ಬಿಎಸ್‌ವೈ ಸಂಪುಟದ ಸಚಿವರೋರ್ವರು ಅಸಮಾಧಾನದಿಂದ ರಾಜೀನಾಮೆಗೆ ಸಜ್ಜಾಗಿದ್ದು ಈ ನಿಟ್ಟಿನಲ್ಲಿ ಸಚಿವ ಆರ್‌ ಅಶೋಕ್ ಸಂಧಾನದ ಯತ್ನ ನಡೆಸಿದ್ದಾರೆ. 

ಕಾರವಾರ (ಜ.25): ಬಿಜೆಪಿಯ ಆನಂದ್ ಸಿಂಗ್ ರಾಜೀನಾಮೆ ನೀಡುತ್ತಾರೆ ಎನ್ನುವ ಗುಮಾನಿ ಹಬ್ಬಿದ್ದು ಈ ಸಂಬಂಧ ಆನಂದ್ ಸಿಂಗ್ ಜತೆ ಅಶೋಕ್ ಫೋನ್ ಕಾಲ್ ಮಾಡುವ ಮೂಲಕ ಗರಂ ಆಗಿದ್ದಾರೆ ಎನ್ನಲಾಗಿದೆ. 

ಸಚಿವ ಆರ್. ಅಶೋಕ್ ಕರೆ ಮಾಡಿ ಆನಂದ್ ಸಿಂಗ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮಗೇನು ಮಾಡಲು ಕೆಲಸ ಇಲ್ಲವೇ. ಇಂತಹ ನಿರ್ಧಾರ ತೆಗೆದುಕೊಂಡಿದ್ದೀರಿ ಎಂದು ಅಶೋಕ್ ಫೋನ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆನ್ನಲಾಗಿದೆ.

ಖಾತೆ ಮರುಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಪೋಟ: ಆನಂದ್‌ ಸಿಂಗ್ ರಾಜೀನಾಮೆ? .

ಸಮಸ್ಯೆಗಳನ್ನು ಬಗೆಹರಿಸಿ ಎಲ್ಲವನ್ನೂ ಸರಿಮಾಡೋಣ. ಆದರೆ ರಾಜೀನಾಮೆ ನೀಡುವುದು ಬೇಡ ಎಂದು ಸಮಾಧಾನ ಪಡಿಸಿದ್ದಾ ಎನ್ನಲಾಗಿದೆ. 

ಈ ಹಿಂದೆ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದ ಆನಂದ್ ಸಿಂಗ್ ಮತ್ತೊಮ್ಮೆ ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿಯಾಗಿದ್ದು, ರಾಜೀನಾಮೆ ಕೊಡುವ ಪ್ರಹಸನ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.

ಭಟ್ಕಳದ ಐಬಿಯಲ್ಲಿ ಅಶೋಕ್ ಆನಂದ್‌ ಸಿಂಗ್‌ಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆನ್ನಲಾಗಿದೆ.

ಖಾತೆ ಬದಲಾವಣೆ ಮಾಡಿದ ಹಿನ್ನೆಲೆ ಆನಂದ್‌ ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ. ಪರಿಸರ ಖಾತೆ ಬದಲಾವಣೆ ಮಾಡಿ ತಮ್ಮ ಬಳಿ ಇದ್ದ ಮೂಲ ಸೌಕರ್ಯ ಖಾತೆ ಹಾಗೂ ಮಾಧುಸ್ವಾಮಿ ಬಳಿ ಇದ್ದ ಹಜ್ ಖಾತೆ ನೀಡಿದ್ದು, ಪರಿಸರ ಖಾತೆ ಮಾಧುಸ್ವಾಮಿಗೆ ನೀಡಲಾಗಿದೆ. ಈ ಸಂಬಂಧ ರಾಜೀನಾಮೆ ನೀಡುವುದಾಗಿ ಆನಂದ್ ಸಿಂಗ್ ಸಿಎಂ ಬಳಿ ಹೇಳಿಕೊಂಡಿದ್ದರೆನ್ನಲಾಗಿದೆ.