ಬೆಂಗಳೂರು, (ಜ.12): ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಅವರು ಬೆಂಗಳೂರಿನ ಡಿಜೆ ಹಳ್ಳಿ ಹಾಗು ಕೆ.ಜೆ. ಹಳ್ಳಿ ಗಲಭೆಯಲ್ಲಿ ಮನೆ ಜೊತೆಗೆ ವಡವೆ, ಹಣ ಕಳೆದುಕೊಂಡಿದ್ದು, ನ್ಯಾಯಕ್ಕಾಗಿ ಅಲಿಯುತ್ತಿದ್ದಾರೆ.

ಮಾನಸಿಕವಾಗಿ ಇನ್ನೂ ಘಟನೆಯಿಂದ ಹೊರಬಂದಿಲ್ಲ. ಆದರೂ ಕ್ಷೇತ್ರದ ಬಡ ಜನರಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆಹಾರ ಸಾಮಗ್ರಿ ವಿತರಣೆ ಮಾಡಿದ್ದಾರೆ.

ಬೆಂಗಳೂರು ಗಲಭೆ: ಸ್ವಪಕ್ಷದವರೇ ಮನೆಗೆ ಬೆಂಕಿ, ಕಾಂಗ್ರೆಸ್‌ ಶಾಸಕ ಅಖಂಡ ನೋವು

ಹೌದು...ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಪ್ರತಿವರ್ಷದಂತೆ ಈ ಭಾರಿಯೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕ್ಷೇತ್ರದ ಸುಮಾರು 20 ಸಾವಿರ ಬಡ ಜನರಿಗೆ  ದಿನಸಿ ವಿತರಣೆ ಮಾಡಿದರು.

ಕಳೆದ 15 ವರ್ಷಗಳಿಂದ ಸಂಕ್ರಾಂತಿ ಹಬ್ಬದಂದು ಈ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದು, ಈ ಸಲ ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕೃಷ್ಣಭೈರೇಗೌಡ ಚಾಲನೆ ನೀಡಿದರು. 3 ಕೆ.ಜಿ ಅಕ್ಕಿ, ಬೆಲ್ಲ, ಎಣ್ಣೆ, ಶಾವಿಗೆ ಪಟ್ಟಣ ವಿತರಿಸಿದರು.