Asianet Suvarna News Asianet Suvarna News

ಲೋಕಸಭಾ ಚುನಾವಣೇಲಿ ನಮ್ಮ ಪಕ್ಷಕ್ಕೆ 20-22 ಸ್ಥಾನ ಕಟ್ಟಿಟ್ಟ ಬುತ್ತಿ: ಸಚಿವ ಜಮೀರ್ ಅಹ್ಮದ್

ಮುಂಬರುವ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಬರುತ್ತೆ. ಜನ ನಮ್ಮ ಪರ ಇದ್ದಾರೆ. ನಿಮಗೆ ಆಶ್ಚರ್ಯಕರ ಫಲಿತಾಂಶ ಬರುತ್ತೆ ನೋಡ್ತಾ ಇರಿ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.

Minister Zameer ahmed reaction about Loksabha election 2024 at bengaluru rav
Author
First Published Mar 1, 2024, 4:21 PM IST

ಬೆಂಗಳೂರು (ಮಾ.1): ಮುಂಬರುವ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಬರುತ್ತೆ. ಜನ ನಮ್ಮ ಪರ ಇದ್ದಾರೆ. ನಿಮಗೆ ಆಶ್ಚರ್ಯಕರ ಫಲಿತಾಂಶ ಬರುತ್ತೆ ನೋಡ್ತಾ ಇರಿ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.

ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20-22 ಸ್ಥಾನ ಗೆಲ್ತೀವಿ. ವಿಧಾನಸಭೆಯಲ್ಲಿ 135 ಸ್ಥಾನ ಬರುತ್ತೆ ಅಂತ ಹೇಳಿದ್ದೆ, ಯಾರು ನಂಬಲಿಲ್ಲ. ಆದರೆ ನಾನು ಹೇಳಿದ್ದಕ್ಕಿಂತ ಒಂದು ಹೆಚ್ಚಾಗಿ 136 ಸ್ಥಾನ ಬಂತು. ಅದೇ ರೀತಿ ಲೋಕಸಭೆಯಲ್ಲಿ 20-22 ಸ್ಥಾನ ಬರುತ್ತದೆಂದು ವಿಶ್ವಾಸವ್ಯಕ್ತಪಡಿಸಿದರು.

ಇನ್ನು ರಾಮಮಂದಿರ, ಹಿಂದೂ ಮುಸ್ಲಿಂ ಅನ್ನೋದು ಬಿಜೆಪಿಯವರು. ಆದರೆ ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಗೆಲ್ತೇವೆ. ಮೋದಿ 15ಲಕ್ಷ ಹಾಕ್ತೀನಿ ಅಂದಿದ್ರು ಹಾಕಿದ್ರಾ? ಗ್ಯಾಸ್ ಬೆಲೆ, ಪೆಟ್ರೋಲ್, ಡಿಸೇಲ್ ಬೆಲೆ ಎಷ್ಟು ಆಗಿದೆ. ಅಚ್ಚೇ ದಿನ ಅಂದ್ರು, ಎಲ್ಲಿ ಬಂತು ಅಚ್ಚೇ ದಿನ? ನಮಗೆ ಅಚ್ಚೇ ದಿನ ಬೇಡ ಹಳೆ ದಿನ ಕೊಡಿ ಅಂತ ಜನ ಮಾತಾಡ್ತಿದ್ದಾರೆ. ಸಬ್ ಕಾ ಸಬ್ ಕಾ ವಿಕಾಸ್ ಎಲ್ಲಿ ಹೋಯ್ತು? ಎಂದು ಪ್ರಧಾನಿ ವಿರುದ್ಧ ಹರಿಹಾಯ್ದರು.

ಶಕ್ತಿಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ; FSL Report ಬಂದ ನಂತರ ಕ್ರಮ: ಗೃಹ ಸಚಿವ ಪರಮೇಶ್ವರ್

ಜಾತಿ ಗಣತಿಗೆ ಲಿಂಗಾಯತ, ಒಕ್ಕಲಿಗ ಸಚಿವರ ವಿರೋಧವಿದೆ ಎಂದು ಹೇಳ್ತಾರೆ. ಆದರೆ ಹಾಗೆ ಯಾರೂ ವಿರೋಧಿಸಿಲ್ಲ. ನಾನು ನಿನ್ನೆ ಅಧಿವೇಶನದಲ್ಲೇ ಇದ್ದೆ. ಯಾರೂ ವರದಿಗೆ ವಿರೋಧ ಮಾಡಿಲ್ಲ. ವರದಿ ಮೂಲಕ ಎಷ್ಟು ಜನರು ಇದ್ದಾರೆ ಅಂತ ಸತ್ಯ ಹೊರಗೆ ಬಂದಿದೆ. SC ಜನರು ಹೆಚ್ಚು ಇದ್ದಾರೆ. 70 ಲಕ್ಷ ಮುಸ್ಲಿಂಮರು ಅನ್ನೋದು ತಿಳಿದುಬಂದಿದೆ. ಸತ್ಯವನ್ನೇ ವರದಿ ಕೊಟ್ಟಿರೋದು ಜಾತಿ ಗಣತಿ ವರದಿ ಸತ್ಯ ಎಂದು ಸಮರ್ಥಿಸಿಕೊಂಡರು.

ಅಂಗಾಂಗ ದಾನಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದ ಸಿಎಂ ಸಿದ್ದರಾಮಯ್ಯ

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಮೀರ್, ಘಟನೆ ಸಂಬಂಧ ಈಗಾಗಲೇ ವಿಡಿಯೋಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ವರದಿ ಬಂದ ನಂತರ ಸತ್ಯ ಏನು ಅಂತಾ ಗೊತ್ತಾಗುತ್ತೆ. ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ರೆ ನಾನೇ ಹೇಳ್ತೀನಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು ಅಂತಾ. ಯಾರೇ ಕೂಗಿದ್ರೂ ಕೂಗಿದವರು ದೇಶದ್ರೋಹಿಗಳು. ಅಂಥವರಿಗೆ ಗಲ್ಲು ಶಿಕ್ಷೆಎ ಆಗಬೇಕು. ನಾನೇ ಇದಕ್ಕೆ ಒತ್ತಾಯ ಮಾಡ್ತೇನೆ. ವರದಿ ಬರಲಿ ಬಂದ ಬಳಿಕ ಕ್ರಮ ತೆಗೆದುಕೊಳ್ತಿವಿ ಎಂದರು.

Follow Us:
Download App:
  • android
  • ios