Asianet Suvarna News Asianet Suvarna News

ಸಿಎಂ ಸಿದ್ದರಾಮಯ್ಯ ಟಗರು, ಹುಲಿಯಿದ್ದಂತೆ ಭಯದ ಅಗತ್ಯವಿಲ್ಲ: ಸಚಿವ ಜಮೀ‌ರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಟಗರು, ಹುಲಿ ಇದ್ದಂತೆ ಯಾವುದೇ ಕಾರಣಕ್ಕೂ ಭಯ ಬೀಳುವ ಅಗತ್ಯವಿಲ್ಲ ಎಂದು ವಸತಿ ಸಚಿವ ಜಮೀ‌ರ್ ಅಹ್ಮದ್‌ ಹೇಳಿದರು. 

Minister Zameer Ahmed Khan Talks Over CM Siddaramaiah At Hubballi gvd
Author
First Published Sep 2, 2024, 11:53 AM IST | Last Updated Sep 2, 2024, 11:53 AM IST

ಹುಬ್ಬಳ್ಳಿ (ಸೆ.02): ಮುಖ್ಯಮಂತ್ರಿ ಸಿದ್ದರಾಮಯ್ಯ ಟಗರು, ಹುಲಿ ಇದ್ದಂತೆ ಯಾವುದೇ ಕಾರಣಕ್ಕೂ ಭಯ ಬೀಳುವ ಅಗತ್ಯವಿಲ್ಲ ಎಂದು ವಸತಿ ಸಚಿವ ಜಮೀ‌ರ್ ಅಹ್ಮದ್‌ ಹೇಳಿದರು. ರಾಜ್ಯಪಾಲರ ಪ್ರಾಸಿಕ್ಯೂಷನ್ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದುಳಿದ ವರ್ಗನಾಯಕ ಎನ್ನುವ ಕಾರಣದಿಂದ ಬಿಜೆಪಿ ಟಾರ್ಗೆಟ್ ಮಾಡಿದೆ. ಸಿದ್ದರಾಮಯ್ಯ ಜನರ ಮುಖ್ಯಮಂತ್ರಿ. ಅಂಥವರ ವಿರುದ್ಧ ಯಾರೋ ಖಾಸಗಿ ವ್ಯಕ್ತಿ ಕೊಟ್ಟ ದೂರಿನ ಅನ್ವಯ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ ಎಂದರೆ ಏನರ್ಥ? ಈ ಕಾರಣಕ್ಕಾಗಿಯೇ ನಾವು ರಾಜಭವನ ಚಲೋ ಮಾಡಿದೆವು ಎಂದರು. 

ದೂರುಕೊಟ್ಟ ದಿನದಂದೇ ರಾಜ್ಯಪಾಲರು ನೋಟಿಸ್‌ ಕೊಡುತ್ತಾರೆ. ಕೆಲವೇ ದಿನಗಳಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುತ್ತಾರೆ. ಅದಕ್ಕಿಂತ ಮುಂಚೆಯೇ ನವೆಂಬರ್ ನಲ್ಲಿ ಕುಮಾರಸ್ವಾಮಿ ವಿರುದ್ಧ ತನಿಖಾ ಸಂಸ್ಥೆಯೇ ದೂರು ಕೊಟ್ಟರೂ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲ್ಲ, ಮುರಗೇಶ ನಿರಾಣಿ, ಶಶಿಕಲಾ ಜೊಲ್ಲೆ ಜನಾರ್ದನ ರೆಡ್ಡಿ ವಿರುದ್ಧ ತನಿಖೆಗೂ ಅನುಮತಿ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು. ಬಿಜೆಪಿಗೆ ಸಿದ್ದರಾಮಯ್ಯ ಜನಪ್ರಿಯತೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾಡಿದರು.

ತಮಿಳುನಾಡಿನ ಎಲಗಿರಿ ಮಾದರಿಯಲ್ಲಿ ಬೆಂಗಳೂರು, ಬೀದರಲ್ಲಿ ತಲೆಯೆತ್ತಲಿವೆ ಹೊಸ ಪಕ್ಷಿಧಾಮ: ಸಚಿವ ಖಂಡ್ರೆ

ದರ್ಶನ ಬಳ್ಳಾರಿಗೆ ನನ್ನ ಪಾತ್ರವಿಲ್ಲ: ಚಿತ್ರನಟ ದರ್ಶನ ಬಳ್ಳಾರಿಗೆ ಜೈಲಿಗೆ ವರ್ಗ ಮಾಡಿರುವುದರಲ್ಲಿ ನನ್ನ ಪಾತ್ರವೇನೂ ಇಲ್ಲ. ಅದನ್ನು ಪೊಲೀಸ್‌ ಇಲಾಖೆ, ಕಾರಾಗೃಹ ಇಲಾಖೆ ಮಾಡಿದೆ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ. ನಾನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಅಷ್ಟೇ. ಡಿಜಿ ಅಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಜಮೀರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಮೊದಲು ನನ್ನನ್ನು ಎದುರಿಸಿ: ಕುಮಾರಸ್ವಾಮಿ ಅವರೇ ನೀವು ಒಂದು ಮನೆ ಇಟ್ಟುಕೊಂಡು ಹೊರಗೆ ಏನೇನ್‌ ಮಾಡಿದ್ದೀರಾ ಅಂತ ಬಾಯಿ ಬಿಡಲಾ?, ನಾನು ನಿಮ್ಮ ರೀತಿ ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ. ನೀವು ಸಿದ್ದರಾಮಯ್ಯ ಅವರಿಗಿಂತ ಮೊದಲು ನನ್ನನ್ನು ಎದುರಿಸಿ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. 

ಬೆನ್ನು ನೋವಿದೆ, ಶೌಚಕ್ಕೆ ಕೆಳಗೆ ಕೂರಲು ಆಗಲ್ಲ, ಸರ್ಜಿಕಲ್‌ ಚೇರ್‌ ಬೇಕು: ದರ್ಶನ್‌ ಮನವಿ

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಯ ಜನರಿಗೆ ಎಷ್ಟು ಮನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ನಾನು ಕೇಳಿದ್ದಕ್ಕೆ ನನ್ನ ಕೇಳೋದಕ್ಕೆ ಅವನು ಯಾರು, ಒಂದು ನಂಬರ್‌ನಲ್ಲಿ ಎರಡು ಬಸ್‌ ಓಡಿಸುತ್ತಿದ್ದವನು ಎಂದು ಟೀಕಿಸಿದ್ದೀರಿ. ನಾನು ಅಂತಹವನಾಗಿದ್ದರೆ 2017ರ ವರೆಗೆ ನನ್ನನ್ನು ಯಾಕೆ ನಿಮ್ಮ ಜೊತೆ ಇಟ್ಟುಕೊಂಡಿದ್ದಿರಿ. ಅಂತಹ ಆರೋಪವಿದ್ದ ಪ್ರಕರಣ ನನ್ನದಲ್ಲ, ನನ್ನ ಚಿಕ್ಕಪ್ಪನದ್ದು. ಈಗಾಗಲೇ ಕೋರ್ಟ್‌ನಲ್ಲಿ ಕ್ಲೀನ್‌ ಚೀಟ್‌ ಪಡೆದುಕೊಂಡಿದ್ದೀನಿ’ ಎಂದು ಹೇಳಿದರು.

Latest Videos
Follow Us:
Download App:
  • android
  • ios