Asianet Suvarna News Asianet Suvarna News

ಮೋದಿ ಎನ್ನುವವರಿಗೆ ಕಪಾಳಮೋಕ್ಷ ಹೇಳಿಕೆಗೆ ಬದ್ಧ: ಸಚಿವ ಶಿವರಾಜ್‌ ತಂಗಡಗಿ

ಮಾಧ್ಯಮದವರು ನನ್ನ ಭಾಷಣದ ಪೂರ್ಣಪಾಠವನ್ನು ಹಾಕಿ, ಕೇವಲ ತುಣುಕನ್ನು ಮಾತ್ರ ಏಕೆ ಹಾಕಿದ್ದೀರಿ?. ನನ್ನ ಪೂರ್ಣ ಭಾಷಣಕ್ಕೆ ನಾನು ಬದ್ಧನಾಗಿದ್ದೇನೆ. ರಾಜ್ಯಕ್ಕೆ ಬಿಜೆಪಿ ಮಾಡಿರುವ 2 ಕೋಟಿ ಉದ್ಯೋಗ, ಬರ ಪರಿಹಾರ, ಅನುದಾನ, ನರೇಗಾ ಅನ್ಯಾಯದ ಬಗ್ಗೆ ಉತ್ತರ ಕೊಡಲು ಬಿಜೆಪಿಯವರು ಸಿದ್ದರಿದ್ದೀರಾ?’ ಎಂದು ಸವಾಲು ಹಾಕಿದ ತಂಗಡಗಿ 

Committed to the Statement about Slap to PM Narendra Modi says Minister Shivaraj Tangadagi grg
Author
First Published Mar 27, 2024, 8:59 AM IST

ಬೆಂಗಳೂರು(ಮಾ.27): ‘ಬಿಜೆಪಿಯವರು ಸುಳ್ಳು, ಕಪಟದಿಂದ ನಮ್ಮ ಯುವಕರು, ಮಕ್ಕಳ ಹಾದಿ ತಪ್ಪಿಸುತ್ತಿದ್ದಾರೆ. ಅವರನ್ನು ತಿದ್ದಲು ಒಬ್ಬ ಅಣ್ಣ, ಚಿಕ್ಕಪ್ಪನ ಸ್ಥಾನದಲ್ಲಿ ನಿಂತು ಉತ್ತರ ಕರ್ನಾಟಕ ಭಾಷೆಯಲ್ಲಿ ಬುದ್ಧಿ ಹೇಳಿದ್ದೇನೆ. ಹೊಡಿ ಬಡಿ ಸಂಸ್ಕೃತಿ ಬಿಜೆಪಿಯದ್ದೇ ಹೊರತು ನಮ್ಮದಲ್ಲ. ಕಾರಟಗಿಯಲ್ಲಿ ನೀಡಿರುವ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ.

‘ಮಾಧ್ಯಮದವರು ನನ್ನ ಭಾಷಣದ ಪೂರ್ಣಪಾಠವನ್ನು ಹಾಕಿ, ಕೇವಲ ತುಣುಕನ್ನು ಮಾತ್ರ ಏಕೆ ಹಾಕಿದ್ದೀರಿ?. ನನ್ನ ಪೂರ್ಣ ಭಾಷಣಕ್ಕೆ ನಾನು ಬದ್ಧನಾಗಿದ್ದೇನೆ. ರಾಜ್ಯಕ್ಕೆ ಬಿಜೆಪಿ ಮಾಡಿರುವ 2 ಕೋಟಿ ಉದ್ಯೋಗ, ಬರ ಪರಿಹಾರ, ಅನುದಾನ, ನರೇಗಾ ಅನ್ಯಾಯದ ಬಗ್ಗೆ ಉತ್ತರ ಕೊಡಲು ಬಿಜೆಪಿಯವರು ಸಿದ್ದರಿದ್ದೀರಾ?’ ಎಂದು ತಂಗಡಗಿ ಸವಾಲು ಹಾಕಿದರು.

‘ಮೋದಿ ಮೋದಿ’ ಎನ್ನುವವರ ಕಪಾಳಕ್ಕೆ ಬಾರಿಸಿ: ತಂಗಡಗಿ..!

ಮೋದಿ ಮೋದಿ ಎನ್ನುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂಬ ತಮ್ಮ ಹೇಳಿಕೆ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಹೊಡಿ ಬಡಿ ಸಂಸ್ಕೃತಿ ನಮ್ಮದಲ್ಲ. ತ್ರಿಶೂಲ, ದೊಣ್ಣೆ ತೆಗೆದುಕೊಂಡು ಹೋಗಲ್ಲ. ಬಿಜೆಪಿ ನಾಯಕರಂತೆ ಪ್ರತಿಭಟನೆ ನಡೆಸುವವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಲ್ಲ. ಕೇಂದ್ರದಿಂದ ಆಗಿರುವ ಅನ್ಯಾಯವನ್ನು ಪ್ರಶ್ನಿಸಲು ಹೇಳಿದ್ದೇನೆ ಅಷ್ಟೇ’ ಎಂದು ಸ್ಪಷ್ಟಪಡಿಸಿದರು.

ನಮ್ಮ ತಾಯಿಯನ್ನು ಬಿಜೆಪಿ ಕಚೇರಿಗೆ ಕರೆ ತರುವೆ

ನನ್ನ ಹುಟ್ಟಿನ ಬಗ್ಗೆ ಬಿಜೆಪಿ ಸಿ.ಟಿ. ರವಿ ತುಂಬಾ ಹಗುರವಾಗಿ ಮಾತನಾಡಿದ್ದಾರೆ. ಸಂಸ್ಕೃತಿ ಹೀನ ಸಿ.ಟಿ. ರವಿ ಅವರೇ ನೀವು ಸವಾಲಿಗೆ ಸಿದ್ದರಿದ್ದರೆ ನನ್ನ ತಾಯಿಯನ್ನು ಬಿಜೆಪಿ ಕಚೇರಿಗೆ ಕರೆದುಕೊಂಡು ಬರುತ್ತೇನೆ. ನೀವು ಬರಲು ಸಿದ್ಧರಿದ್ದೀರಾ? ಎಂದು ಸಚಿವ ಶಿವರಾಜ್‌ ತಂಗಡಗಿ ಪ್ರಶ್ನಿಸಿದ್ದಾರೆ.

ಬಿಜೆಪಿಯವರು ತ್ರಿಶೂಲ, ಕತ್ತಿ, ಚಾಕು, ಚೂರಿ ಇಟ್ಟುಕೊಂಡು ಎಷ್ಟೋ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿದ್ದೀರಿ. ನಾವು ಸತ್ಯವನ್ನು ಹೇಳಿದರೆ ನಿಮಗೆ ಉರಿ ಬರುತ್ತಿದೆ. ಮೆಣಸಿಕಾಯಿ ಇಟ್ಟುಕೊಂಡಂತೆ ಆಗುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು.

'ಮೋದಿ ಯುವ ಪಡೆಯ ಕಪಾಳಕ್ಕೆ ಹೊಡೆಯುವ ಶಕ್ತಿ 'ಕೈ'ಗೆ ಇದೆಯೇ?': ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಜೋಶಿ ತಿರುಗೇಟು

ಬಿಜೆಪಿಯವರು 2014ರ ಲೋಕಾಸಭಾ ಚುನಾವಣೆ ವೇಳೆ ಮಾಡಿದ ಭಾಷಣಗಳನ್ನು ಅವರೇ ಕೇಳಲಿ. ಅವರ ಭಾಷಣ ಕೇಳಿ ಅವರೇ ಬಿಜೆಪಿಗೆ ಮತ ನೀಡುವುದಿಲ್ಲ. ಮೋದಿ ಸರ್ಕಾರದ 10 ವರ್ಷದ ಸಾಧನೆ ಮುಂದಿಟ್ಟುಕೊಂಡು ಚರ್ಚೆಗೆ ಬರಲಿ. ಮೋದಿ ಕೆಲಸ ಮಾಡಿದ್ದರೆ ನಾನೇ ಜೈ ಎನ್ನುತ್ತೇನೆ.

ಉತ್ತರ ಕರ್ನಾಟಕದಲ್ಲಿ ಈ ಹಿಂದೆ ನೆರೆ ಬಂದು ಮನೆ, ಬೆಳೆ ಸೇರಿದಂತೆ ಎಲ್ಲಾ ಹಾಳಾಯಿತು. ಆಗ ಮೋದಿಯವರು ಬರಲೇ ಇಲ್ಲ. ಈಗ ಚುನಾವಣೆ ಹೊತ್ತಲ್ಲಿ ಬಂದರೆ ಏನು ಪ್ರಯೋಜನ? ಎಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ. ಎಷ್ಟು ಅಣೆಕಟ್ಟು ಕಟ್ಟಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡದೆ ಮೋಸ ಮಾಡಿದ್ದೇಕೆ ಎಂಬ ಬಗ್ಗೆ ಚರ್ಚೆಗೆ ಬರಲಿ ಎಂದು ಹೇಳಿದರು.

Follow Us:
Download App:
  • android
  • ios