*  2023ರ ಚುನಾವಣೆ ವೇಳೆಗೆ ಕಾಂಗ್ರೆಸಿಗರು ಬಿಲ ಸೇರ್ತಾರೆ*  ಇ.ಡಿ. ಸ್ವತಂತ್ರ ಸಂಸ್ಥೆಯಾಗಿದ್ದು ಅದು ತನ್ನ ಕೆಲಸ ಮಾಡುತ್ತಿದೆ*  ಕಾಂಗ್ರೆಸ್‌ ಮುಳುಗುತ್ತಿದೆ ಎಲ್ಲರೂ ಅದರಿಂದ ಹೊರಬರುತ್ತಿದ್ದಾರೆ 

ಬೀದರ್‌(ಮೇ.28): ಡಿ.ಕೆ.ಶಿವಕುಮಾರ್‌ ಅವರನ್ನು ಬಿಜೆಪಿಗೆ ಕರೆದ ಪುಣ್ಯಪುರುಷ ಯಾರೆಂಬುದನ್ನು ಅವರು ಮೊದಲು ಹೇಳಲಿ ಎಂದು ಕಂದಾಯ ಸಚಿವ ಆರ್‌.ಅಶೋಕ ವ್ಯಂಗ್ಯವಾಡಿದ್ದಾರೆ.

ಬಿಜೆಪಿಗೆ ಸೇರದಿದ್ದಕ್ಕೆ ತಮ್ಮ ವಿರುದ್ಧ ಸಂಚು ರೂಪಿಸಲಾಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆ ಬಗ್ಗೆ ಬೀದರ್‌ ಜಿಲ್ಲೆಯ ವಡಗಾಂವದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಬಿಜೆಪಿಗೆ ಸೇರುವವರಿಗೆ ನಮ್ಮ ಸ್ವಾಗತ ಇದೆ ಆದರೆ ಬಿಜೆಪಿಗೆ ಸೇರಿಸಿಕೊಳ್ಳಲು ಒತ್ತಡ ಹಾಕಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಅವರನ್ನು ಪಕ್ಷಕ್ಕೆ ಕರೆದಂಥ ಪುಣ್ಯ ಪುರುಷ ಯಾರು ಎಂಬುವದನ್ನು ಮೊದಲು ಹೇಳಲಿ ಅವರು ಕೇವಲ ಗಾಳಿಯಲ್ಲಿ ಗುಂಡು ಹಾರಿಸಿಕೊಂಡು ಹೋಗುತ್ತಿದ್ದಾರೆ. ಅವರನ್ನು ಬಿಜೆಪಿಗೆ ಕರೆದಿಲ್ಲ, ಮುಂದೆಯೂ ಕರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. 2023ರ ವಿಧಾನಸಭಾ ಚುನಾವಣೆ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಹುಡುಕಿದರೂ ಸಿಗುವುದಿಲ್ಲ. ಬಿಲ ಸೇರಲಿದ್ದಾರೆ. ಕಾಂಗ್ರೆಸ್‌ ಮುಳುಗುತ್ತಿದೆ ಎಲ್ಲರೂ ಅದರಿಂದ ಹೊರಬರುತ್ತಿದ್ದಾರೆ ಎಂದರು.

ಕೋರ್ಟ್ ಮಹತ್ವದ ತೀರ್ಪು, ಡಿಕೆ ಶಿವಕುಮಾರ್‌ಗೆ ನಿಂದಿಸಿದ್ದ ವ್ಯಕ್ತಿಗೆ ಜೈಲು ಶಿಕ್ಷೆ

ಇನ್ನು ಇ.ಡಿ. ಸ್ವತಂತ್ರ ಸಂಸ್ಥೆಯಾಗಿದ್ದು ಅದು ತನ್ನ ಕೆಲಸ ಮಾಡುತ್ತಿದೆ. ಡಿ.ಕೆ.ಶಿವಕುಮಾರ್‌ ಅವರು ಮೊದಲು ಸರಿಯಾದ ದಾಖಲೆಗಳನ್ನು ಕೊಟ್ಟು ಕೋರ್ಟ್‌ ಮೂಲಕ ಅವರು ನ್ಯಾಯ ಕೇಳಬೇಕು ಎಂದು ಸಚಿವ ಅಶೋಕ ಹೇಳಿದರು.