ಬಿಜೆಪಿಗರಿಗೆ ಕಲೆಕ್ಷನ್ ಮಾಡಿ ಅಭ್ಯಾಸವಾಗಿದೆ: ಸಚಿವ ಜಮೀರ್ ಅಹ್ಮದ್
ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ, ಜಾರಿಗೆ ತಂದಿದ್ದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಇದರಿಂದ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗ್ಯಾರೆಂಟಿ ಹೆಸರಲ್ಲಿ ಲೂಟಿ ಸರ್ಕಾರ ಎಂದಿರುವ ಬಿಜೆಪಿಯವರು ನಾವು ಏನು ಲೂಟಿ ಮಾಡಿದ್ದೆವೆ ಅದನ್ನು ಸಾಬೀತು ಮಾಡಬೇಕು. ಸುಮ್ಮನೆ ಆರೋಪ ಮಾಡಿದರೆ ಯಾರು ಕೇಳುತ್ತಾರೆ ಎಂದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ(ಅ.17): ಸಿಎಂ ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್ ಎಂದಿರುವ ಬಿಜೆಪಿಯವರಿಗೆ ಪ್ರತಿದಿನ ಕಲೆಕ್ಷನ್ ಮಾಡಿ ಅಭ್ಯಾಸ ಆಗಿದೆ. ಆದ್ದರಿಂದಲೇ ಕಲೆಕ್ಷನ್ ಜಪ ಮಾಡುತ್ತಿದ್ದಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಟಾಂಗ್ ನೀಡಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲೆಕ್ಷನ್ ಮಾಡಿ ಅಭ್ಯಾಸ ಇರುವ ಬಿಜೆಪಿಯವರಿಗೆ ಎಲ್ಲರೂ ಅವರಂಥವರೇ ಎಂದು ತಿಳಿದಿದ್ದಾರೆ. ಇದು ಗ್ರಹಿಕೆ. ನಾವು ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದೆವು. ಆರೋಪ ಮಾಡಿದ ಬಳಿಕ ಸಾಬೀತು ಮಾಡಬೇಕಿತ್ತು ಎಂದಿದ್ದಾರೆ.
ಕಾಂಗ್ರೆಸ್ ದುರಾಡಳಿತದ ಬಗ್ಗೆ ಪಕ್ಷದೊಳಗಿಂದಲೇ ನಮಗೆ ಮಾಹಿತಿ ಸಿಗುತ್ತಿದೆ: ಸಿಟಿ ರವಿ ಹೊಸ ಬಾಂಬ್
ನಾವು 40% ಕಮಿಷನ್ ಭ್ರಷ್ಟಚಾರ ಮಾಡಿಲ್ಲ ಎಂದು ಅದನ್ನು ಬಿಟ್ಟು ಬೇರೆಯವರ ಮೇಲೆ ಆರೋಪ ಮಾಡುವುದನ್ನೆ ಬಿಜೆಪಿಯವರು ಕಾಯಕ ಮಾಡಿಕೊಂಡಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿ, ಜಾರಿಗೆ ತಂದಿದ್ದು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಇದರಿಂದ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗ್ಯಾರೆಂಟಿ ಹೆಸರಲ್ಲಿ ಲೂಟಿ ಸರ್ಕಾರ ಎಂದಿರುವ ಬಿಜೆಪಿಯವರು ನಾವು ಏನು ಲೂಟಿ ಮಾಡಿದ್ದೆವೆ ಅದನ್ನು ಸಾಬೀತು ಮಾಡಬೇಕು. ಸುಮ್ಮನೆ ಆರೋಪ ಮಾಡಿದರೆ ಯಾರು ಕೇಳುತ್ತಾರೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ಉಚ್ಚಾಟನೆ ಮಾಡುತ್ತೇವೆ ಎಂಬ ಇಬ್ರಾಹಿಂ ಹೇಳಿಕೆ ಕುರಿತು ಮಾತನಾಡಿ, ಅದು ಅವರ ಪಕ್ಷದ ಆಂತರೀಕ ವಿಚಾರ. ಈ ಬಗ್ಗೆ ನಾನು ಏಕೆ ಮಾತನಾಡಲಿ? ಇಂಡಿಯಾ ಒಕ್ಕೂಟಕ್ಕೆ ಇಬ್ರಾಹಿಂ ಬೆಂಬಲ ನೀಡುತ್ತೇವೆ ಎಂದಿರುವುದಕ್ಕೆ ನನ್ನ ಸ್ವಾಗತವಿದೆ ಎಂದರು.
ಕಾಂಗ್ರೆಸ್ ಸರ್ಕಾರ ಶೋಕಿ ಸರ್ಕಾರ ಎಂದಿರುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ನಾನು ಏನನ್ನು ಪ್ರತಿಕ್ರಿಯಿಸಲ್ಲ ಎಂದಷ್ಟೇ ಉತ್ತರಿಸಿದರು. ಈ ವೇಳೆ ಶಾಸಕರಾದ ಎನ್.ವೈ.ಗೋಪಾಕೃಷ್ಣ, ಕೆ.ಸಿ.ವಿರೇಂದ್ರ ಪಪ್ಪಿ, ಬಿ.ಎನ್.ಚಂದ್ರಪ್ಪ, ಅನ್ವರ್ ಬಾಷ, ಜೆಜೆ ಹಟ್ಟಿ ತಿಪ್ಪೇಸ್ವಾಮಿ, ತಾಜ್ ಪೀರ್ ಸೇರಿದಂತೆ ಇತರರು ಹಾಜರಿದ್ದರು.