ಮಣಿಕಂಠ ಯಾವ ಸೀಮೆ ಮಹಾನಾಯಕ? ಸೋತು ಸುಣ್ಣಾದ ಬಿಜೆಪಿ ಘಟಾನುಘಟಿಗಳು ಈಗ ಅವನ ಹಿಂದೆ ಬಿದ್ದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಲೇವಡಿ ಮಾಡಿದ್ದಾರೆ.

ಕಲಬುರಗಿ (ಆ.31): ಮಣಿಕಂಠ ಯಾವ ಸೀಮೆ ಮಹಾನಾಯಕ? ಸೋತು ಸುಣ್ಣಾದ ಬಿಜೆಪಿ ಘಟಾನುಘಟಿಗಳು ಈಗ ಅವನ ಹಿಂದೆ ಬಿದ್ದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಲೇವಡಿ ಮಾಡಿದ್ದಾರೆ. ಮಣಿಕಂಠ್‌ ರಾಠೋಡ್‌ ವಿರುದ್ಧ ನಮ್ಮ ಸರ್ಕಾರದಲ್ಲಿ ಪ್ರಕರಣ ದಾಖಲಾದರೆ ಬಿಜೆಪಿಯವರು ಚಿತ್ತಾಪುರದಲ್ಲಿ ಪ್ರತಿಭಟನೆ ಮಾಡುತ್ತಾರೆ. ಅಧಿಕಾರ ಕಳೆದುಕೊಂಡವರು ಈಗ ರಾಠೋಡ್‌ ಪರವಾಗಿ ಹೋರಾಟಕ್ಕಿಳಿದಿದ್ದಾರೆ. 

ಹಿಂದೆ ಅವರದೇ ಸರ್ಕಾರದಲ್ಲಿ ಇದೇ ರಾಠೋಡ್‌ ವಿರುದ್ಧ ಪ್ರಕರಣ ಗಳು ದಾಖಲಾದವಲ್ಲ, ಆಗ ಬಿಜೆಪಿಯವರು ಪ್ರತಿಭಟನೆ ಮಾಡಲಿಲ್ಲವೇಕೆ? ಇವರದು ಅಧಿಕಾರದಲ್ಲಿದ್ದಾಗ ಒಂದು ನೀತಿ, ಇಲ್ಲದಿದ್ದಾಗ ಇನ್ನೊಂದು ನೀತಿ ಎಂದು ಕುಟುಕಿದರು. ಇನ್ನು, ನನ್ನ ವಿರುದ್ಧ ಮುಖ್ಯಮಂತ್ರಿ ಬಳಿಗೆ ಆಂದೋಲಾ ಸ್ವಾಮೀಜಿ ನಿಯೋಗ ತೆಗೆದುಕೊಂಡು ಹೋಗಿ, ‘ಜಿಲ್ಲೆಯನ್ನು ಪಾಕಿಸ್ತಾನ್‌ ಮಾಡುತ್ತಿದ್ದಾರೆ’ ಎಂದು ನಿರಾಧಾರ ಆರೋಪ ಮಾಡಿದ್ದರು. ನಾನೂ ಅವರ ವಿರುದ್ಧ ಮಾನನಷ್ಟಮೊಕದ್ದಮೆ ಹೂಡಿರುವೆ ಎಂದರು.

ಸತತ 2 ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದಲ್ಲಿ ಸಕಲ ಸೌಲಭ್ಯ ಕಲ್ಪಿಸುವೆ: ಪ್ರದೀಪ್‌ ಈಶ್ವರ್‌

ಚಂದ್ರಯಾನ ಚಂದ್ರನ ತಲುಪಿದರೂ ವಿಪಕ್ಷ ನಾಯಕ ಸಿಕ್ಕಿಲ್ಲ: ಇಸ್ರೋದ ಚಂದ್ರಯಾನದ ವಿಕ್ರಂ ಲ್ಯಾಂಡರ್‌ ಚಂದ್ರನ ಚುಂಬಿಸಿತು. ಆದರೆ ರಾಜ್ಯದ ಬಿಜೆಪಿಯವರಿಗೆ ಇನ್ನೂ ವಿರೋಧ ಪಕ್ಷದ ನಾಯಕನನ್ನ ನೇಮಕ ಮಾಡೋದಕ್ಕಾಗಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಬಿಜೆಪಿಯನ್ನು ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಕಾಂಗ್ರೆಸ್‌ ಸರ್ಕಾರದ ನೂರು ದಿನದ ಆಡಳಿತದ ಬಗ್ಗೆ ಬಿಜೆಪಿ ಚಾಜ್‌ರ್‍ಶೀಟ್‌ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರು ಅಧಿಕಾರ ಕಳೆದುಕೊಂಡು ನೂರು ದಿನವಾಗಿದೆ, ಹತಾಷರಾಗಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಚಾರ್ವಾಕನಿದ್ದಂತೆ: ಸಿ.ಟಿ.ರವಿ

ಮೊದಲು ತಮ್ಮ ಮನೆಯಂಗಳದ ಕಸ ಗುಡಿಸಲಿ, ಬಳಿಕ ನಮ್ಮ ಬಗ್ಗೆ ಮಾತನಾಡಲಿ ಎಂದು ತಿವಿದರು. ನಾವು ನಮ್ಮ ಐದು ಗ್ಯಾರಂಟಿ ಪೈಕಿ ನಾಲ್ಕನ್ನು ಈಡೇಸ್ತಿದೀವಿ. ಚಂದ್ರಯಾನ ಚಂದ್ರನ ಅಂಗಳ ತಲುಪಿದೆ. ಆದರೂ ಇಲ್ಲಿ ಬಿಜೆಪಿ ನಾಯಕರು ಯಾರು ಅಂತ ಇನ್ನೂ ಗೊತ್ತಾಗ್ತಿಲ್ಲ ಎಂದು ಲೇವಡಿ ಮಾಡಿದರು. ಬಿಜೆಪಿಯವರು ಹತಾಷರಾಗಿ ಬ್ಯಾರಿಕೇಡ್‌ ಬಂಧಿಯಾಗಿದ್ದಾರೆ. ಬಿಜೆಪಿಯ ರಾಜ್ಯ ನಾಯಕರಿಗೇ ಮೋದಿ ಭೇಟಿ ಸಾಧ್ಯವಾಗಿಲ್ಲ. ಇನ್ನು ಈ ಬೆಳವಣಿಗೆಯಿಂದ ಕನ್ನಡಿಗರ ಮರ್ಯಾದೆ ಬೀದಿಗೆ ಬಂದಿದೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಅದೆಷ್ಟು ತಾಕತ್ತಿನದ್ದಾಗಿದೆ ಎಂಬುದನ್ನು ಇದು ತೋರಿಸುತ್ತಿದ್ದಾರೆಂದು ಟೀಕಿಸಿದರು.