ಬೆಂಗಳೂರು, (ನ.10): ಬಿಜೆಪಿ ಪಾರ್ಟಿಗೆ ಬಿ.ವೈ. ವಿಜಯೇಂದ್ರ ಬಾಹುಬಲಿ ಇದ್ದಂತೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಶ್ಲಾಘಿಸಿದ್ದಾರೆ.

ಆರ್​ಆರ್​ ನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲು ಇಡುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಭೇಟಿ ಮಾಡಿದರು.

ನಮ್ಮ ಕೇಂದ್ರದ ನಾಯಕರ ಜತೆ ಸಿದ್ದರಾಮಯ್ಯ ಸಂಪರ್ಕ: ಬಾಂಬ್ ಸಿಡಿಸಿದ ಬಿಜೆಪಿ ಸಂಸದ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು,  ಮುಖ್ಯಮಂತ್ರಿಗಳು ಮತ್ತು ಅವರ ಆಡಳಿತದ ಮೇಲೆ ಜನ ನಂಬಿಕೆ ಇಟ್ಟಿದ್ದರು. ಆ‌ಕಾರಣದಿಂದ ಇವತ್ತು ನಾವು ಗೆಲ್ತಿದ್ದೇವೆ. ನಮ್ಮ ಯುವ ನಾಯಕ ವಿಜಯೇಂದ್ರ ಮುಂದಾಳತ್ವದಲ್ಲಿ ಗೆಲುವಾಗುತ್ತಿದೆ ಎಂದರು.

ನಾನು ಹಿಂದೆ ಒಂದು ಮಾತು ಹೇಳಿದ್ದೆ, ವಿಜಯೇಂದ್ರ ಎಲ್ಲೇ ಹೊದ್ರು ಗೆಲ್ಲುತ್ತಾರೆ ಅಂತ ಹೇಳಿದ್ದೆ, ಅದ್ರಂತೆ ಗೆಲುವು ಆಗುತ್ತಿದೆ. ಅವರು ಹೋದ ಕಡೆ ಎಲ್ಲಾ ಕಡೆ ಗೆಲ್ಲಿಸಿಕೊಂಡು ಬರ್ತಿದ್ದಾರೆ. ವಿಜಯೇಂದ್ರ ಅವರು ಬಿಜೆಪಿ ಪಾರ್ಟಿಗೆ ಬಾಹುಬಲಿ ಇದ್ದಂತೆ ಎಂದು ಸಚಿವ ಶ್ರೀರಾಮುಲು ಹಾಡಿ ಹೊಗಳಿದರು.