Asianet Suvarna News Asianet Suvarna News

ಲೋಕಸಭೆ ಚುನಾವಣೆ 2024: ಎಂ.ಬಿ.ಪಾಟೀಲಲ್‌ಗೆ ನನ್ನ ಟಿಕೆಟ್‌ ಬಗ್ಗೆ ಚಿಂತೆ ಬೇಡ, ಜಿಗಜಿಣಗಿ

ನನಗೆ ಟಿಕೆಟ್ ಸಿಗುವುದು ಬಿಡುವುದು ಎಂ.ಬಿ.ಪಾಟೀಲರಿಗೆ ಸಂಬಂಧಿಸಿದ ವಿಷಯವಲ್ಲ. ಅವರು ನಮ್ಮ ಪಕ್ಷದಲ್ಲಿಲ್ಲ. ಬೇಕಿದ್ದರೆ ನಮ್ಮ ಪಕ್ಷಕ್ಕೆ ಬಂದು ಈ ಮಾತು ಹೇಳಲಿ. ಆಗ ನೋಡೋಣ. ನಾನೇನೂ ಪಾಟೀಲರಿಗೆ ಬಿಜೆಪಿಗೆ ಆಹ್ವಾನ ನೀಡುತ್ತಿಲ್ಲ. ನಮ್ಮಲ್ಲೇನೂ ನಾಯಕರ ಕೊರತೆ ಇಲ್ಲ ಎಂದ ಸಂಸದ ರಮೇಶ ಜಿಗಜಿಣಗಿ 

Vijayapura BJP MP Ramesh Jigajinagi Talks Over Lok Sabha Elections 2024 Ticket grg
Author
First Published Sep 5, 2023, 10:00 PM IST

ವಿಜಯಪುರ(ಸೆ.05):  ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗುವ ಇಲ್ಲವೆ ಬಿಡುವ ಚಿಂತೆ ಸಚಿವ ಎಂ.ಬಿ.ಪಾಟೀಲರಿಗೆ ಏಕಿರಬೇಕು? ಅವರೇನು ನಮ್ಮ ಪಕ್ಷದವರಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಎಂ.ಬಿ.ಪಾಟೀಲರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಟಿಕೆಟ್ ಸಿಗುವುದು ಬಿಡುವುದು ಎಂ.ಬಿ.ಪಾಟೀಲರಿಗೆ ಸಂಬಂಧಿಸಿದ ವಿಷಯವಲ್ಲ. ಅವರು ನಮ್ಮ ಪಕ್ಷದಲ್ಲಿಲ್ಲ. ಬೇಕಿದ್ದರೆ ನಮ್ಮ ಪಕ್ಷಕ್ಕೆ ಬಂದು ಈ ಮಾತು ಹೇಳಲಿ. ಆಗ ನೋಡೋಣ. ನಾನೇನೂ ಪಾಟೀಲರಿಗೆ ಬಿಜೆಪಿಗೆ ಆಹ್ವಾನ ನೀಡುತ್ತಿಲ್ಲ. ನಮ್ಮಲ್ಲೇನೂ ನಾಯಕರ ಕೊರತೆ ಇಲ್ಲ ಎಂದರು.

ವಿಜಯಪುರದಲ್ಲಿ ಹೊಟೇಲ್‌ ಉದ್ಯಮಿಯನ್ನ ಯಾಮಾರಿಸಿದ ಸೈಬರ್‌ ಕಳ್ಳರು: 8 ಅಕೌಂಟ್‌ಗೆ ಕನ್ನ!

ನಾನು ಕಾಂಗ್ರೆಸ್ ವಿರೋಧಿಯಾಗಿಯೇ ಜನ್ಮತಾಳಿದ್ದೇನೆ. ಕಳೆದ 45ವರ್ಷಗಳಿಂದ ಕಾಂಗ್ರೆಸ್ ವಿರೋಧಿಯಾಗಿಯೇ ರಾಜಕಾರಣ ಮಾಡಿದ್ದೇನೆ. ಈಗ ಪಕ್ಷ ಬದಲಾಯಿಸಿ ರಾಜಕಾರಣ ಮಾಡುವ ಔಚಿತ್ಯ ನನಗಿಲ್ಲ. ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿ ಟಿಕೆಟ್ ನನಗೇ ಸಿಗುವುದು ಖಾತ್ರಿಯಾಗಿದೆ. ನನಗೂ ಸಿದ್ಧತೆ ಮಾಡಿಕೊಳ್ಳುವಂತೆ ಪಕ್ಷದಿಂದ ಸೂಚನೆ ದೊರೆತಿದೆ. ಪಕ್ಷದ ಹೈಕಮಾಂಡ್‌ ಟಿಕೆಟ್ ನೀಡಿದರೆ ನಾನು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದರೆ ಮನೆಯಲ್ಲಿಯೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios