Asianet Suvarna News Asianet Suvarna News

ಚುನಾವಣೆ ಬಂದಾಗ ಮಾತ್ರ ಪಾಕಿಸ್ತಾನ, ಮಸೀದಿ, ಗಣೇಶ ನೆನಪು: ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ತಂಗಡಗಿ

ರಾಹುಲ್ ಗಾಂಧಿ ಎಂದರೆ ಬಿಜೆಪಿಗೆ ಭಯ ಉಂಟಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಬರುತ್ತವೆ: ಸಚಿವ ಶಿವರಾಜ ತಂಗಡಗಿ 

Minister Shivaraj Tangadagi Slams BJP grg
Author
First Published Oct 8, 2023, 10:11 PM IST

ರಾಮಮೂರ್ತಿ ನವಲಿ

ಗಂಗಾವತಿ(ಅ.08):  ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷ ವಯೋಮಾನ ಕಡ್ಡಾಯವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.  

ಇಂದು(ಭಾನುವಾರ) ತಾಲೂಕಿನ ಹಣವಾಳ ಗ್ರಾಮದಲ್ಲಿ 100 ಕೆವಿ ವಿದ್ಯುತ್ ಉಪ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ ಅವರು, ಈಗಾಗಲೇ ರಾಜ್ಯೋತ್ಸವ ಪ್ರಶಸ್ತಿಗೋಸ್ಕರ ಸಾಕಷ್ಟು ಅರ್ಜಿಗಳು ಬಂದಿವೆ. ಆನ್ ಲೈನ್ ಮೂಲಕ ಅರ್ಜಿಗಳನ್ನು ಹಾಕಿದ್ದಾರೆ. ಇದಕ್ಕಾಗಿ 38 ಸದಸ್ಯರುಳ್ಳ ಸಮಿತಿ ರಚೆನೆಯಾಗಿದ್ದು, ಸೆ.11 ರಂದು ಸಭೆ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸರಕಾರ ಗುರಿತಿಸಿ ಪ್ರಶಸ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದರು.

ಮುಸ್ಲಿಂ ಸಮುದಾಯದವರು ಸಿದ್ದು ನಂಬಿ ಬಂದವರು: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ

ನ.30ರ ತನಕ ಎಡದಂಡೆ ಕಾಲುವೆಗೆ ನೀರು: 

ತುಂಗಭದ್ರಾ ಎಡದಂಡೆ ಕಾಲುವೆಗೆ  ನ.30 ರ ತನಕ ನೀರು ಬಿಡಲಾಗುತ್ತದೆ ರೈತರು ಆತಂಕ ಪಡಬೇಕಾಗಿಲ್ಲ. 3 ದಿನದಲ್ಲಿ ಜಲಾಶಯಕ್ಕೆ 5 ಸಾವಿರ ಕ್ಯೂಸೆಕ್ಸ್ ನೀರು ಬಂದಿದೆ, ಎಡರನೇ ಬೆಳೆಗೆ ನೀರು ಬಿಡುವ ವಿಚಾರ ನಂತರ ಚರ್ಚಿಸಲಾಗುತ್ತದೆ ಎಂದರು. 

ಅಮೆರಿಕದ ವಿವಿಯಿಂದ ಖ್ಯಾತ ವಿಜ್ಞಾನಿಗಳ ಪಟ್ಟಿ ಘೋಷಣೆ: ಗಂಗಾವತಿಯ ಇಬ್ಬರಿಗೆ ಸ್ಥಾನ

ನವಲಿ ರೈಸ್ ಪಾರ್ಕ್‌ಗೆ 158 ಕೋಟಿ ರೂ. ಅನುದಾನವನ್ನ ಈ ಹಿಂದೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ನೀಡಲಾಗಿತ್ತು. ಈಗ ನಾವೇ ಮಾಡಿದ್ದೇವೆ ಎಂದು ಮಾಜಿ ಶಾಸಕರು ಹೇಳಿ ಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಜನರಿಗೆ ಗೊತ್ತಿದೆ. ಜಾತಿಗಣತಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ ಎಂದರು. 

ಕೇಂದ್ರಕ್ಕೆ ಬಡವರ ಯೋಜನೆ ಬಗ್ಗೆ ಗಮನ ಇಲ್ಲ. ಆದರೆ ಬಿಜೆಪಿ ಮೋದಿ ಸರಕಾರ 9 ವರ್ಷದಿಂದ ಏನು ಮಾಡಿದೆ. ಕೇವಲ ಚುನಾವಣೆ ಬಂದಾಗಲೆಲ್ಲ ಪಾಕಿಸ್ತಾನ, ಮಸೀದಿ, ಗಣೇಶ, ಅಂಜನಾದ್ರಿ ನೆನಪಾಗುತ್ತದೆ ಎಂದರು. ರಾಹುಲ್ ಗಾಂಧಿ ಎಂದರೆ ಬಿಜೆಪಿಗೆ ಭಯ ಉಂಟಾಗಿದೆ. ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಬರುತ್ತವೆ. ಗಂಗಾವತಿಯಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ನಡೆದ ಗಲಭೆ ಬಗ್ಗೆ ಪೊಲೀಸರ ಮೇಲೆ ಕ್ರಮ ಕೈಗೊಂಡಿದೆ ಎಂದರು.

Follow Us:
Download App:
  • android
  • ios