ಜಮೀರ್ ಅಹ್ಮದ್ ಕಮ್ಯೂನಲ್ ಅಲ್ಲವೇ ಅಲ್ಲ, ಅವರೊಬ್ಬ ಮೋಸ್ಟ್ ಸೆಕ್ಯೂಲರ್: ಸಿ.ಟಿ. ರವಿ
ಜಮೀರ್ ಅಹ್ಮದ್ ಕಮ್ಯೂನಲ್ ಅಲ್ಲವೇ ಅಲ್ಲ, ಅವರೊಬ್ಬ ಮೋಸ್ಟ್ ಸೆಕ್ಯೂಲರ್. ಎಷ್ಟರ ಮಟ್ಟಿಗೆ ಸೆಕ್ಯೂಲರ್ ಅಂದ್ರೆ ಪೈಗಂಬರ್ ಕೂಡ ಅವರ ಸಮ ಇರೋದಕ್ಕೆ ಸಾಧ್ಯವೇ ಇಲ್ಲ ಎಂದು ಜಮೀರ್ ಅಹ್ಮದ್ ಬಗ್ಗೆ ವ್ಯಂಗ್ಯವಾಡಿದ ಸಿ.ಟಿ. ರವಿ
ಕಲಬುರಗಿ(ಜೂ.25): ಜಿಹಾದಿಗೆ ಓಟ್ ಹಾಕ್ರಿ ಅಂತ ಕಾಂಗ್ರೆಸ್‌ನವರು ಕರೆ ಕೊಟ್ಟಿದ್ರಲ್ಲ. ಕೆಲವು ಪಕ್ಷಗಳಿಗೆ ಮತ್ತು ಕೆಲವು ಸಮುದಾಯಗಳಿಗೆ ಭಾರತ್ ಮಾತಾ ಕೀ ಜೈ ಎನ್ನುವರು ಗೆಲ್ಲಬಾರದು. ಕೆಲವು ಸಮುದಾಯಗಳಿಗೆ ಪಾಕಿಸ್ತಾನ ಜಿಂದಾಬಾದ್ ಎನ್ನುವವರೇ ಗೆಲ್ಲಬೇಕು. ಹಾಗಾಗಿಯೇ ವೋಟ್ ಜಿಹಾದ್‌ಗೆ ಕರೆ ಕೊಟ್ಟಿದ್ದರು. ರಾಷ್ಟ್ರಭಕ್ತರು ಲೋಕಸಭೆಗೆ ಹೋಗಬಾರದು ಅಂತ ಕರೆ ಕೊಟ್ಟರು. ವೋಟ್ ಜಿಹಾದಿ ಕರೆಗೆ ಬೆಂಬಲಿಸಿರೋದಕ್ಕೆ ಸಚಿವ ಜಮೀರ್ ಅಹ್ಮದ್ ಖಾನ್ ಸತ್ಯವನ್ನೇ ಹೇಳಿದ್ದಾರೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಮುಸ್ಲಿಂರು ಮತ ಹಾಕಿರೋದ್ರಿಂದಲೇ ಲೋಕಸಭೆಯಲ್ಲಿ ಸಾಗರ್ ಖಂಡ್ರೆ ಗೆದ್ದಿರೋದು ಎನ್ನುವ ಜಮೀರ್ ಹೇಳಿಕೆ ವಿಚಾರದ ಬಗ್ಗೆ ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ. ರವಿ, ವೋಟ್ ಜಿಹಾದ್ ಕಾರಣಕ್ಕೆ ತಾನೆ ವಿಧಾನಸೌಧದಲ್ಲಿ ಬಂದು ಪಾಕಿಸ್ತಾನ ಜಿಂದಾಬಾದ್ ಅಂತಾ ಘೋಷಣೆ ಹಾಕಿರೋದು. ನಮ್ಮಂತಹವರಿಗೆ ಗೆಲ್ಲಿಸಿದ್ರೆ ಭಾರತ್ ಮಾತಾ ಕೀ ಜೈ , ಜೈ ಶ್ರೀರಾಮ ಅಂತಾ ಕೂಗ್ತಿದ್ವಿ ಅಂತ ಹೇಳಿದ್ದಾರೆ.
ಇದು ಜನವಿರೋಧಿ, ಸತ್ತು ಹೋಗಿರೋ ಸರ್ಕಾರ, ಜನರೇ ದಫನ್ ಮಾಡೋ ದಿನ ಬರುತ್ತೆ: ಸಿಟಿ ರವಿ
ಜಮೀರ್ ಅಹ್ಮದ್ ಕಮ್ಯೂನಲ್ ಅಲ್ಲವೇ ಅಲ್ಲ, ಅವರೊಬ್ಬ ಮೋಸ್ಟ್ ಸೆಕ್ಯೂಲರ್. ಎಷ್ಟರ ಮಟ್ಟಿಗೆ ಸೆಕ್ಯೂಲರ್ ಅಂದ್ರೆ ಪೈಗಂಬರ್ ಕೂಡ ಅವರ ಸಮ ಇರೋದಕ್ಕೆ ಸಾಧ್ಯವೇ ಇಲ್ಲ ಎಂದು ಜಮೀರ್ ಅಹ್ಮದ್ ಬಗ್ಗೆ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.