ನಮ್ಮ ಇಲಾಖೆಯಲ್ಲಿ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಯಾರು ಬರುತ್ತಾರೆ ಅವರಿಗೆ ಕೊಡ್ತಿವಿ ಎಂದು ತಿಳಿಸಿದ ಸಚಿವ ಸತೀಶ್ ಜಾರಕಿಹೊಳಿ 

ಬೆಳಗಾವಿ(ಜು.26): ಸದನದಲ್ಲಿ ಧರಣಿ ಮಧ್ಯೆಯೂ ಎಲ್ಲ ಬಿಲ್ ಪಾಸ್ ಆಗಿವೆ. ಹಂಗೆ ಇರುತ್ತದೆ, ಚರ್ಚೆ ಆಗ್ತಾವೆ, ಬಿಲ್ ಪಾಸ್ ಆಗ್ತಾವೆ. ಬಿಜೆಪಿಯವರು ಅವರ ಪಾತ್ರ ಅವರು ಮಾಡಿದ್ದಾರೆ, ನಮ್ಮ ಪಾತ್ರ ನಾವು ಮಾಡಿದ್ದೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. 

ಬಿಜೆಪಿಯವರು ಮುಡಾ ಪ್ರಕರಣ ವಿಚಾರವಾಗಿ ಬೆಂಗಳೂರಿನಿಂದ ಮೈಸೂರುವರೆಗೆ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ಜಿಲ್ಲೆಯ ಖಾನಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ಬಿಜೆಪಿಯವರು ಸ್ವತಂತ್ರ ಇದ್ದಾರೆ, ಹೋಗಬಹುದು. ಹೋರಾಟ ಮಾಡಬಹುದು, ಆದರೆ ಅಂತಿಮವಾಗಿ ಕಾನೂನಿದೆ ಎಂದು ಹೇಳಿದ್ದಾರೆ. 

ವಾಲ್ಮೀಕಿ ಪ್ರಕರಣದಲ್ಲಿ ಮಂತ್ರಿಗಳು-ಶಾಸಕರು ಭಾಗಿಯಾಗಿದ್ದರೆ ಅದು ಖಂಡಿತ ಕಳಂಕ: ಸಚಿವ ಸತೀಶ್‌ ಜಾರಕಿಹೊಳಿ

ಗ್ರಾಮೀಣ ಭಾಗದಲ್ಲಿ ರಸ್ತೆ ಹಾಳಾದ ವಿಚಾರದ ಬಗ್ಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ ಅವರು, ಮಳೆ ಜಾಸ್ತಿ ಆಗಿದೆ. ಹೀಗಾಗಿ ರಸ್ತೆ ಹಾಳಾಗಿದೆ. ಮಳೆ ನಿಂತ ಮೇಲೆ ಪರಿಹಾರ ಕೊಡ್ತಿವಿ ಎಂದಿದ್ದಾರೆ. 

ಅನುದಾನ ಹಂಚಿಕೆಯಲ್ಲಿ ತಾರತಮ್ಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ್‌ ಜಾರಕಿಹೊಳಿ ಅವರು, ನಮ್ಮ ಇಲಾಖೆಯಲ್ಲಿ ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಯಾರು ಬರುತ್ತಾರೆ ಅವರಿಗೆ ಕೊಡ್ತಿವಿ ಎಂದು ತಿಳಿಸಿದ್ದಾರೆ. 

ಕಾಡಂಚಿನ ಪ್ರದೇಶದ ಹಳ್ಳಿಗಳನ್ನ ಸ್ಥಳಾಂತರ ಮಾಡುವ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಸ್ಥಳಾಂತರ ಮಾಡುವ ಬಗ್ಗೆ ಚರ್ಚೆ ಮಾಡಿ ಕ್ರಮ ಕೈಗೊಳುತ್ತೇವೆ. ಅರಣ್ಯ ಇಲಾಖೆ ಇದರ ಬಗ್ಗೆ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.