ಕಾಂಗ್ರೆಸ್ಸಿಗರು 65 ವರ್ಷಗಳ ಕಾಲ ರಾಜ್ಯ ಲೂಟಿ ಮಾಡಿದ್ದಾರೆ: ಸಚಿವ ಅಶೋಕ ಕಿಡಿ
40% ಸರ್ಕಾರ ಆರೋಪದ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ಆರ್ ಅಶೋಕ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ವಿರುದ್ಧ 65 ಕೇಸ್ ದಾಖಲಾಗಿತ್ತು. ಡಿಕೆ ಶಿವಕುಮಾರ್ ಅವರು ಜೈಲಿನಿಂದ ಇವಾಗ ತಾನೆ ಹೊರಗಡೆ ಬಂದಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದಾಗೆ ಎಂದಿದ್ದಾರೆ.
ತುಮಕೂರು (ಸೆ.26) : ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಸಚಿವ ಆರ್ ಅಶೋಕ , ಈ ವೇಳೆ 40% ಸರ್ಕಾರ ಆರೋಪದ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ. ಬೊಗಳೊರು ಬೊಗಳುತ್ತಾನೆ ಇರ್ತಾರೆ ಏನ್ ಮಾಡೋದು. ಸಿಎಂ ಬೊಮ್ಮಾಯಿ ಮೇಲೆ ಲೋಕಾಯುಕ್ತ ಆಗಲಿ ಎಸಿಬಿ ಆಗಲಿ ಎಲ್ಲಾ ಕಡೆ ಒಂದೇ ಒಂದು ಕೇಸು ದಾಖಲಾಗಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ವಿರುದ್ಧ 65 ಕೇಸ್ ದಾಖಲಾಗಿತ್ತು. ಡಿಕೆ ಶಿವಕುಮಾರ್ ಅವರು ಜೈಲಿನಿಂದ ಇವಾಗ ತಾನೆ ಹೊರಗಡೆ ಬಂದಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಹೇಳಿದಾಗೆ. ಅಣ್ಣಾ ಹಜಾರೆ ಅವರು ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಕೇಳಬಹುದು. ಆದರೆ ಕಾಂಗ್ರೆಸ್ಸಿಗರು ಅರವತ್ತೈದು ವರ್ಷಗಳ ಕಾಲ ರಾಜ್ಯ ಲೂಟಿ ಮಾಡಿದ್ದಾರೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಇವರು ಅದ್ಯಾವ ಮುಖ ಇಟ್ಟುಕೊಂಡು ಪೋಸ್ಟರ್ ಅಂಟಿಸುತ್ತಾರೆ ಗೊತ್ತಿಲ್ಲ. ದೆಹಲಿಯಿಂದ ಹಿಡಿದು ಕರ್ನಾಟಕದ ಲೀಡರ್ ವರೆಗೂ ಕಾಂಗ್ರೆಸ್ ನವರು ಜೈಲು ಮತ್ತು ಬೇಲಿನ ಮೂಲಕ ಇದ್ದಾರೆ.
ಕಾಂಗ್ರೆಸ್ ನವರು ಯಾವಾಗಲೂ ಹೀಗೆ, ಹಿಂದೆ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದಾಗ ಅವರ ಮೇಲೆ ಆರೋಪ ಮಾಡಿ ಕೆಳಗಿಳಿಸಿದರು. ಈಗ ಬೊಮ್ಮಾಯಿ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಂಗಲ್ ಹನುಮಂತಯ್ಯನವರು ಇದ್ದಾಗಲೂ ಕೂಡ ಅವರ ಮೇಲೆ ಅವರು ಆರೋಪ ಮಾಡಿದ್ದು. ಇದು ಕಾಂಗ್ರೆಸ್ ನವರ ಒಂದು ಚಾಳಿ. ಅವರ ಟಾರ್ಗೆಟ್ ಲಿಂಗಾಯತ ಸಿಎಂ. ಈ ತರದ ಸಮುದಾಯಗಳ ಮೇಲೆ ಅಟ್ಯಾಕ್ ಮಾಡುವುದು ಒಂದು ಚಾಳಿ. ಹೊರ ಶಾಲೆಯನ್ನು ಈಗ ಮುಂದುವರಿಸಿದ್ದಾರೆ.
ಡರ್ಟಿ ಪಾಲಿಟಿಕ್ಸ್ ಮಾಡೋದು ಸಂಘ ಪರಿವಾರದವರು: ಸಿದ್ದರಾಮಯ್ಯ
ಇನ್ನು ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅಶೋಕ್ ಅದು ಭಾರತ್ ಜೋಡೋ ಯಾತ್ರೆ ಅಲ್ಲ ಕಾಂಗ್ರೆಸ್ ಚೋಡೋ ಯಾತ್ರೆ ಶುರುವಾಗಿದೆ. ರಾಜಸ್ಥಾನ ಒಂದಿದೆ ಅದು ಕೂಡ ಈಗ ಇನ್ನು ಒಂದು ವಾರದಲ್ಲಿ ಡಮರ್ ಆಗೋಗುತ್ತೆ. ಆಮೇಲಿಂದ ಕಾಂಗ್ರೆಸ್‌ನವರು ಭಿಕ್ಷಾಪಾತ್ರೆ ಹಿಡಿದು ಇಡೀ ದೇಶ ಸುತ್ತಬೇಕಾಗುತ್ತದೆ. ಭಿಕ್ಷುಕರ ಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಕರ್ನಾಟಕಕ್ಕೆ ಭಾರತ್ ಜೋಡೋ ಯಾತ್ರೆ ಎಂಟ್ರಿ ಯಾಗ್ತಿದ್ದಂತೆ ರಾಹುಲ್ ಗಾಂಧಿಗೆ ಗೋಬ್ಯಾಕ್. ಭಾರತ ಮಾತೆ ಅಪವಿತ್ರೆ ಎಂದ ಪಾದ್ರಿ ಜೊತೆ ಪಾದಯಾತ್ರೆ ಮಾಡುವ ರಾಹುಲ್ ಗಾಂಧಿಗೆ ಗೋ ಬ್ಯಾಕ್. ಅವರು ಕರ್ನಾಟಕದ ನೆಲ ತುಳಿಯುವ ಯಾವ ನೈತಿಕತೆ ಇಲ್ಲ. ರಾಹುಲ್ ಗಾಂಧಿ ಗೋ ಬ್ಯಾಕ್. ಭ್ರಷ್ಟಾಚಾರ ಮಾಡದೆ ಇದ್ದ ಕಾಂಗ್ರೆಸ್ ನಾಯಕರು ಯಾರಾದರೂ ಬಂದು ಪೋಸ್ಟರ್ ಅಂಟಿಸಿದರೆ. ಅವರಿಗೆ ನಾನು ಸೆಲ್ಯೂಟ್ ಹೊಡೆಯುತ್ತೇನೆ.
ಲಂಚಾವತಾರ ನಾಟಕದಲ್ಲಿ ಅಧಿಕಾರಿಗಳದ್ದು ಪೋಷಕ ಪಾತ್ರ, ಬಿಜೆಪಿ ವಿರುದ್ಧ ಸಿದ್ದು ಸರಣಿ ಟ್ವೀಟ್!
ಕುಮಾರಸ್ವಾಮಿ , ಸಚಿವ ಅಶ್ವಥ್ ನಾರಾಯಣ್ ಮೇಲೆ ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು ಅಶ್ವಥ್ ನಾರಾಯಣ ರಿಗೂ ಎಜುಕೇಶನ್ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಕೃಪಾಪೋಷಿತ ನಾಟಕ ಮಂಡಳಿಯನ್ನು ಈ ನಾಡಿನ ಜನ ನಂಬಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಜನ ಒಂದು ಗತಿ ಕಾಣಿಸ್ತಾರೆ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.