ಕಾಂಗ್ರೆಸ್‌ಗೆ ಇಂತಿಷ್ಟೇ ಜನ ಬರುತ್ತಾರೆಂದು ಸ್ಪಷ್ಟವಾಗಿ ಹೇಳಲಾಗದು. ಕಲ್ಯಾಣ ಕರ್ನಾಟಕ ಹಲವರು ನನ್ನ ಸಂಪರ್ಕ ದಲ್ಲಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರನ್ನು ಪಕ್ಷ ಬರಮಾಡಿಕೊಳ್ಳಲ್ಲಿದೆ. ಇನ್ನು, ಈ ಮುಖಂಡರು ಪಕ್ಷಕ್ಕೆ ಬರುವುದರಿಂದ ಆಗುವ ಲಾಭ ನಷ್ಟಗಳ ಕುರಿತು ರಾಜ್ಯ ನಾಯಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದ ಅವರು, ಇದಕ್ಕೆ ನಾವು ‘ಆಪರೇಷನ್‌ ಹಸ್ತ’ ಪದ ಬಳಕೆ ಮಾಡಲ್ಲ.‘ಆಪರೇಷನ್‌’ ಎಂಬ ಕೆಟ್ಟಶಬ್ದ ತಂದಿದ್ದೇ ಬಿಜೆಪಿ ಎಂದ ಸಚಿವ ಎನ್‌.ಎಸ್‌.ಬೋಸರಾಜು 

ಮಡಿಕೇರಿ(ಆ.29): ಬಿಜೆಪಿಯ ಪ್ರಮುಖ ನಾಯಕರು, ಹಾಲಿ ಶಾಸಕರು, ಮಾಜಿ ಶಾಸಕರು ಸೇರಿ ನಾವು ನಂಬಲು ಆಗದೇ ಇರುವಂತಹ ಅನೇಕರು ಪಕ್ಷಕ್ಕೆ ಬಂದರೆ ಅಚ್ಚರಿ ಪಡಬೇಕಿಲ್ಲ. ಕಲ್ಯಾಣ ಕರ್ನಾಟಕದಲ್ಲಂತೂ ಬಿಜೆಪಿಗೆ ಆಘಾತ ಕಾದಿದೆ ಎಂದು ಸಚಿವ ಎನ್‌.ಎಸ್‌.ಬೋಸರಾಜು ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್‌ಗೆ ಇಂತಿಷ್ಟೇ ಜನ ಬರುತ್ತಾರೆಂದು ಸ್ಪಷ್ಟವಾಗಿ ಹೇಳಲಾಗದು. ಕಲ್ಯಾಣ ಕರ್ನಾಟಕ ಹಲವರು ನನ್ನ ಸಂಪರ್ಕ ದಲ್ಲಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರನ್ನು ಪಕ್ಷ ಬರಮಾಡಿಕೊಳ್ಳಲ್ಲಿದೆ. ಇನ್ನು, ಈ ಮುಖಂಡರು ಪಕ್ಷಕ್ಕೆ ಬರುವುದರಿಂದ ಆಗುವ ಲಾಭ ನಷ್ಟಗಳ ಕುರಿತು ರಾಜ್ಯ ನಾಯಕರಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ ಎಂದ ಅವರು, ಇದಕ್ಕೆ ನಾವು ‘ಆಪರೇಷನ್‌ ಹಸ್ತ’ ಪದ ಬಳಕೆ ಮಾಡಲ್ಲ.‘ಆಪರೇಷನ್‌’ ಎಂಬ ಕೆಟ್ಟಶಬ್ದ ತಂದಿದ್ದೇ ಬಿಜೆಪಿ ಎಂದರು.

Karnataka Politics: ಆಪರೇಶನ್‌ ಹಸ್ತ ಟಾಸ್ಕ್ ಯಾರಿ​ಗೂ ಕೊಟ್ಟಿ​ಲ್ಲ: ಎನ್‌.ಎಸ್‌.ಬೋಸರಾಜ್

ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸಲಾಗುತ್ತಿದೆ. ರಾಷ್ಟ್ರೀಯ ನಾಯಕರು ಈಗಾಗಲೇ ಈ ಬಗ್ಗೆ ಸಭೆ ನಡೆಸಿದ್ದಾರೆ. ಜಿಲ್ಲಾಮಟ್ಟದಲ್ಲಿ ಉಸ್ತುವಾರಿ ಸಚಿವರಿಗೆ ಚುನಾವಣೆ ಜವಾಬ್ದಾರಿ ನೀಡಲಾಗಿದೆ ಎಂದರು.