ಬಿಜೆಪಿಯವ್ರು ಅಯೋಧ್ಯಾ ಶ್ರೀರಾಮ ಮಂದಿರವನ್ನು ತಮ್ಮ ಸ್ವಂತ ಆಸ್ತಿ ಎಂದು ತಿಳಿದಿದ್ದಾರೆ. ಎಷ್ಟು ಜನ ಬಿಜೆಪಿಯವ್ರು ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಸಚಿವ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ (ಜ.13): ಬಿಜೆಪಿಯವ್ರು ಅಯೋಧ್ಯಾ ಶ್ರೀರಾಮ ಮಂದಿರವನ್ನು ತಮ್ಮ ಸ್ವಂತ ಆಸ್ತಿ ಎಂದು ತಿಳಿದಿದ್ದಾರೆ. ಎಷ್ಟು ಜನ ಬಿಜೆಪಿಯವ್ರು ರಾಮಮಂದಿರಕ್ಕೆ ದೇಣಿಗೆ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಸಚಿವ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಕೊಪ್ಪಳದ ಕಾರಟಗಿ ತಾಲೂಕಿನ ಮಾರಿಕ್ಯಾಂಪ್‌ನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ನಾನು ಸಹ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದೇನೆ. ರಾಮ‌ ಮಂದಿರಕ್ಕೆ ನಾವು ವಿರೋಧ ಮಾಡುತ್ತಿಲ್ಲ. ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಬಾಗಿಲು ತೆಗೆಸಿದ್ದೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ. ರಾಮ ನಮ್ಮವನೇ, ಹನುಮ ನಮ್ಮವನೇ ಎಂದ ಶಿವರಾಜ ತಂಗಡಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ 5 ಕೆಜಿ ಅಕ್ಕಿ ಹಣವನ್ನು ಜನರ ಖಾತೆಗೆ ಹಾಕುತ್ತಿದ್ದಾರೆ. ಬಿಜೆಪಿಯವರು ಮಂತ್ರಾಕ್ಷತೆ ನೀಡಲು ಓಡಾಡುತ್ತಿದ್ದಾರೆ, ಮೊದಲು ಜನರಿಗೆ ಅನ್ನ ನೀಡಲಿ ಎಂದು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರ ವಿರುದ್ಧ ಸಚಿವ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಅವನು ಏನಾದ್ರೂ ಹೇಳಲಿ, ಅವನಿಗೆ ಸೋಲ್ತೀನಿ ಅನ್ನೋ ಹೆದರಿಕೆ ಶುರು ಆಗಿದೆ: ಪ್ರತಾಪ್ ಸಿಂಹ ವಿರುದ್ಧ ಸಿಎಂ ಕಿಡಿ

ಈಗ ರಾಮ ಮಂದಿರ ಜಪ ಮಾಡುತ್ತಿದ್ದಾರೆ 15 ದಿನಗಳ ಬಳಿಕ ಪಾಕಿಸ್ತಾನ ವಿಷಯ ತರ್ತಾರೆ. ಚುನಾವಣೆಗೆಗಾಗಿ ರಾಮ ಮಂದಿರ, ಪಾಕಿಸ್ತಾನ ಹಾಗೂ ಸೈನಿಕರ ಜಪ‌ ಮಾಡ್ತಾರೆ. ಬಿಜೆಪಿಯವರು ಮಾಡೋದೆಲ್ಲ ಚುನಾವಣಾ ನಾಟಕ ಎಂದು ಜನರಿಗೆ ಗೊತ್ತಾಗಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.