Asianet Suvarna News Asianet Suvarna News

ಸಿಎಂ-ಯತ್ನಾಳ್ ಸಂಧಾನ ಯಶಸ್ವಿ,15ದಿನ ಕಾಯಿರಿ ಎಲ್ಲದಕ್ಕೂ ಉತ್ತರ ಸಿಗುತ್ತೆ ಎಂದ ಸಚಿವ

ಸಿಎಂ ಬಿಎಸ್ ಯಡಿಯೂರಪ್ಪನವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಂದಾನ ಆಗಿದಂತಿದೆ.

Minister V Somanna Reacts about basangouda Patil Yatnal-BSY Fight rbj
Author
Bengaluru, First Published Nov 11, 2020, 10:15 PM IST

ವಿಜಯಪುರ, (ನ.11): ವಸತಿ ಸಚಿವ ಇಂದು (ಬುಧವಾರ) ವಿಜಯಪುರ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ವಿಜಯಪುರನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಬಿಎಸ್‌ವೈ ವಿರುದ್ಧ ಬಹಿರಂಗ ಹೇಳಿಕೆಕೆ ಸಂಬಂಧಿಸಿದಂತೆ ಬಸನಗೌಡರನ್ನ ಸಮಾಧನಪಡಿಸಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಸೋಮಣ್ಣನವರೇ ಈ ಬಗ್ಗೆ ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದಾರೆ.ವಿಜಯಪುರದಲ್ಲಿ ಇಂದು (ಬಧವಾರ) ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಜೊತೆ ಔಪಚಾರಿಕ ಮಾತನಾಡಿದ್ದು, ಸಂಧಾನ ಯಶಸ್ವಿಯಾಗಿದೆ. ಇನ್ನು 15 ದಿನ ಕಾಯಿರಿ ಎಲ್ಲವೂ ಸ್ಪಷ್ಟವಾಗುತ್ತೆ ಎಂದರು.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಧ್ವನಿ ಎತ್ತಿದವರಲ್ಲಿ ಯತ್ನಾಳ್ ಕೂಡ ಒಬ್ಬರು. ಹೀಗಾಗಿ ಸಿಎಂ ಬದಲಾವಣೆ ಕುರಿತು ನೀಡಿದ ಹೇಳಿಕೆ‌ ಸಣ್ಣ ವ್ಯತ್ಯಾಸವೇ ಹೊರತು, ಯಾರೂ ಈ ವಿಷಯದ ಕುರಿತು ಆದ್ಯತೆ ನೀಡಬೇಡಿ. ಈಗಾಗಲೇ ಯತ್ನಾಳ್ ಅವರೊಂದಿಗೆ ಮಾತನಾಡಿದ್ದೇನೆ. ಇನ್ನು‌,15 ದಿನ ಕಾಯಿರಿ ಎಲ್ಲಕ್ಕೂ ಉತ್ತರ ಸಿಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ AK 47 ಇದ್ದಂತೆ: ಹಾಡಿ ಹೊಗಳಿದ ಸಚಿವ..!

ರಾಜ್ಯದಲ್ಲಿ ಒಂದು ಹೊಸ ಸಂದೇಶ ಹೋಗಬೇಕಿದೆ. ಯತ್ನಾಳ್ ಅವರಿಗೆ ಈಗಿನ್ನು 55 ವಯಸ್ಸು, ರಾಜಕೀಯದಲ್ಲಿ ಅವರಿಗೆ ಇನ್ನೂ 25 ವರ್ಷ ಉತ್ತಮ ಭವಿಷ್ಯವಿದೆ, ಯತ್ನಾಳ್ ಅನುಭವ ಬಳಸಿಕೊಳ್ಳಲು ಹೆಚ್ಚಿನ ಆದ್ಯತೆ ಸಿಗಲಿದೆ. ಅವರ ಜೊತೆ‌ ಮಾತುಕತೆ ಯಶಸ್ವಿಯಾಗಿದೆ. ಅವರೂ ಖುಷಿ ಆಗಿರುವುದನ್ನು ನೀವೇ ನೋಡುತ್ತಿದ್ದೀರಿ ಎಂದು ಹೇಳಿದರು.

ಯತ್ನಾಳ್ ಸಚಿವರಾಗಬಾರದೇ, ಆದರೆ ಯಾರನ್ನು ಸಚಿರನ್ನಾಗಿ ಮಾಡಬೇಕೆಂದು ಸಿ.ಎಂ ನಿರ್ಧರಿಸಲಿದ್ದಾರೆ, ಅದು ಅವರ ಪರಮಾಧಿಕಾರ. ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ವಿಚಾರ ಅದು ಸಿಎಂ ಪರಮಾಧಿಕಾರ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios