ಬೆಂಗಳೂರು(ಅ.23): ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುನಿರತ್ನ ಪರ ವಸತಿ ಸಚಿವ ವಿ.ಸೋಮಣ್ಣ ಗುರುವಾರ ವಿವಿಧೆಡೆ ಪ್ರಚಾರ ಕೈಗೊಂಡರು.

ನಾಗರಬಾವಿಯಲ್ಲಿ ಆಯೋಜಿಸಿದ ಸಭೆಯಲ್ಲಿ ಮುನಿರತ್ನ ಪರವಾಗಿ ಮತಯಾಚಿಸಿದರು. ಬಸವ ಸಮಿತಿ ಬಳಗವು ಪ್ರಚಾರ ಸಭೆಯನ್ನು ಆಯೋಜನೆ ಮಾಡಿತ್ತು. ಕ್ಷೇತ್ರದಲ್ಲಿ ಮುನಿರತ್ನ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು. ಅಲ್ಲದೇ ಕೊಟ್ಟಿಗೆಪಾಳ್ಯ ಮತ್ತು ಮಾಳಗಾಳ ಪ್ರದೇಶಗಳಲ್ಲಿ ಸಂಚರಿಸಿ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಪ್ರಚಾರ ನಡೆಸಿದರು.

ತನ್ನದೇ ಅಭ್ಯರ್ಥಿ ಬಿಟ್ಟು ಪಕ್ಷೇತರಗೆ ಜೆಡಿಎಸ್‌ ಬೆಂಬಲ!

ಈ ವೇಳೆ ಬಿಜೆಪಿ ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್‌ ಉಪಸ್ಥಿತರಿದ್ದರು. ಬಳಿಕ ಪಾಲಿಕೆ ಮಾಜಿ ಸದಸ್ಯ ವೆಂಕಟೇಶ ಬಾಬು ನಿವಾಸದಲ್ಲಿ ಸಭೆ ನಡೆಸಿ ಗೆಲುವಿನ ರಣತಂತ್ರ ರೂಪಿಸಲಾಯಿತು. ಕ್ಷೇತ್ರದ ವಿವಿಧೆಡೆ ಪಾದಯಾತ್ರೆ ಕೈಗೊಂಡು ಸಹ ಮುನಿರತ್ನ ಪರ ಮತಯಾಚಿಸಲಾಯಿತು.