* ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿಂದಿಸಿದ್ದ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ* ಜೈಲು ಶಿಕ್ಷೆ ತೀರ್ಪು ವಿಧಿಸಿ ದ.ಕ ಜಿಲ್ಲೆಯ ಸುಳ್ಯ ನ್ಯಾಯಾಲಯದಿಂದ ಮಹತ್ವದ ತೀರ್ಪು* ನ್ಯಾಯಾಧೀಶರಾದ ಸೋಮೇಶೇಖರ್ ಅವರಿಂದ ತೀರ್ಪು ಪ್ರಕಟ

ಮಂಗಳೂರು, (ಏ.18): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಅವರನ್ನು ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಆರೋಪಿಗೆ ಜೈಲು ಶಿಕ್ಷೆಯಾಗಿದೆ.

ಡಿಕೆ ಶಿವಕುಮಾರ್​​ಗೆ ನಿಂದಿಸಿದ್ದ ಸುಳ್ಯ ತಾಲೂಕಿನ ಬೆಳ್ಳಾರೆಯ ಗಿರಿಧರ್ ರೈಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನ್ಯಾಯಾಲಯದ (Sullia Court) ಜಡ್ಜ್​ ಸೋಮಶೇಖರ್ ಅವರು ಮಹತ್ವದ ತೀರ್ಪು ನೀಡಿದ್ದಾರೆ. 

ನಾಲ್ಕು ಅಪರಾಧಗಳಲ್ಲಿಯೂ 2 ವರ್ಷ ಜೈಲು ಶಿಕ್ಷೆಯಾಗಿದ್ದು. ಒಂದು ಪ್ರಕರಣದಲ್ಲಿ 5 ಸಾವಿರ ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

ಕೋರ್ಟ್‌ನಿಂದ ಡಿಕೆಶಿಗೆ ವಾರಂಟ್‌ ಜಾರಿ

ಏನಿದು ಪ್ರಕರಣ?:
2016ರಲ್ಲಿ ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ನಡೆದಿದ್ದ ಪ್ರಕರಣ ಇದಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆಯ ಗಿರಿಧರ್ ರೈ ಎಂಬಾತ 2016ರ ಫೆಬ್ರವರಿ 28ರಂದು ಅಂದಿನ ಇಂಧನ ಸಚಿವ ಡಿಕೆ ಶಿವಕುಮಾರ್​​ಗೆ ಕರೆ ಮಾಡಿದ್ದರು. ವಿದ್ಯುತ್ ಸಮಸ್ಯೆ ಹೇಳಿಕೊಳ್ಳಲು ಕರೆ ಮಾಡಿದ್ದ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.

ಈ ಹಿನ್ನೆಲೆಯಲ್ಲಿ ಅಂದಿನ ಮೆಸ್ಕಾಂ ಎಂಡಿ ಮೂಲಕ ಗಿರಿಧರ್ ವಿರುದ್ದ ಡಿಕೆ ಶಿವಕುಮಾರ್ ಪೊಲೀಸ್ ದೂರು ದಾಖಲಿಸಿದ್ದರು. ಕೇಸು ದಾಖಲಿಸಿಕೊಂಡಡಿದ್ದ ಪೊಲೀಸರು ರಾತ್ರೋರಾತ್ರಿ ಗಿರಿಧರ್ ರೈನನ್ನು ಬಂಧಿಸಿದ್ದರು. ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ, ಮಾನ ಹಾನಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ನಾಲ್ಕು ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದ ವಿಚಾರಣೆಗೆ ಸುಳ್ಯ ಕೋರ್ಟ್‌ ಸಾಕ್ಷಿ ಹೇಳಲು ಡಿಕೆ ಶಿವಕುಮಾರ್‌ ಅವರಿಗೆ ಮೂರು ಬಾರಿ ಸಮಸ್ಸ್‌, ಒಂದು ಬಾರಿ ವಾರೆಂಟ್‌ ಜಾರಿ ಮಾಡಿತ್ತು. ಈ ಹಿನ್ನೆಲೆಲ್ಲಿ ಡಿಕೆ ಶಿವಕುಮಾರ್ ಅವರು 2021ರ ಸೆ.29ರಂದು ಸುಳ್ಯ ಕೋರ್ಟ್‌ಗೆ ಹಾಜರಾಗಿದ್ದರು.