ದೇಶದಲ್ಲಿ ಏನೇ ಕೆಟ್ಟದಾದರೂ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ: ಸಚಿವ ಸಂತೋಷ್ ಲಾಡ್
ಕಳೆದ ವರ್ಷ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ಗಳನ್ನು ವಾಪಸ್ ಪಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪೊಲೀಸರಿಗೆ ಯಾವ ಉದ್ದೇಶಕ್ಕಾಗಿ ಪತ್ರ ಬರೆದಿದ್ದಾರೆಯೋ ಗೊತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ವಿಜಯಪುರ (ಅ.04): ಕಳೆದ ವರ್ಷ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಆರೋಪಿಗಳ ಮೇಲಿನ ಕೇಸ್ ಗಳನ್ನು ವಾಪಸ್ ಪಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪೊಲೀಸರಿಗೆ ಯಾವ ಉದ್ದೇಶಕ್ಕಾಗಿ ಪತ್ರ ಬರೆದಿದ್ದಾರೆಯೋ ಗೊತ್ತಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರೈತರ ಗಲಾಟೆ ವೇಳೆ, ಹೋರಾಟದ ಸಮಯದಲ್ಲಿ ದಾಖಲಾದ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಪತ್ರ ಬರೆಯುವುದು ಸಾಮಾನ್ಯ. ಆದರೆ ಡಿಕೆಶಿ ಅವರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಮೇಲಿನ ಕೇಸ್ ಹಿಂಪಡೆಯಬೇಕು ಎಂದು ಪೊಲೀಸರಿಗೆ ಪತ್ರ ಬರೆದಿರುವುದು ಯಾವ ಹಿನ್ನೆಲೆಯಿಂದ ಎಂಬುವುದು ತಿಳಿಯುತ್ತಿಲ್ಲ.
ಹೆಚ್ಚಿನ ಮಾಹಿತಿಗಾಗಿ ಅವರನ್ನೇ ಕೇಳಬೇಕು ಎಂದರು. ರಾಜ್ಯದಲ್ಲಿ ಗಲಭೆಗೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ವಿರೋಧ ಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೇಂದ್ರದ ಬಿಜೆಪಿ ಸರ್ಕಾರ ಮಣಿಪುರ ಘಟನೆ ಬಗ್ಗೆ ಧ್ವನಿ ಎತ್ತಲಿಲ್ಲ. ಕೃಷಿ ಕಾಯ್ದೆಗಳನ್ನು ವಿರೋಧಿಸಿದ ಹೋರಾಟದಲ್ಲಿ ರೈತರು ಸಾವನ್ನಪ್ಪಿದ್ದರು. ಜನರ ಮೇಲೆ ಲಾಠಿ ಚಾರ್ಜ್ ಕೂಡಾ ಆಗಿತ್ತು. ಆಗ ಕೇಂದ್ರದವರು ಮಾತನಾಡಲಿಲ್ಲ. ಆಗ ಕೋಮು ಸೌಹಾರ್ದತೆಗೆ ಧಕ್ಕೆ ಬರಲಿಲ್ವಾ ಎಂದು ಪ್ರಶ್ನಿಸಿದ ಅವರು, ದೇಶದಲ್ಲಿ ಏನೇ ಕೆಟ್ಟದಾದರೂ ಬಿಜೆಪಿಯವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಾರೆ. ಒಳ್ಳೆಯದಾದರೆ ಬಿಜೆಪಿ ಕಾರಣ ಎಂದು ಪ್ರಶಂಸಿಸುತ್ತಾರೆ ಎಂದು ದೂರಿದರು.
ಸಂಸದ ಮುನಿಸ್ವಾಮಿಗಾದ ಅವಮಾನ ದೇಶಕ್ಕೇ ಮಾಡಿದ ಅಪಮಾನ: ಸದಾನಂದಗೌಡ
ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ಹೇಳಿಕೆಯಲ್ಲಿ ಹುರುಳಿಲ್ಲ. ಇದು ರಾಜಕೀಯ ಗಿಮಿಕ್, ಇದು ಇನ್ನಾರು ತಿಂಗಳು ಹೀಗೆ ಮುಂದುವರೆಯುತ್ತದೆ. ದೇಶದಲ್ಲಿ ಎಲ್ಲಿಯೇ ಗಲಾಟೆಯಾದರೂ ಕಾನೂನು ಇದೆ. ಹಿಂದು, ಮುಸ್ಲಿಮ-ಹಿಂದುಗಳಿಗೆ ಒಂದೇ ಕಾನೂನು ಇದೆ. ಗಲಭೆಯಾಗಿದ್ದರೆ ಸರ್ಕಾರವಿದೆ. ಪೊಲೀಸ್ ಇಲಾಖೆ ಇದೆ. ಅದನ್ನು ಅವರು ನೋಡಿಕೊಳ್ಳುತ್ತಾರೆ ಎಂದರು. ಪ್ರಧಾನಿ ಮನ್ ಕಿ ಬಾತ್ ಬಗ್ಗೆ ಕುಟುಕಿದ ಸಚಿವ ಲಾಡ್ ಅವರು, ಹಿಂದೆಯೂ ನಮ್ಮ ಜಿಡಿಪಿ ಚೆನ್ನಾಗಿತ್ತು. ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಹೋಗಿದ್ದೇವೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಅಮೆರಿಕ, ಚೀನಾ ಜಿಡಿಪಿ ದರ ಎಷ್ಟಿದೆ. ಚೀನಾದಷ್ಟು ಜನಸಂಖ್ಯೆ ಹೊಂದಿರುವ ನಾವು ಅವರಿಗಿಂತ ಎಷ್ಟ ಕೆಳಗಿದ್ದೇವೆ ಎಂದು ಹೇಳಲಿ ಎಂದು ಸವಾಲೆಸೆದ ಅವರು, ಲೋಕಸಭೆ ಚುನಾವಣೆಗಾಗಿ ವಿರೋಧ ಪಕ್ಷಗಳು ಗಿಮಿಕ್ ಮಾಡುತ್ತಿವೆ.ಆದರೆ ಅವರ ಗಿಮಿಕ್ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ಅಧಿಕಾರ ವಹಿಸಿಕೊಂಡಂತಾಗಿದೆ: ಶಾಸಕ ಬಸನಗೌಡ ಯತ್ನಾಳ್ ಆರೋಪ
ಭಯೋತ್ಪಾದಕರು ಎಲ್ಲಿಂದ ಬರುತ್ತಾರೆ. ಉಗ್ರರು ಬಂದು ನಮ್ಮ ದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರ ಎಂದರೆ ಇದು ಕೇಂದ್ರ ಸರ್ಕಾರದ ವೈಫಲ್ಯ. ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ. ಎಲ್ಲ ಮಾಧ್ಯಮಗಳಲ್ಲಿ ಮೋದಿ ಬಿಟ್ಟು ಬೇರೆ ಯಾರೂ ಕಾಣಿಸುವುದಿಲ್ಲ. ಸಚಿವರು,ರಾಷ್ಟ್ರಪತಿಗಳು, ಹಿರಿಯ ಅಧಿಕಾರಿಗಳು ಯಾರೂ ಬರಲ್ಲ. ಕೇವಲ ಮೋದಿ ಮೋದಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದರು. ಶಾಮನೂರು ಶಿವಶಂಕರಪ್ಪನವರು ಹಿರಿಯರು ಇದ್ದಾರೆ. ಅವರು ಯಾವ ಆಧಾರದಿಂದ ಲಿಂಗಾಯತರಿಗೆ ಕಡೆಗಣನೆಯಾಗುತ್ತಿದೆ ಎಂದು ಹೇಳಿದ್ದಾರೆಯೋ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಎಲ್ಲರನ್ನು ಸಮಬಾಳು, ಸಹಬಾಳ್ವೆ ಎಂಬಂತೆ ಕರೆದುಕೊಂಡು ಹೋಗುತ್ತದೆ ಎಂದು ತಿಳಿಸಿದರು.