ಬೆಳಗಾವಿ, (ಜ.10): ರಾಜಕೀಯ ಬದ್ಧ ವೈರಿಗಳಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

ಈ ಬಾರಿ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನ ಸೋಲಿಸಲು ರಮೇಶ್ ಜಾರಕಿಹೊಳಿ ಪಣತೊಟ್ಟು ನಿಂತಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ಬೆಳಗಾವಿಯಲ್ಲಿ ಮತ್ತಷ್ಟು ಹಿಡಿತ‌ ಸಾಧಿಸುವ ಯೋಜನೆ ರೂಪಿಸಿದ್ದಾರೆ.

ಮಾತಾಡ್ಬೇಡ ಅಂತಾ ವರಿಷ್ಠರು ಹೇಳೋಕೆ.. ಆಕೆ ಏನು ಅಂಥ ದೊಡ್ಡ ಲೀಡರಾ? ಸಾಹುಕಾರ ಗರಂ

ಹೌದು...'ಕೈ' ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಸ್ನೇಹ ಭೋಜನ ಕೂಟ ಹೆಸರಲ್ಲಿ ಗೋಕಾಕ್ ಸಾಹುಕಾರ್ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಬೆಳಗಾವಿಯ ನಾವಗೆ ಕ್ರಾಸ್ ಬಳಿಯ ಇರುವ ಗಣೇಶ್ ಭಾಗದಲ್ಲಿ ಸ್ನೇಹ ಭೋಜನ ಕೂಟ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ನೂತನ ಸದಸ್ಯರಿಗೆ ಸತ್ಕಾರ ಮಾಡುವ ಮೂಲಕ ಗ್ರಾಮೀಣ ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಯೋಜನೆ ರೂಪಿಸಿದ್ದಾರೆ.

ಬಿಜೆಪಿಯ ಯುವ ಮುಖಂಡ ಧನಂಜಯ ಜಾಧವ್​ ಅವರು ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಅನಿಲ್ ಬೆನಕೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.
ಸತ್ಕಾರ ಸಮಾರಂಭದ ಬಳಿಕ ನೂತನ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ಭೋಜನ ಕೂಟ ಆಯೋಜಿಸಲಾಯಿತು. 

ಈ ಮೂಲಕ ನಿಧಾನವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸಲು ಸಚಿವ ರಮೇಶ್ ಜಾರಕಿಹೊಳಿ‌ ಈ ಭೋಜನಾಕೂಟದ ಪ್ಲಾನ್ ಮಾಡಿದ್ದಾರೆಂದು ಎನ್ನಲಾಗಿದೆ.