ಮೋದಿ ಬರೋ ಮೊದಲು ದೇಶಕ್ಕೆ ಭದ್ರತೆ ಇರಲಿಲ್ವಾ?: ಸಚಿವ ಶಿವರಾಜ ತಂಗಡಗಿ
ಬಿಜೆಪಿಯವರು ಜಾತಿ ಜಾತಿಗಳ ಮಧ್ಯೆ ಜಗಳ, ದೇವಸ್ಥಾನ, ಧರ್ಮ ಕೊನೆಗೆ ಅಂಜನಾದ್ರಿ ಬಿಟ್ಟರೆ ಅಭಿವೃದ್ಧಿಯ ಮಾತಿಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿಯವರ ಹೆಸರಲ್ಲಿ ವೋಟು ಕೇಳ್ತಾರೆ. ಮೋದಿಯವರನ್ನು ನೋಡಿದ್ರೆ ವೋಟು ಹಾಕಲೇಬಾರದು ಎಂದು ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದರು.
ಕೊಪ್ಪಳ (ಏ.8): ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿದೆ. ಏನೂ ಸಮಸ್ಯೆ ಇಲ್ಲ. ಇಕ್ಬಾಲ್ ಅನ್ಸಾರಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಬಾರದಿತ್ತು ಹೇಳಿದ್ದಾರೆ. ಈಗಾಗಲೇ ಎಲ್ಲರೂ ಮಾತನಾಡಿದ್ದಾರೆ. ಸರಿ ಮಾಡುತ್ತಾರೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಗಂಗಾವತಿ ಕಾಂಗ್ರೆಸ್ ಬಣ ರಾಜಕೀಯ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, ಪಕ್ಷದಲ್ಲಿ ಭಿನ್ನಭಿಪ್ರಾಯ ಸಹಜ ನಾಯಕರು ಎಲ್ಲ ಸರಿಪಡಿಸುತ್ತಾರೆ. ಯಾವುದೇ ಸಮಸ್ಯೆ ಇಲ್ಲ ಎಂದರು. ಇದೇ ವೇಳೆ ಸಚಿವ ಸ್ಥಾನ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶ್ರೀನಾಥ ಧಣಿಯವರಿಗೆ ಒಳ್ಳೆಯದಾಗಲಿ, ನಾನಷ್ಟೇ ಅಲ್ಲ, ಪಕ್ಷದಲ್ಲಿ ಇರೋ ಎಲ್ಲರೂ ಅಷ್ಟೇ. ಚುನಾವಣೆಯ ಮೇಲೆ ಯಾರದೂ ಭವಿಷ್ಯ ಇಲ್ಲ. ನಾವು ಗೆದ್ದೇ ಗೆಲ್ತೇವೆ. ಹೈಕಮಾಂಡ್ ಹೇಳಿದಂತೆ ಕೆಲಸ ಮಾಡುವ ನಾನು ನಿಷ್ಠಾವಂತ ಕಾರ್ಯಕರ್ತ. ನಾನು ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡ್ತೇನೆ. ಎಲ್ಲರೂ ಸೇರಿ ಚುನಾವಣೆ ಎದುರಿಸುತ್ತೇವೆ. ಗಂಗಾವತಿ ಕಾಂಗ್ರೆಸ್ನಲ್ಲಿ ಎರಡು ಬಣಗಳ ಉದ್ದೇಶ ಒಂದೇ ಆಗಿದೆ. ಚುನಾವಣೆ ಬಳಿಕ ಎಲ್ಲರೂ ಒಂದೆಡೆ ಸೇರೋಣ ಎಂದು ಮಾತು ಕೊಟ್ಟಿದ್ದಾರೆ ಎಂದರು.
ಮೋದಿ ಎನ್ನುವವರಿಗೆ ಕಪಾಳಮೋಕ್ಷ ಹೇಳಿಕೆಗೆ ಬದ್ಧ: ಸಚಿವ ಶಿವರಾಜ್ ತಂಗಡಗಿ
ಏ.16ನೇ ತಾರೀಕಿಗೆ ಕೊಪ್ಪಳ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸುತ್ತಾರೆ. ಅಂದು ಸತೀಶ್ ಜಾರಕಿಹೊಳಿ, ಎಚ್‌ಕೆ ಪಾಟೀಲ್ ಸೇರಿ ಹಲವು ನಾಯಕರು ಭಾಗಿಯಾಗಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಹಲವು ಕಡೆ ಪ್ರಚಾರ ಕಾರ್ಯ ಶುರು ಮಾಡಿದ್ದೇವೆ. ಕೊಪ್ಪಳದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ನಾನು ದೇಶದಲ್ಲಿ ಮೋದಿಯವರು ಮಾಡಿರೋ ಕೆಲಸದ ಬಗ್ಗೆ ಕೇಳಿದ್ದಕ್ಕೆ ನೋವಾಗಿದೆ. ಬಿಜೆಪಿ ಸರ್ಕಾರ ಯಾವ ಭರವಸೆಯನ್ನೂ ಈಡೇರಿಸಿಲ್ಲ, ಸುಳ್ಳು ಹೇಳಿದ್ದಾರೆ. ಪುಲ್ವಾಮಾ ದಾಳಿಯ ಬಗ್ಗೆ ತನಿಖೆ ಮಾಡಿ ಶಿಕ್ಷೆ ಕೊಡುವ ಮಾತು ಹೇಳಿದ್ದರು. ಆದರೆ ಇದುವರೆಗೂ ಅದರ ಬಗ್ಗೆ ಮಾತಾಡಿಲ್ಲ. ಪುಲ್ವಾಮಾದಲ್ಲಿ ಏನಾಗಿದೆ ಎಂದು ದೇಶದ ಜನರಿಗೆ ಹೇಳಬೇಕಲ್ಲ. ಪುಲ್ವಾಮಾ ಬಗ್ಗೆ ಮಾಧ್ಯಮದ ಎದುರು ಚುನಾವಣಾ ಪ್ರಚಾರದಲ್ಲಿ ಮಾತಾಡಲಿ. ನಾವು ಸತ್ಯ ಮಾತಾಡಿದ್ರೆ ಬಿಜೆಪಿಯವರಿಗೆ ನೋವಾಗತ್ತೆ. ನಮಗೆ ಸುಳ್ಳು ಹೇಳಲು ಬರೊಲ್ಲ ಎಂದು ವಾಗ್ದಾಳಿ ನಡೆಸಿದರು.
'ಮೋದಿ ಯುವ ಪಡೆಯ ಕಪಾಳಕ್ಕೆ ಹೊಡೆಯುವ ಶಕ್ತಿ 'ಕೈ'ಗೆ ಇದೆಯೇ?': ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಜೋಶಿ ತಿರುಗೇಟು
ಬಿಜೆಪಿಯವರು ಜಾತಿ ಜಾತಿಗಳ ಮಧ್ಯೆ ಜಗಳ, ದೇವಸ್ಥಾನ, ಧರ್ಮ ಕೊನೆಗೆ ಅಂಜನಾದ್ರಿ ಬಿಟ್ಟರೆ ಅಭಿವೃದ್ಧಿಯ ಮಾತಿಲ್ಲ. ಬಿಜೆಪಿ ಅಭ್ಯರ್ಥಿಗಳು ಮೋದಿಯವರ ಹೆಸರಲ್ಲಿ ವೋಟು ಕೇಳ್ತಾರೆ. ಮೋದಿಯವರನ್ನು ನೋಡಿದ್ರೆ ವೋಟು ಹಾಕಲೇಬಾರದು. ನಾನು ಪ್ರತಿ ಹಳ್ಳಿ ಹಳ್ಳಿಗೆ ಹೋಗಿ ಹೇಳ್ತೇನೆ. ಬಿಜೆಪಿಯವರು ನಿಮ್ಮ ಯೋಜನೆಗಳ ಪಟ್ಟಿ ತಗೊಂಡು ಬನ್ನಿ, ಎಲ್ಲಿ ಅಭಿವೃದ್ಧಿ ಕೆಲಸ ಆಗಿದೆ ಎಂದು ತೋರಿಸಿ. ನಾನು ನಮ್ಮ ಪಕ್ಷದ ಸಾಧನೆಯ ಪಟ್ಟಿ ತಗೊಂಡು ಬರ್ತೇನೆ. ಮೋದಿ ದೇಶದ ಐಕ್ಯತೆಗಾಗಿ, ಭದ್ರತೆಗಾಗಿ ಅಂತಾ ಬಿಜೆಪಿಯವರು ಹೇಳ್ತಾರೆ. ಆದರೆ ಇವರು ಬರೋ ಮೊದಲು ದೇಶಕ್ಕೆ ಭದ್ರತೆ ಇರಲಿಲ್ಲವಾ? ದೇಶದ ಜನರ ಮನಸು ಕೆಡಿಸೋದು ಕೆಲಸ ಮಾಡಿದ್ರೆ ನಡೆಯೊಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.