ಮೈಸೂರು, (ನ.10):  ಸಿದ್ದರಾಮಯ್ಯ ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರವ ಬಗ್ಗೆ ಗುಮಾನಿ ಇದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ಉಪಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲಿದೆ . ದೆಹಲಿ ಮಾಹಿತಿ ಆಧಾರದ ಮೇಲೆ ಹೇಳ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು.

'ಬೈ ಎಲೆಕ್ಷನ್ ರಿಸಲ್ಟ್ ನಂತ್ರ ಸಿಎಂ ಬದಲಾವಣೆ, ದೆಹಲಿ ಮಾಹಿತಿ ಆಧಾರದ ಮೇಲೆ ಹೇಳ್ತಿದ್ದೇನೆ'

ಇದಕ್ಕೆ ಮೈಸೂರಿನಲ್ಲಿ ಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಅವರು,  ರಾಜ್ಯದಲ್ಲೇ ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದರು.

ನಮ್ಮ ಪಕ್ಷದ ನಮಗಿಂತ ಹೆಚ್ಚಾಗಿ ಸಿದ್ದರಾಮಯ್ಯಗೆ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ಯಾವ ಮೂಲದಿಂದ ಇದು ಗೊತ್ತಾಗಿದೆ ಗೊತ್ತಿಲ್ಲ. ಬಹುಶಃ ಅವರು ನಮ್ಮ ಕೇಂದ್ರದ ನಾಯಕರ ಸಂಪರ್ಕ ಸಾಧಿಸಿರಬಹುದು ಎಂದು ಹೇಳಿದರು.

ಕಾಂಗ್ರೆಸ್‌ನಲ್ಲಿ ನನಗೆ ಉಳಿಗಾಲವಿಲ್ಲವೆಂದು ಬಿಜೆಪಿ ಜೊತೆ ಕೈ ಜೋಡಿಸಲು ಮುಂದಾಗಿರಬಹುದು. ಇದರಿಂದ ಅವರು ಈ ರೀತಿ ಹೇಳಿಕೆ ನೀಡುತ್ತಿರಬಹುದು. ಮುಂದಿನ ಎರಡು ವರೇ  ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಟಾಂಗ್ ಕೊಟ್ಟರು.