಿವ ಸ್ಥಾನ: ಅತೃಪ್ತ ಶಾಸಕರಿಂದ ಸಭೆ, ಬೆಲ್ಲದ ಹೇಳಿದ್ದೇನು?

ಇದು ಸ್ವತಃ ಅರವಿಂದ್ ಬೆಲ್ಲದ್ ಕಿವಿಗೆ ಬಿದ್ದಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆ ಕೊಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಹಾಗಾದ್ರೆ ಅವರ ಸ್ಪಷ್ಟನೆಯಲ್ಲಿ ಏನೆಲ್ಲಾ ಹೇಳಿದ್ದಾರೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

ಆತ್ಮೀಯರೇ.
ಕೆಲ ಮಾಧ್ಯಮಗಳಲ್ಲಿ ನಾನು ಭಾರತೀಯ ಜನತಾ ಪಕ್ಷವನ್ನು ತೊರೆಯುವುದಕ್ಕೆ ಚಿಂತನೆ ನಡೆಸಿದ್ದೇನೆ ಎಂಬ ಸುಳ್ಳು ಹಾಗೂ ಕಪೋಲಕಲ್ಪಿತ ಸುದ್ದಿ ವರದಿಯಾಗುತ್ತಿದೆ. ಇದು ಸತ್ಯಕ್ಕೆ ದೂರವಾದ & ದುರುದ್ದೇಶಪೂರ್ವಕ ವರದಿ. ಸಾಮಾಜಿಕ ಜಾಲ ತಾಣಗಳಲ್ಲೂ ಇದೇ ಬಗೆಯ ಸುಳ್ಳು ಸಂದೇಶ ಹಬ್ಬಿಸುವ ಪ್ರಯತ್ನ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ಈ ವಿಚಾರವನ್ನು ನಾನು ನಿರ್ಲಕ್ಷಿಸಬಹುದಿತ್ತು. ಆದರೆ ಸುಳ್ಳುಗಳನ್ನೇ ನಿಜವೆಂದು ಪ್ರತಿಷ್ಠಾಪಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೀಗಾಗಿ ಈ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇನೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಪರಿವಾರದ ಬಗೆಗಿನ ನನ್ನ ನಿಷ್ಠೆ ಅಚಲವಾಗಿದೆ.

ನಾನು ಬಿಜೆಪಿ ತೊರೆಯುವ / ಅನ್ಯ ಪಕ್ಷ ಸೇರುವುದನ್ನು ಕಾಯಾ, ವಾಚಾ, ಮನಸಾ ಕಲ್ಪಿಸಲೂ ಸಾಧ್ಯವಿಲ್ಲ. ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಹಬ್ಬಿರುವ ವದಂತಿಗೆ ಯಾರೂ ಬೆಲೆ ಕೊಡಬಾರದು ಎಂದು ಈ ಮೂಲಕ ಪ್ರಾರ್ಥಿಸುತ್ತೇನೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೂ ನಾನು ಸಿದ್ಧತೆ ನಡೆಸಿದ್ದೇನೆ ಎಂದಿದ್ದಾರೆ.

Follow Us:
Download App:
  • android
  • ios