Asianet Suvarna News Asianet Suvarna News

ಇಂಡಿಯಾ ಹೆಸರು ಬದಲಾವಣೆ: ಕೇಂದ್ರದ ವಿರುದ್ಧ ಸಚಿವ ದರ್ಶನಾಪೂರ ವಾಗ್ದಾಳಿ..!

ಪ್ರಧಾನಿ ಮೋದಿ ಯಾವಾಗಲೂ ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಪರ ಮಾತನಾಡಿಲ್ಲ. ಅಭಿವೃದ್ಧಿ ಮಾಡುತ್ತೇವೆ. ಪಕ್ಷಕ್ಕೆ ಮತ ಹಾಕಿ ಎಂದು ಎಂದೂ ಹೇಳಿಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಶರಣಬಸಪ್ಪ ದರ್ಶನಾಪುರ 

Minister Sharanabasappa Darshanapur Slams Central Government grg
Author
First Published Sep 6, 2023, 8:30 PM IST

- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಸೆ.06):  ಇಂಡಿಯಾ ಎಂದು ತೆಗೆದು ಭಾರತ ಎಂದು ಹೆಸರು ಬದಲಾವಣೆ ಮಾಡುವ ಕೇಂದ್ರದ  ನಿರ್ಧಾರ ವಿಚಾರವಾಗಿ ಸಚಿವ ಶರಣಬಸಪ್ಪ ದರ್ಶನಾಪುರ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.‌ ಇಂದು(ಬುಧವಾರ) ನಗರದ ಖಾಸಗಿ ಹೋಟೆಲ್‌ನಲ್ಲಿ ಸಣ್ಣ ಕೈಗಾರಿಕಾ ಸಂಘ (ಕಾಸಿಯಾ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.  

ಮೋದಿ ವಿರುದ್ಧ ದರ್ಶನಾಪೂರ ವಾಗ್ದಾಳಿ..!

ಪ್ರಧಾನಿ ಮೋದಿ ಯಾವಾಗಲೂ ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಪರ ಮಾತನಾಡಿಲ್ಲ. ಅಭಿವೃದ್ಧಿ ಮಾಡುತ್ತೇವೆ. ಪಕ್ಷಕ್ಕೆ ಮತ ಹಾಕಿ ಎಂದು ಎಂದೂ ಹೇಳಿಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣೆ ಸಂದರ್ಭದಲ್ಲಿ ಏನಾದರೂ ಒಂದು ವಿಷಯ ತಂದು ಮತಯಾಚನೆ ಮಾಡುತ್ತಾರೆ. ಹಿಂದೆ ರಾಮ ಮಂದಿರ ನಿರ್ಮಾಣ ವಿಚಾರ ತಂದರು ಆವಾಗ ಯಾರೂ ಬೇಡ ಅನ್ನಲಿಲ್ಲ. ಭಾವನಾತ್ಮಕ ವಿಷಯಗಳನ್ನು ಕೆರಳಿಸಿ ಜನರಿಗೆ ಡಿವೈಡ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಅದರಿಂದ ಚುನಾವಣೆಯಲ್ಲಿ ಏನು ಸಾಧಿಸುತ್ತಾರೆ ಗೊತ್ತಿಲ್ಲ. ನಾವು ಅಭಿವೃದ್ಧಿ ಮಾಡುತ್ತೇವೆ ಅಂತ ಹೋದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದ್ದಾರೆ. 

ವಕ್ಫ್‌ ಕಾಯ್ದೆ ರದ್ದುಪಡಿಸಿದರೆ ಸಾವಿರಾರು ಕೋಟಿ ರೂ. ಆಸ್ತಿ ಸರ್ಕಾರಕ್ಕೆ ಉಳಿಯುತ್ತೆ: ಯತ್ನಾಳ

ಹೆಸರು ಬದಲಾವಣೆಯಿಂದ ಮನಸ್ಥಿತಿ ಬದಲಾಗಿಲ್ಲ..!

ನಮ್ಮಲ್ಲಿ ಕಲ್ಯಾಣ ಕರ್ನಾಟಕ ಅಂತಾ ಮಾಡಿದ್ದಾರೆ, ಅದರಿಂದ ಮನಸ್ಥಿತಿ ಏನೂ ಬದಲಾಗಲಿಲ್ಲ. ಹೆಸರು ಮುಖ್ಯವಲ್ಲ ಕೆಲಸದ ಮೂಲಕ ಬದಲಾವಣೆ ಮಾಡಲಿ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಪ್ರಧಾನಿಗೆ ಕಿವಿ ಮಾತು ಹೇಳಿದರು.

ಆರ್‌ಎಸ್‌ಎಸ್ ವಿರುದ್ಧವೂ ದರ್ಶನಾಪೂರ ವಾಗ್ದಾಳಿ..!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂತೋಷಜೀ, ಬೇರೆ ಪಕ್ಷದ 40-45 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ದರ್ಶನಾಪುರ, ಬಿಜೆಪಿ ಸರ್ಕಾರ ಬಹುಮತವಿಲ್ಲದುದ್ದರೂ ಬೇರೆ ಪಕ್ಷದ ಸಹಾಯ ಪಡೆದು ಅಧಿಕಾರ ನಡೆಸಿದ್ದಾರೆ. ಹೀಗಾಗಿ ಜನ ಅವರನ್ನು ಈ ಬಾರಿ ತಿರಸ್ಕರಿಸಿದ್ದಾರೆ. 100ಕ್ಕಿಂತ ಹೆಚ್ಚು ಸ್ಥಾನವಿದ್ದವರೂ ಈಗ 66 ಸ್ಥಾನಕ್ಕೆ ಇಳಿದಿದ್ದಾರೆ ಎಂದರು.

ಲೋಕಸಭೆ ಚುನಾವಣೆ 2024: ಎಂ.ಬಿ.ಪಾಟೀಲಲ್‌ಗೆ ನನ್ನ ಟಿಕೆಟ್‌ ಬಗ್ಗೆ ಚಿಂತೆ ಬೇಡ, ಜಿಗಜಿಣಗಿ

ರಾಯರೆಡ್ಡಿ ಅಭಿವೃದ್ಧಿ ವಿಚಾರವಾಗಿ ಪತ್ರ ಬರೆದಿರಬೇಕು..!

ಇದೇ ವೇಳೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸಿಎಂ ಪತ್ರ ಬರೆದ ವಿಷಯವಾಗಿ‌ ಮಾತನಾಡಿದ ಅವರು, ಅವರ ಕ್ಷೇತ್ರದ ಅಭಿವೃದ್ಧಿ ವಿಷಯ ಬಗ್ಗೆ ಪತ್ರ ಬರೆದಿರಬಹುದು ಎಂದರು.

ಹಿಂದೂ ಹುಟ್ಟಿನ ವಿವಾದದ ಬಗ್ಗೆ ಪ್ರತಿಕ್ರಿಯಿಸದ ದರ್ಶನಾಪೂರ..!

ಹಿಂದೂ ಧರ್ಮ ಹುಟ್ಟಿದ ಬಗ್ಗೆ ಪರಮೇಶ್ವರ ಹೇಳಿಕೆ ಬಗ್ಗೆ ಸಚಿವ ದರ್ಶನಾಪುರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ನೀ ವಿಷಯ ಅವರನ್ನೇ ಕೇಳಬೇಕು ಎಂದು ದರ್ಶನಾಪೂರ ನುಣುಚಿಕೊಂಡರು. 

Follow Us:
Download App:
  • android
  • ios