ಬಿಜೆಪಿಗರು ಬಟ್ಟೆ ಹರಿದುಕೊಂಡ್ರೂ ನಾನು ಹೆದರಲ್ಲ: ಪ್ರಿಯಾಂಕ್ ಕಿಡಿ
ಮೂರ್ಖರು ಯಾರಿದ್ದೀರಿ ಎಂದು ಕೇಳಿದರೆ ನಾವಿದ್ದೇವೆ ಎನ್ನುತ್ತಾರೆ ಬಿಜೆಪಿಯ ಕರ್ನಾಟಕ ನಾಯಕರು. ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನವನ್ನು ಮರಳಿಸಿಲ್ಲ. ನಿವೇಶನ ಮಂಜೂರಾತಿಗೆ ಅರ್ಹವಾದ ಸಂಸ್ಥೆಗಳಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಆಯ್ಕೆ ಆಗಿತ್ತು ಅಷ್ಟೆ. ನಿವೇಶನ ಇನ್ನೂ ಮಂಜೂರಾಗದಿರುವಾಗ ಮರಳಿಸಲು ಹೇಗೆ ಸಾಧ್ಯ ? ಸಿಎ ನಿವೇಶನಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಹಿಂಪಡೆಯಲಾಗಿದೆ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ್ ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು(ಅ.15): ವಿಜಯೇಂದ್ರ ಯಡಿಯೂರಪ್ಪ ಅವರೇ, ನಿಮ್ಮ ಪ್ರೇರಣಾ ಟ್ರಸ್ಟ್‌ಗೆ ಅಕ್ರಮವಾಗಿ ಮಂಜೂರು ಮಾಡಿಕೊಂಡಿದ್ದ ಭೂಮಿಯನ್ನು ಹಿಂದಿರುಗಿಸುವ ನೈತಿಕತೆ ತೋರಿಸುವಿರಾ? ಶಾಲೆ ನಿರ್ಮಿಸುವುದಾಗಿ ಅಕ್ರಮವಾಗಿ ನಿವೇಶನ ಪಡೆದು ಬಿರಿಯಾನಿ ಹೋಟೆಲ್ ಮಾಡಿರುವ ಛಲವಾದಿ ನಾರಾಯಣಸ್ವಾಮಿ ಆ ನಿವೇಶನ ಹಿಂದಿರುಗಿಸುವ ನೈತಿಕತೆ ತೋರಿಸುವರೇ? ಹೀಗಂತ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಖರ್ಗೆ ಅಧ್ಯಕ್ಷತೆಯ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಕಾನೂನು ಬಾಹಿರವಾಗಿ ನಿವೇಶನ ನೀಡಿದ್ದರಿಂದಲೇ ಅದನ್ನು ಹಿಂದಿರುಗಿಸಿದ್ದಾರೆ ಎಂದು ಬಿಜೆಪಿಯವರು ಆರಂಭಿಸಿದ್ದಾರಲ್ಲಾ ಎಂಬ ಪ್ರಶ್ನೆಗೆ, ಮೂರ್ಖರು ಯಾರಿದ್ದೀರಿ ಎಂದು ಕೇಳಿದರೆ ನಾವಿದ್ದೇವೆ ಎನ್ನುತ್ತಾರೆ ಬಿಜೆಪಿಯ ಕರ್ನಾಟಕ ನಾಯಕರು. ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನವನ್ನು ಮರಳಿಸಿಲ್ಲ. ನಿವೇಶನ ಮಂಜೂರಾತಿಗೆ ಅರ್ಹವಾದ ಸಂಸ್ಥೆಗಳಲ್ಲಿ ಸಿದ್ದಾರ್ಥ ವಿಹಾರ ಟ್ರಸ್ಟ್ ಆಯ್ಕೆ ಆಗಿತ್ತು ಅಷ್ಟೆ. ನಿವೇಶನ ಇನ್ನೂ ಮಂಜೂರಾಗದಿರುವಾಗ ಮರಳಿಸಲು ಹೇಗೆ ಸಾಧ್ಯ ? ಸಿಎ ನಿವೇಶನಕ್ಕೆ ಸಲ್ಲಿಸಿದ್ದ ಕೋರಿಕೆಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.
ಪ್ರಶ್ನೆ ಕೇಳಿದರೆ ‘ಓ ಮೈ ಗಾಡ್’ ಎಂದು ಹೆದರುವುದಕ್ಕೆ ನಾನು ಮೋದಿಯಲ್ಲ: ಸಚಿವ ಪ್ರಿಯಾಂಕ್ ಖರ್ಗೆ
ಬಿಜೆಪಿಯವರು ಬಟ್ಟೆ ಹರಿದುಕೊಂಡ್ರ ಹೆದರಲ್ಲ:
ಈ ವಿಚಾರದಲ್ಲಿ ಬಿಜೆಪಿಯವರು ಎಷ್ಟಾದ್ರೂ ಕೂಗಾಡಲಿ, ಎಗರಾಡಲಿ, ಬಟ್ಟೆ ಹರಿದುಕೊಂಡರೂ ನಾನು ಹೆದರುವುದಿಲ್ಲ. ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆಯಾಗಿಲ್ಲ ಅಂತ ಮೊದಲು ದೂರು ಕೊಟ್ಟರು. ಈಗೇನು ಹೇಳುತ್ತಾರೆ? ರಾಜ್ಯಪಾಲರ ಬದಲು ಪ್ರಧಾನಿ ಹಾಗೂ ರಾಷ್ಟ್ರಪತಿ ಅವರಿಗೆ ದೂರು ಕೊಡಲಿ. ನಿಜವಾಗಿಯೂ ನನಗೂ ಕುತೂಹಲ ಇದೆ. ಇವರು ಹೇಗೆ ಕಾನೂನು ಬಾಹಿರ ಅಂತ ಸಾಬೀತು ಮಾಡುತ್ತಾರೋ ನೋಡೋಣ ಎಂದು ಸವಾಲು ಹಾಕಿದರು.