Asianet Suvarna News Asianet Suvarna News

ಇಂಗ್ಲೀಷ್‌ನಲ್ಲಿ ಜಮೀರ್‌ ಪ್ರಮಾಣವಚನ: 18 ವರ್ಷವಾದ್ರೂ ಕನ್ನಡ ಕಲಿಯದ ಸಚಿವನಿಗೆ ಕರವೇ ತರಾಟೆ

ಜನಪ್ರತಿನಿಧಿಯಾಗಿ 18 ವರ್ಷವಾದರೂ ಕನ್ನಡ ಕಲಿಯದೇ ಇಂಗ್ಲೀಷ್‌ನಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ಜಮೀರ್‌ ಅಹಮದ್‌ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Minister Zameer Ahmed taking oath in English angered Kannadigas sat
Author
First Published May 20, 2023, 7:45 PM IST

ಬೆಂಗಳೂರು (ಮೇ 20): ರಾಜ್ಯ ರಾಜಧಾನಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಜನಪ್ರತಿನಿಧಿಯಾಗಿ 18 ವರ್ಷಗಳಿಂದ ಆಯ್ಕೆ ಆಗುತ್ತಿದ್ದರೂ ಕನ್ನಡ ಕಲಿಯದೇ ಇಂಗ್ಲೀಷ್‌ನಲ್ಲಿ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ಜಮೀರ್‌ ಅಹಮದ್‌ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಕುದುರೆ ಎಂದು ಹೇಳುವ ಜನಪ್ರತಿನಿಧಿಗಳಲ್ಲಿ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಝಡ್‌. ಜಮೀರ್‌ ಅಹಮದ್‌ ಖಾನ್‌ ಕೂಡ ಒಬ್ಬರು. ಇವರು 2005ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದು, ಅಂದು ಕನ್ನಡ ಬರದೇ ಹಿಂದಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಅಲ್ಲಿಂದ ಇಲ್ಲೀವರೆಗೆ 18 ವರ್ಷಗಳು ಕಳೆದಿದ್ದರೂ ಕನ್ನಡವನ್ನು ಕಲಿಯದೇ ಇಂದು ರಾಜ್ಯದ ಕ್ಯಾಬಿನೆಟ್‌ ಸಚಿವನಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಇಂಗ್ಲೀಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ. ಸಚಿವ ಜಮೀರ್‌ ಅಹಮದ್‌ ಬಗ್ಗೆ ರಾಜ್ಯಾದ್ಯಂತ ಕನ್ನಡಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಸಿದ್ದು ಸಿಎಂ, ಡಿಕೆಶಿ ಡಿಸಿಎಂ ಪ್ರಮಾಣವಚನದಲ್ಲಿ ಕಳ್ಳರ ಕೈಚಳಕ: ಅಟ್ಟಾಡಿಸಿ ಹಿಡಿದ ಪೊಲೀಸರು

ತಪ್ಪಾಗಿದೆ ಎಂದು ಕ್ಷಮೆಯಾಚಿಸಿದರೂ ಕನ್ನಡ ಕಲಿತಿಲ್ಲ:  ರಾಜ್ಯದ 2005 ವಿಧಾನಸಭಾ ಅಧಿವೇಶನದಲ್ಲಿ ಮೊದಲ ಬಾರಿಗೆ ಶಾಸಕನಾಗಿ ಇಂಗ್ಲೀಷ್‌ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದ ಜಮೀರ್‌ ಅಹಮದ್‌ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾರಿ ಆಕ್ರೋಶ ವ್ಯಕ್ತಪಡಿಸಿ ಶಾಸಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಜೊತೆಗೆ ವಿಧಾನಸಭಾ ಅಧಿವೇಶನದಲ್ಲಿ ವಾಟಾಳ್‌ ನಾಗರಾಜ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಜಮೀರ್‌ ಅಹಮದ್‌ ಕ್ಷಮೆ ಕೇಳಿದ್ದರು.

ಕನ್ನಡ ಬರೋದಿಲ್ಲ ಎಂದಿದ್ದ ಜಮೀರ್: ನಾನು ಇಂಜಿನಿಯರ್‌ ಆಗಬೇಕೆಂದು ತಮ್ಮ ತಂದೆ ಕಾನ್ವೆಂಟ್‌ಗೆ ಸೇರಿಸಿದರು. ಆದರೆ, ನನಗೆ ಪೂರ್ನ ಪ್ರಮಾಣದಲ್ಲಿ ಇಂಗ್ಲೀಷ್‌, ಹಿಂದಿ ಅಥವಾ ಕನ್ನಡ ಬರುವುದಿಲ್ಲ. ಉರ್ದು ಮಾತ್ರ ಬರುತ್ತದೆ. ಹೀಗಾಗಿ, ಅಲ್ಲಾ ಮತ್ತು ತಾಯಿ ಹೆರಸಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದೇನೆ ಎಂದು ಸಭೆಗೆ ತಿಳಿಸಿ ಕ್ಷಮೆ ಯಾಚಿಸಿದ್ದರು. ಅಲ್ಲಿಂದ ಈವರೆಗೆ 18 ವರ್ಷಗಳು ಕಳೆದಿದ್ದರೂ ಜಮೀರ್‌ ಅಹಮದ್‌ ಮಾತ್ರ ಕನ್ನಡವನ್ನೇ ಕಲಿತಿಲ್ಲ. ಅಂದು ಶಾಸಕನಾಗಿದ್ದ ಜಮೀರ್‌ ಅಹಮದ್‌ ಈಗ ಸಂಪುಟ ದರ್ಜೆ ಸಚಿವನಾಗಿದ್ದಾರೆ. ಕರ್ನಾಟಕದ ಅಧಿಕಾರದಲ್ಲಿ ಮೇಲೆತ್ತರಕ್ಕೆ ಏರುತ್ತಿದ್ದರೂ ಕನ್ನಡ ಕಲಿಯದೇ ಉಡಾಫೆ ತೋರುತ್ತಿದ್ದಾರೆ ಎಂಬ ಆಕ್ರೋಶ ಕನ್ನಡಿಗರಿಮದ ವ್ಯಕ್ತವಾಗುತ್ತಿದೆ. 

ಮೊದಲ ಸಂಪುಟ ಸಭೆಯಲ್ಲೇ ಕಾಂಗ್ರೆಸ್‌ 5 ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ

ಕರವೇ ನಾರಾಯಣಗೌಡ ಆಕ್ರೋಶ:  ಇಂದ ಕಾಂಗ್ರೆಸ್‌ ಹೊಸ ಸರ್ಕಾರದ ಸಿಎಂ, ಡಿಸಿಎಂ ಹಾಗೂ 8 ಸಚಿವರ ಪ್ರಮಾಣವಚನ ಕಾರ್ಯಕ್ರಮದಲ್ಲಿ ಜಮೀರ್‌ ಅಹಮದ್‌ ಖಾನ್‌ ಮಾತ್ರ ಇಂಗ್ಲೀಷ್‌ನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ್ದರಿಂದ ಕರ್ನಾಟಕ ರಕ್ಷಣಾ ವೇದಿಕೆ ಮುಖ್ಯಸ್ಥ ಟಿ.ಎ. ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, 18 ವರ್ಷದ ಹಿಂದಿನ ಪತ್ರಿಕಾ ತಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಟರ್ವಿಟರ್‌ ಖಾತೆಯಲ್ಲಿ 2005ರಲ್ಲಿ @BZZameerAhmedK ಜಮೀರ್ ಅಹಮದ್ ಖಾನ್  ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿದ್ದರು. ಆಗ ಅವರು  ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ವಿಧಾನಸಭೆ ಕಲಾಪ ನಡೆಯುವಾಗ ಕರವೇ ಕಾರ್ಯಕರ್ತರು  ಅಲ್ಲೇ ಕರಪತ್ರ ಎಸೆದು ಪ್ರತಿಭಟಿಸಿದಾಗ ನನ್ನಿಂದ ತಪ್ಪಾಗಿದೆ ಎಂದಿದ್ದರು. 18 ವರ್ಷ ಕಳೆದರೂ ಅವರು ಕನ್ನಡ ಕಲಿತಿಲ್ಲವೇ? ಎಂದು ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios