Asianet Suvarna News Asianet Suvarna News

ಸಿದ್ದು ಸಿಎಂ, ಡಿಕೆಶಿ ಡಿಸಿಎಂ ಪ್ರಮಾಣವಚನದಲ್ಲಿ ಕಳ್ಳರ ಕೈಚಳಕ: ಅಟ್ಟಾಡಿಸಿ ಹಿಡಿದ ಪೊಲೀಸರು

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ ಕಂಠೀರವ ಕ್ರೀಡಾಂಗಣದಲ್ಲಿ ಕಳ್ಳರ ಕೈಚಳಕ ಕಂಡುಬಂದಿದೆ.

Pocket and purse stolen during the swearing in of Siddaramaiah chief minister sat
Author
First Published May 20, 2023, 6:39 PM IST

ಬೆಂಗಳೂರು (ಮೇ 20): ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕಾರ ಮಾಡುವ ವೇಳೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಈ ವೇಳೆ ಹಲವು ಕಳ್ಳರು ಪಿಕ್‌ ಪಾಕೆಟ್‌ ಮತ್ತು ಸರವನ್ನು ಕದ್ದು ಓಡಿ ಹೋಗುತ್ತಿದ್ದ ಪೊಲೀಸರು ಅವರನ್ನು ಅಟ್ಟಾಡಿಸಿಕೊಂಡು ಹೋಗಿ ಹಿಡಿದಿದ್ದಾರೆ

ರಾಜ್ಯದಲ್ಲಿ ಯಾವುದೇ ಸಭೆ, ಸಮಾರಂಭ, ಜಾತ್ರೆಗಳು ಹಾಗೂ ಜನಸಮೂಹ ಸೇರುವಂತಹ ಜಾಗದಲ್ಲಿ ಕೆಲವರು ಸುಲಭವಾಗಿ ಹಣ ಮಾಡಿಕೊಳ್ಳುವ ಕೈಚಳಕ ತೋರಿಸುತ್ತಾರೆ. ಕೆಲವರು ದುಡಿಮೆ ಮಾಡಿದರೆ, ಇನ್ನು ಕೆಲವರು ಜೋಬುಗಳಿಗೆ ಕತ್ತರಿ ಹಾಕಿ ಪಿಕ್‌ ಪಾಕೆಟ್‌ ಮಾಡುವ ಕಳ್ಳರು ಕೂಡ ಆಗಿರಬಹುದು. ಶನಿವಾರ ಬೆಂಗಳೂರಿನಲ್ಲಿ ನಡೆದ ಸಿದ್ದರಾಮಯ್ಯ (ಸಿಎಂ) ಹಾಗೂ ಡಿ.ಕೆ. ಶಿವಕುಮಾರ್‌ (ಡಿಸಿಎಂ) ಪದಗ್ರಹಣ ಕಾರ್ಯಕ್ರಮದಲ್ಲಿಯೂ ರಾಜ್ಯಾದ್ಯಂತ ಆಗಮಿಸಿದ 2 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಈ ವೇಳೆ ಹಲವು ಕಳ್ಳರು ಜನರ ಜೇಬಿಗೆ ಕತ್ತರಿ ಹಾಕಿ ಪರ್ಸ್ ಹಾಗೂ ಹಣವನ್ನು ಕದ್ದಿರುವುದು ಕಂಡುಬಂದಿದೆ.

ಮೊದಲ ಸಂಪುಟ ಸಭೆಯಲ್ಲೇ ಕಾಂಗ್ರೆಸ್‌ 5 ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ: ಯಾವಾಗಿಂದ ಜಾರಿ?

ಸರಗಳ್ಳನನ್ನು ಅಟ್ಟಾಡಿಸಿ ಹಿಡಿದ ಪೊಲೀಸರು: ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸುತ್ತಿದ್ದ ಕಾರ್ಯಕ್ರಮದಲ್ಲಿ ಸರಗಳ್ಳರ ಕೈ ಚಳಕ ತೋರಿದ್ದಾರೆ. ಎಲ್ಲರೂ ಮುಗಿಬಿದ್ದು ಕಾರ್ಯಕ್ರಮ ವೀಕ್ಷಣೆ ಮಾಡುತ್ತಾ ಸಂಭ್ರಮಿಸುತ್ತಿರುವಾಗ ಕಳ್ಳನೊಬ್ಬ ಮಹಿಳೆಯ ಸರ ಕಿತ್ತುಕೊಂಡು ಓಡಲು ಆರಂಭಿಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಮಡು ಹೋದ ಕಳ್ಳರು, ಜನರು ಕಾರ್ಯಕ್ರಮ ಮುಗಿಸಿಕೊಂಡು ಹೊರಗೆ ಬರುವಾಗಲೂ ಮತ್ತೊಮ್ಮೆ ಕೈಚಳಕ ತೋರಿಸಿದ್ದಾರೆ. ಇದನ್ನು ಗಮನಿಸಿದ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಓಡುತ್ತಿದ್ದ ಇಬ್ಬರು ಕಳ್ಳರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸದ್ಯ ಇಬ್ಬರೂ ಕಳ್ಳರು ಸಂಪಂಗಿ ರಾಮನಗರ ಪೊಲೀಸರ ವಶದಲ್ಲಿದ್ದಾರೆ. 

ಪಿಕ್‌ ಪ್ಯಾಕೆಟರ್ಸ್‌ ಬಂಧನ: ಇದೇ ಕಂಠೀರವ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ ಪ್ರಮಾಣ ವಚನ ಕಾರ್ಯಕ್ರಮದಲ್ಲಿಯೇ ಮತ್ತೊಂದೆಡೆ ಜೇಬು ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯ ಮೂಲೆ ಮೂಲೆಗಳಿಂದ ಸಿಎಂ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರ್ವಜನಿಕರ ಜೇಬುಗಳಿಂದ ಮೊಬೈಲ್, ಪರ್ಸ್ ಎಗರಿಸುತ್ತಿದ್ದ ಕಳ್ಳರನ್ನು ಹಲಸೂರು ಗೇಟ್‌ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಿಎಂ ವೇದಿಕೆಯ ಎದುರು ಭಾಗದಲ್ಲಿ ಇದ್ದ ಕ್ಯಾಬಿನ್‌ನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಎಲ್ಲರೂ ಸಂಭ್ರಮಾಚರಣೆಯಲ್ಲಿರುವಾಗ ಜೇಬಿಗೆ ಕತ್ತರಿಹಾಕಿ ಕಳ್ಳತನ ಮಾಡಿರುವುದು ಕಂಡುಬಂದಿದೆ. ಕೆಲವರು ಇದನ್ನು ಗಮನಿಸಿ ಅವರನ್ನು ಹಿಡಿದು ಪೊಲೀಸರ ಕೈಗೊಪ್ಪಿಸಿದ್ದಾರೆ. 

Karnataka CM Oath:ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿದ ಸಿದ್ದರಾಮಯ್ಯ

31ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ: ಕರ್ನಾಟಕದ ರಾಜ್ಯದ 16ನೇ ವಿಧಾನಸಣಾ ಚುನಾವಣೆಯನ್ನು ರಾಜ್ಯದಲ್ಲಿ ಒಂದೇ ಹಂತದಲ್ಲಿ ನಡೆಸಲಾಯಿತು. ಮೇ 10 ರಂದು ಮತದಾನ ನಡೆದಿದ್ದು, ಮೇ 13ರಂದು ಫಲಿತಾಂಶ ಬಂದಿದೆ. ರಾಜ್ಯದಲ್ಲಿ ಸರ್ಕಾರ ರಚನೆಗೆ 122 ಸ್ಥಾನಗಳ ಅಗತ್ಯವಿದ್ದು, ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್‌ 135 ಸ್ಥಾನದೊಂದಿಗೆ ಬಹುಮತವನ್ನು ಗಳಿಸಿದೆ. ನಂತರ ನಡೆದ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಕಸರತ್ತಿನಲ್ಲಿ ಸಿದ್ದರಾಮಯ್ಯ ಬಹುಮತವನ್ನು ಪಡೆದು ಶಾಸಕಾಂಗ ಸಭೆಯ ನಾಯಕರಾಗಿ ಆಯ್ಕೆಯಾದರು. ಸರ್ಕಾರ ರಚನೆ ಮಾಡುವುದಾಗಿ ರಾಜ್ಯಪಾಲರಿಂದ ಅನುಮತಿ ಪಡೆದ ಸಿದ್ದರಾಯಮಯ್ಯ ಅವರು ಶನಿವಾರ (ಮೇ 20ರಂದು) ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಬೆಳಗ್ಗೆ 12.30ಕ್ಕೆ 31ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ರಾಜ್ಯ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಪ್ರಮಾಣವಚನ ಬೋಧಿಸಿದರು. ಇದೇ ವೇಳೆ 9ನೇ ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್‌ ಪ್ರಮಾಣವಚನ ಸ್ವೀಕಾರ ಮಾಡಿದರು.

Follow Us:
Download App:
  • android
  • ios