Asianet Suvarna News Asianet Suvarna News

Chikkaballapur: ಕಾಂಗ್ರೆಸ್‌ ಪಕ್ಷವು ದರೋಡೆಕೋರರ ಕೂಟ: ಸಚಿವ ಅಶೋಕ್‌

ಕಾಂಗ್ರೆಸ್‌ ದರೋಡೆಕೋರರ ಕೂಟ, ಸಿದ್ದರಾಮಯ್ಯ ಸಂಪುಟ ಒಳ್ಳೆಯದು ಮಾಡಿದ್ದರೆ, ಅವರು ಧರ್ಮಾತ್ಮರಾಗಿದ್ದರೆ, ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾಗಿದ್ದರೆ ಅವರನ್ನು ಯಾಕೆ ಓಡಿಸಿದರು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಪ್ರಶ್ನಿಸಿದರು.

Minister R Ashok Outraged Against Congress At Chikkaballapur gvd
Author
First Published Jan 14, 2023, 9:09 PM IST

ಚಿಕ್ಕಬಳ್ಳಾಪುರ (ಜ.14): ಕಾಂಗ್ರೆಸ್‌ ದರೋಡೆಕೋರರ ಕೂಟ, ಸಿದ್ದರಾಮಯ್ಯ ಸಂಪುಟ ಒಳ್ಳೆಯದು ಮಾಡಿದ್ದರೆ, ಅವರು ಧರ್ಮಾತ್ಮರಾಗಿದ್ದರೆ, ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾಗಿದ್ದರೆ ಅವರನ್ನು ಯಾಕೆ ಓಡಿಸಿದರು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಪ್ರಶ್ನಿಸಿದರು. ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಪಕ್ಷ ಬಿಟ್ಟು ಯಾಕೆ 16 ಜನ ಓಡಿಹೋದರು, ಕಾಂಗ್ರೆಸ್‌ ಸರಿ ಇಲ್ಲ, ಅವರು ನೀರು ಹಾಕಿ ತೊಳೆದರೆ ಸಾಲದು, ಗಂಜಲ ಹಾಕಿ ತೊಳೆದೆರೇನೆ ಆ ಪಾಪ ಹೋಗೋದು.

ಕಾಂಗ್ರೆಸ್‌ನವರು ಎಲ್ಲೆಲ್ಲಿ ಹೋಗ್ತಾ ಇದ್ದಾರೆ ಅಲ್ಲಿ ಗಂಜಲ ಹಾಕಿ ತೊಳೆದೆರೇನೆ ಆ ಪಾಪ ಹೋಗೋದು ಎಂದರು. ಈ ಹಿಂದೆ 5 ವರ್ಷ ಸರ್ಕಾರ ಇದ್ದಾಗ ಅದಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್‌ನವರು ಜನಕ್ಕೆ ಮೋಸ ಮಾಡಿದರು. ನಾಲಾಯಕ್‌ ಪಕ್ಷ ಎಂದು 16 ಜನ ಹೊರ ಬಂದರು, ಹೀಗಿದ್ದರೂ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ರೀತಿ ಕಾಂಗ್ರೆಸ್‌ ನವರು ಹೊರಟಿದ್ದಾರೆ. ಆದಷ್ಟು ಬೇಗ ಅವರಿಗೆ ಭ್ರಮನಿರಸನವಾಗಲಿದೆ. ಈ ಹಿಂದೆ ರಾಜ್ಯವನ್ನು ಲೂಟಿ ಮಾಡಿದವರು ಈಗ ಬಸ್‌ ನಲ್ಲಿ ಬರುತ್ತಿದ್ದಾರೆ ಎಚ್ಚರವಾಗಿರಿ ಎಂದು ಹೇಳಿದರು.

ಜ.19ಕ್ಕೆ ಕಲಬುರಗಿಗೆ ಪ್ರಧಾನಿ ಮೋದಿ: ಸಚಿವ ಆರ್.ಅಶೋಕ್‌ರಿಂದ ಪೂರ್ವಸಿದ್ಧತೆ ಪರಿಶೀಲನೆ

ಸಿದ್ದು ದಿಕ್ಕು ಕಾಣದೆ ಅಲೆಯುತ್ತಿರುವ ನಾಯಕ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ರೀತಿ ದಿಕ್ಕು ಕಾಣದೆ ಅಲೆಯುತ್ತಿರುವ ನಾಯಕ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಲೇವಡಿ ಮಾಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹೀನಾಯ ಸೋಲು ಕಂಡರು. ಚಾಮುಂಡೇಶ್ವರಿ ಕ್ಷೇತ್ರವನ್ನು ಯಾಕೆ ತೊರೆದರು ಎಂದು ಜನರು ಕೂಡ ಕೇಳುತ್ತಿದ್ದಾರೆ. ಒಂದು ವೇಳೆ ಅಭಿವೃದ್ಧಿ ಕಾರ್ಯ ಮಾಡಿದರೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಸೋಲು ಅನುಭವಿಸಿದರು? 

ನಂತರ ಬಾದಾಮಿಗೆ ಹೋದರು. ಅಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಜನ ಯಾಕೆ ಓಡಿಸುತ್ತಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಚಿಮ್ಮನಕಟ್ಟಿಅವರು ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಸಿದ್ದರಾಮಯ್ಯ ಅವರಿಗೆ ಛಲ, ಗೌರವ ಇದ್ದರೆ ಬಾದಾಮಿ ಅಥವಾ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು. ಸಿದ್ದರಾಮಯ್ಯ ಅವರು ಪದೇ ಪದೇ ಕ್ಷೇತ್ರ ಪಲಾಯನ ಯಾಕೆ ಮಾಡುತ್ತಿದ್ದಾರೆ? ಒಂದು ಬಾರಿ ಗೆದ್ದರೂ ಜನರ ಪ್ರೀತಿ, ವಿಶ್ವಾಸ ಕಳೆದುಕೊಂಡಿದ್ದಾರೆ. 

ಚಿಕ್ಕಬಳ್ಳಾಪುರ ಉತ್ಸವ ಪ್ರತಿ ವರ್ಷ ಅದ್ಧೂರಿಯಾಗಿ ನಡೆಯಲಿ: ಸಚಿವ ಆರ್‌.ಅಶೋಕ್‌

ಈ ಹಿಂದೆ ಕಾಂಗ್ರೆಸ್‌ ಮುಖಂಡರಾದ ಡಾ.ಜಿ.ಪರಮೇಶ್ವರ್‌, ಕೆ.ಎಚ್‌.ಮುನಿಯಪ್ಪ ಅವರನ್ನು ಸೋಲಿಸಿದರು. ಇಬ್ಬರೂ ಅವರನ್ನು ಸೋಲಿಸಲು ಕಾಯುತ್ತಿದ್ದಾರೆ. ಎಚ್ಚರಿಕೆಯಿಂದ ಇರಬೇಕು. ಒಂದು ಕಡೆ ನಿಂತು ರಾಜಕಾರಣ ಮಾಡಬೇಕು. ಕ್ಷೇತ್ರದ ಜನತೆ ಮೇಲೆ ವಿಶ್ವಾಸ ಇಟ್ಟು, ನಿರ್ದಿಷ್ಟಕೆಲಸ ಮಾಡಿಕೊಡುತ್ತೇನೆ ಎಂಬುದಾಗಿ ಹೇಳಿ ಮಾಡಿಕೊಡಬೇಕು. ಅದು ಬಿಟ್ಟು ಕೆಲಸ ಮಾಡದೆ ಕ್ಷೇತ್ರಕ್ಕಾಗಿ ಅಲೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Follow Us:
Download App:
  • android
  • ios