ಸಿಎಂ ಕೂಗು: ಈಗಾಗಲೇ ಮುಖ್ಯಮಂತ್ರಿ ಇದ್ದಾರೆ ಅವರನ್ನ ಇಳಿಸುವವರು ಯಾರು?, ಸತೀಶ ಜಾರಕಿಹೊಳಿ

ಕೋರ್ಟ್‌ ಅನುಮತಿ ನೀಡಿದರೂ ಸಿಎಂ ಮುಂದಿನ ನಿರ್ಧಾರದ ಬಗ್ಗೆ ಚರ್ಚೆಯಾಗಿಲ್ಲ. ದೇಶದಲ್ಲಿ ಬಹಳಷ್ಟು ಜನರ ಮೇಲೆ ಪ್ರಕರಣಗಳು ಇದ್ದರೂ ಸಿಎಂ, ಸಚಿವರು ಇದ್ದಾರೆ. ಕೋರ್ಟ್‌ ಅನುಮತಿ ನೀಡಿದರೂ ರಾಜೀನಾಮೆ ನೀಡಬೇಕೆಂದು ಕಾನೂನಿನಲ್ಲಿ ಹೇಳಿಲ್ಲ ಎಂದ ಸಚಿವ ಸತೀಶ ಜಾರಕಿಹೊಳಿ 

Minister Satish Jarkiholi React to CM Change in Karnataka grg

ಚಿಕ್ಕೋಡಿ(ಸೆ.09):  ರಾಜ್ಯದಲ್ಲಿ ಯಾವುದೇ ಸಿಎಂ ಕೂಗು ಕೇಳುವ ಪ್ರಶ್ನೆ ಇಲ್ಲ. ಈಗಾಗಲೇ ಸಿಎಂ ಇದ್ದಾರೆ ಅವರನ್ನ ಇಳಿಸುವವರು ಯಾರು?. ಪದೇ ಪದೇ ಸಿಎಂ ವಿಚಾರ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಸರಕಾರದ ಮುಂದೆ ಸಾಕಷ್ಟು ಸಮಸ್ಯೆಗಳಿವೆ ಬಗೆ ಹರಿಸಲು ಸಮಯ ಬೇಕಿದೆ. ಸಿಎಂ ಅವರೇ ಇದ್ದಾರೆ ಸರಕಾರ ಮುಂದುವರೆಯುತ್ತದೆ ಎಂದು ಸಚಿವ ಸತೀಶ ಜಾರಕಿಹೊಳಿ  ಹೇಳಿದ್ದಾರೆ. 

ಇಂದು(ಸೋಮವಾರ) ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಸತೀಶ ಜಾರಕಿಹೊಳಿ ಅವರು, ಕೋರ್ಟ್‌ ಅನುಮತಿ ನೀಡಿದರೂ ಸಿಎಂ ಮುಂದಿನ ನಿರ್ಧಾರದ ಬಗ್ಗೆ ಚರ್ಚೆಯಾಗಿಲ್ಲ. ದೇಶದಲ್ಲಿ ಬಹಳಷ್ಟು ಜನರ ಮೇಲೆ ಪ್ರಕರಣಗಳು ಇದ್ದರೂ ಸಿಎಂ, ಸಚಿವರು ಇದ್ದಾರೆ. ಕೋರ್ಟ್‌ ಅನುಮತಿ ನೀಡಿದರೂ ರಾಜೀನಾಮೆ ನೀಡಬೇಕೆಂದು ಕಾನೂನಿನಲ್ಲಿ ಹೇಳಿಲ್ಲ ಎಂದು ತಿಳಿಸಿದ್ದಾರೆ. 

ದೇಶಪಾಂಡೆ, ಎಂಬಿ ಪಾಟೀಲ್ ಆಯ್ತು, ಈಗ ಜಾಲತಾಣದಲ್ಲಿ 'ಜಾರಕಿಹೊಳಿ ಫಾರ್ ಸಿಎಂ' ಅಭಿಯಾನ!

ಸಿಎಂ ಸಿದ್ದರಾಮಯ್ಯನವರೇ ಮುಂದುವರೆಯುತ್ತಾರೆ. ಸಿಎಂ ಬದಲಾವಣೆ ಬಗ್ಗೆ ಕೇಳಬೇಡಿ ಪ್ಲೀಸ್ ಪ್ಲೀಸ್ ಎಂದು ಸತೀಶ ಜಾರಕಿಹೊಳಿ ಮನವಿ ಮಾಡಿದ್ದಾರೆ.  ಜನ ನಮ್ಮನ್ನ ನೋಡಿ ಉಗಳುತ್ತಾರೆ ಬರೇ ಬರೇ ಸಿಎಂ ಎಂದರೇ ಇವರಗೇನೂ ಕೆಲಸ ಇಲ್ಲ ಎಂದು ಜನ ಉಗಿಯುತ್ತಾರೆ. ಪದೇ ಪದೇ ಈ ವಿಚಾರ ಕೇಳಬೇಡಿ ಎಂದಿದ್ದಾರೆ.  ಸತೀಶ ಜಾರಕಿಹೊಳಿ ಸಿಎಂ ಆಗಬೇಕು ಎನ್ನುವ ಅಭಿಯಾನ ನಾವು ಆರಂಭಿಸಿಲ್ಲ ಎಂದಷ್ಟೇ ಹೇಳಿದ್ದಾರೆ. 

Latest Videos
Follow Us:
Download App:
  • android
  • ios