ಮೋದಿ ಫೋಟೋ ಬಿಟ್ಟು, ಸಿದ್ದೇಶ್ವರ ಚುನಾವಣೆಗೆ ನಿಲ್ಲಲಿ: ಸಚಿವ ಮಲ್ಲಿಕಾರ್ಜುನ

ಗಣಿಗಾರಿಕೆಯಲ್ಲಿ 220 ಕೋಟಿ ರು.ಗಳಷ್ಟುಅಕ್ರಮವಾಗಿರುವ ಬಗ್ಗೆ ನನ್ನಲ್ಲಿ ದಾಖಲೆಗಳಿದ್ದು, ಅದಕ್ಕೆ ಬೇಕಾದರೆ ಚರ್ಚೆಗೆ ಬರಲಿ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್‌ಗೆ ಪಂಥಾಹ್ವಾನ ನೀಡಿದ್ದಾರೆ.
 

Minister SS Mallikarjun Slams On MP Dr GM Siddeshwar gvd

ದಾವಣಗೆರೆ (ಆ.01): ಗಣಿಗಾರಿಕೆಯಲ್ಲಿ 220 ಕೋಟಿ ರು.ಗಳಷ್ಟುಅಕ್ರಮವಾಗಿರುವ ಬಗ್ಗೆ ನನ್ನಲ್ಲಿ ದಾಖಲೆಗಳಿದ್ದು, ಅದಕ್ಕೆ ಬೇಕಾದರೆ ಚರ್ಚೆಗೆ ಬರಲಿ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್‌ಗೆ ಪಂಥಾಹ್ವಾನ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಮೈನಿಂಗ್‌ನಲ್ಲಿ ತಾವೇನೂ ಮಾಡಿಲ್ಲವೆಂದು ಹೇಳುವವರು 220 ಕೋಟಿ ರು. ಅಕ್ರಮ ಮಾಡಿದವರ ಬಗ್ಗೆ ದಾಖಲೆಗಳ ಸಮೇತ ಚರ್ಚೆಗೆ ನಾನು ಸಿದ್ಧನಿದ್ದು, ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಫೋಟೋ ಬಿಟ್ಟು, ಸಿದ್ದೇಶ್ವರ ಚುನಾವಣೆಗೆ ನಿಲ್ಲಲಿ. ನಾನೂ ಸಹ ಕಾಂಗ್ರೆಸ್‌ ಪಕ್ಷವನ್ನು ಬಿಟ್ಟು, ಚುನಾವಣೆಗೆ ನಿಲ್ಲುತ್ತೇನೆ. ಆಗ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೋ ನೋಡೋಣ ಎಂದು ಸಿದ್ದೇಶ್ವರ್‌ಗೆ ಮತ್ತೊಂದು ಸವಾಲೆಸೆದರು.

ಹೊಸ ತಾಲೂಕುಗಳಿಗೆ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸಲು ಬದ್ಧ: ಸಚಿವ ಕೃಷ್ಣ ಬೈರೇಗೌಡ

ಸಿದ್ದೇಶ್ವರ 1994ರಲ್ಲಿ ಹೇಗಿದ್ದರು? ನಾವು, ನಮ್ಮ ಅಪ್ಪ ಬಡ್ಡಿ ವ್ಯವಹಾರ ಇದುವರೆಗೂ ಮಾಡಿಲ್ಲ. ನಮ್ಮಪ್ಪ ಭೀಮಸಮುದ್ರದ ಬಿಟಿ ಕುಟುಂಬದ ಜೊತೆಗೆ ಕೈಗಡ ವ್ಯವಹಾರ ಹೊಂದಿದ್ದರು. ನಾವು ಯಾವತಿಗೂ ಬಡ್ಡಿ ಲೇವಾದೇವಿ ವ್ಯವಹಾರ ಮಾಡಿಲ್ಲ. ಒಂದಕ್ಕೆ ನಾಲ್ಕು ರುಪಾಯಿ ಬಡ್ಡಿ ವ್ಯವಹಾರ ಮಾಡಿ, ಲೂಟಿ ಹೊಡೆದಿರಬಹುದು ಎಂದು ಸಿದ್ದೇಶ್ವರ ವಿರುದ್ಧ ವಾಗ್ದಾಳಿ ನಡೆಸಿದರು.

ಆನೆಕೊಂಡ ಭಾಗದ ಪಾರ್ಕನ್ನೇ ಉಪ ನೋಂದಣಾಧಿಕಾರಿ ರಿಜಿಸ್ಟರ್‌ ಮಾಡಿಕೊಟ್ಟಪ್ರಕರಣ ಹೊರ ಬಂದಿದೆ. ಪಾಲಿಕೆ ಸದಸ್ಯನೊಬ್ಬನ ಅಕ್ಕ, ಆತನ ಅಪ್ಪ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. 2021ರಲ್ಲಿ ಪಾರ್ಕ್ ಜಾಗವನ್ನೇ ಖಾತೆ ಮಾಡಿ, 2022ರಲ್ಲಿ ರಿಜಿಸ್ಟರ್‌ ಮಾಡಿಕೊಂಡಿದ್ದಾರೆ. ಇಂತಹ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ಉಪ ನೋಂದಣಾಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಖಾತೆ ಮಾಡಿಕ್ಟೊಟ ಅಧಿಕಾರಿಯನ್ನು ಪಾಲಿಕೆಯಿಂದ ಸಸ್ಪೆಂಡ್‌ ಮಾಡಲಾಗಿದೆ. ಇದಕ್ಕೆಲ್ಲಾ ಸಂಸದ ಸಿದ್ದೇಶ್ವರ ಕಾರಣ ಎಂದು ಆರೋಪಿಸಿದರು.

ಶೀಘ್ರ ಪರಿಷ್ಕೃತ ಮರಳು ನೀತಿ ಜಾರಿ: ತಮಿಳುನಾಡು, ಆಂಧ್ರ ಪ್ರದೇಶದ ಮರಳು ನೀತಿ ಪರಿಶೀಲಿಸಿ, ರಾಜ್ಯದಲ್ಲೂ ಹೊಸದಾದ, ಪರಿಷ್ಕೃತ ಮರಳು ನೀತಿಯೊಂದು ಜಾರಿಗೊಳಿಸುವುದಾಗಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಹೇಳಿದರು. ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಸದ್ಯಕ್ಕೆ ಮರಳಿನ ಕೊರತೆಯಂತೂ ಇಲ್ಲ. ಎಲ್ಲೆಲ್ಲಿ ಟೆಂಡರ್‌ ಅವಧಿ ಮುಗಿದಿದೆಯೋ ಅಂತಹ ಕಡೆ ಹೊಸದಾಗಿ ಟೆಂಡರ್‌ ಕರೆಯಲು ಕ್ರಮ ಕೈಗೊಳ್ಳುತ್ತೇವೆ ಎಂದರು.

ದೆಹಲಿಯಲ್ಲಿ ರಾಹುಲ್‌ ಗಾಂಧಿ ನಮ್ಮ ಸಚಿವರ ಸಭೆ ಕರೆದಿದ್ದಾರೆ. ರಾಜಕೀಯವಾಗಿ, ಪಕ್ಷದ ಬೆಳವಣಿಗೆ ಹಾಗೂ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು, ರಾಹುಲ್‌ ಗಾಂಧಿ ಸಭೆ ನಡೆಸುತ್ತಿದ್ದಾರೆ. ನಾನೂ ದೆಹಲಿಗೆ ಹೋಗುತ್ತಿದ್ದೇನೆ. ನಮ್ಮ ಸಚಿವರ ಜೊತೆಗೆ ಕೆಲವು ಹಿರಿಯ ಶಾಸಕರೂ ಸಭೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.

ಬಿಜೆಪಿಯಂತೆ ಭ್ರಷ್ಟಚಾರಿ ಸರ್ಕಾರ ನಮ್ಮದಲ್ಲ. ನಮ್ಮ ಸಚಿವರು, ಶಾಸಕರ ಮಧ್ಯೆ ಅಲ್ಪಸ್ವಲ್ಪ ಅಸಮಾಧಾನ, ಗೊಂದಲ ಇದ್ದುದರಿಂದ ಸಭೆ ಕರೆಯಲಾಗಿತ್ತು. ಎಲ್ಲವೂ ಸರಿಯಾಗಿದೆ. ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿದು ಹಾಕಿದರೆಂಬುದೆಲ್ಲಾ ಸುಳ್ಳು. ನಾನು ಸಹ ಸಿಎಲ್‌ಪಿ ಸಭೆಯಲ್ಲಿದ್ದೆ. ಅಲ್ಲಿ ಅಂತಹದ್ದೇನೂ ಆಗಿಲ್ಲ ಎಂದ ಅವರು, ಜಿಲ್ಲೆಯ ನಾಲ್ವರು ಶಾಸಕರು ಸಿಎಂಗೆ ಬರೆದ ಪತ್ರದಲ್ಲಿ ಸಹಿ ಹಾಕಿದ್ದರು ಎಂಬ ವಿಚಾರ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ಆ.15ರಿಂದ ಇ-ಆಫೀಸ್ ಮೂಲಕವೇ ಪತ್ರ ವ್ಯವಹಾರ: ಸಚಿವ ಕೃಷ್ಣ ಬೈರೇಗೌಡ

ನಾನು ಜಿ.ಎಂ.ಸಿದ್ದೇಶ್ವರಿಂದ ಸಂಸ್ಕಾರ ಕಲಿಯಬೇಕಿಲ್ಲ. ನಾನು ಬೇಕಿದ್ದರೆ ಸಂಸ್ಕಾರ ಹೇಳಿಕೊಡುತ್ತೇನೆ. ನಮ್ಮಪ್ಪ, ನಮ್ಮವ್ವ ನಮಗೆ ಸಂಸ್ಕಾರ ಕಲಿಸಿದ್ದಾರೆ. ಬಡ್ಡಿ ಸಮೇತ ವಸೂಲಿ ಮಾಡಿದ್ದೇನೆಂದು ಹೇಳಿಕೆ ಕೊಟ್ಟಿದ್ದಾರೆ. ಬಡ್ಡಿ ಸಮೇತ ವಸೂಲಿ ಮಾಡಿರುವ ಸಂಸದ ಊರು ಹಾಳು ಮಾಡಿದ್ದಾರೆ.
-ಎಸ್‌.ಎಸ್‌.ಮಲ್ಲಿಕಾರ್ಜುನ, ಜಿಲ್ಲಾ ಉಸತುವಾರಿ ಸಚಿವ

Latest Videos
Follow Us:
Download App:
  • android
  • ios