ಸಿದ್ದರಾಮಯ್ಯರ ನಾಯಕತ್ವ ಅಲ್ಲಾಡಿಸಲು ಸಾಧ್ಯವಿಲ್ಲ: ಬಿಜೆಪಿ ವಿರುದ್ಧ ಸಚಿವ ಎನ್‌ಎಸ್ ಬೋಸರಾಜು ಕಿಡಿ
ಸಿಎಂ ಬದಲಾವಣೆ ಸೃಷ್ಟಿ ಮಾಡಿರೋದು ಬಿಜೆಪಿಯವರು. ಜನರನ್ನ ಡೈವರ್ಟ್ ಮಾಡೋಕೆ ಹಿಂಗೆ ಮಾಡ್ತಾ ಇದ್ದಾರೆ ದಿನ ಒಂದೊಂದು ಮಾತಾಡೋದು, ಸುಳ್ಳು ಹೇಳೋದು ಮಾಡ್ತಾ ಇದ್ದಾರೆ ಎಂದು ಸಚಿವ ಎನ್‌ಎಸ್ ಬೋಸರಾಜು ಹರಿಹಾಯ್ದರು.
ಬೆಂಗಳೂರು (ಸೆ.9): ಎಲ್ಲ ಸಚಿವರು ಹೈಕಮಾಂಡ್ ನಾಯಕರ ಜೊತೆ ಸಮಯ ನಿಗದಿ ಮಾಡಿಕೊಂಡು ಹೋಗ್ತಾ ಇದ್ದಾರೆ. ಸತೀಶ್ ಜಾರಕಿಹೊಳಿ ಹೋಗಿದ್ರು, ಮುಂದಿನ ವಾರ ನಾನೂ ಹೋಗ್ತಾ ಇದ್ದೇನೆ. ಇಲ್ಲಿ ಯಾವ ರೀತಿ ಕೆಪಿಸಿಸಿ ಕಚೇರಿಗೆ ಬರ್ತಿವೋ ಅದೇ ರೀತಿ ದೆಹಲಿಗೆ ಹೋದ್ರೆ ನಮ್ಮ ನಾಯಕರ ಭೇಟಿ ಮಾಡಿ ಬರ್ತಿವಿ ಇದು ಸಾಮಾನ್ಯ ಎಂದು ಸಚಿವ ಎನ್‌ಎಸ್ ಬೋಸರಾಜು ತಿಳಿಸಿದರು.
ಪ್ರಬಲ ಸಚಿವರು ದೆಹಲಿಗೆ ಹೊರಟಿರುವ ವಿಚಾರ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಅವರ ಅವರ ಇಲಾಖೆಗೆ ಸಂಬಂಧ ಪಟ್ಟಂತೆ ಮಾತಾಡೋಕೆ ದೆಹಲಿಗೆ ಹೋಗ್ತಾ ಇರ್ತಾರೆ. ಸಿಎಂ ಬದಲಾವಣೆ ಅನ್ನೋದು ಕೇವಲ ಊಹಾಪೋಹ. ಕೋರ್ಟ್‌ನಲ್ಲಿ ಯಾವುದೇ ತೀರ್ಮಾನ ಬಂದ್ರೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ. ನ್ಯಾಯಾಂಗ ಏನು ಹೇಳುತ್ತೋ ಅದನ್ನು ನಾವು ಕೇಳ್ತೀವಿ. ಸಿದ್ದರಾಮಯ್ಯ ನಾಯಕತ್ವ ಅಲ್ಲಾಡಿಸಲು ಸಾಧ್ಯವಿಲ್ಲ. ನಾವೆಲ್ಲರೂ ಒಂದಾಗಿದ್ದೇವೆ ಕ್ಯಾಬಿನೆಟ್‌ನಲ್ಲಿ ಏನಾದರೂ ಬದಲಾವಣೆ ಆಗಿದ್ದು ನೋಡಿದ್ದೀರ? ಅದೇ ಬಿಜೆಪಿ ಸರ್ಕಾರ ಇದ್ದಾಗ ಅವ್ರ ಕ್ಯಾಬಿನೆಟ್‌ನಲ್ಲಿ ಡಿಫರೆನ್ಸ್ ಕಾಣ್ತಾ ಇತ್ತು. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಡೀ ಶಾಸಕಾಂಗ ಪಕ್ಷ, ಹೈಕಮಾಂಡ್ ಎಲ್ಲರೂ ಸಿಎಂ ಸಿದ್ದರಾಮಯ್ಯ ಪರ ಇದ್ದೇವೆ ಎಂದರು.
ರಾಯಚೂರಲ್ಲಿ ಸ್ಕೂಲ್ ಬಸ್ ಭೀಕರ ಅಪಘಾತ ಪ್ರಕರಣ: ಕುರ್ಡಿ ಗ್ರಾಮಕ್ಕೆ ಭೇಟಿ ನೀಡಿದ ಸಚಿವ ಶರಣಪ್ರಕಾಶ್ ಪಾಟೀಲ್
ಇನ್ನು ಸಿಎಂ ಖುರ್ಚಿಗಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ನಾಯಕರ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಉತ್ತಮ ಆಡಳಿತ ನಡೆಯುತ್ತಿದೆ. ಏನೋ ಕೇಳಿದಾಗ ಸುಮ್ಮನೆ ಹೇಳ್ತಾರೆ. ಎಲ್ಲರೂ ಒಂದೇ ಮಾತು ಹೇಳಿದ್ದಾರೆ. ಸಿಎಂ ಸ್ಥಾನಕ್ಕಾಗಿ ಯಾರೂ ಅಪೇಕ್ಷೆ ಪಡಲಿಲ್ಲ. ನಾನು ಎಲ್ಲರ ಜೊತೆ ಸಂಪರ್ಕದಲ್ಲಿದ್ದೇನೆ. ಕಾರ್ಯಕರ್ತರು, ಪಾರ್ಟಿ, ಶಾಸಕರು, ಶಾಸಕಾಂಗ ಪಕ್ಷ ಹೈಕಮಾಂಡ್ ಎಲ್ಲರೂ ಸಿದ್ದರಾಮಯ್ಯ ಪರ ಇದ್ದಾರೆ ಎಂದು ಸ್ಪಷ್ಟಪಡಿಸಿದರು.
ಬೆಂಗ್ಳೂರಿನಲ್ಲಿ 200 ಕೋಟಿ ವೆಚ್ಚದಲ್ಲಿ ವಿಜ್ಞಾನ ನಗರ ನಿರ್ಮಾಣಕ್ಕೆ ಕ್ರಮ: ಸಚಿವ ಬೋಸರಾಜು
ಸಿಎಂ ಬದಲಾವಣೆ ಬಿಜೆಪಿ ಸೃಷ್ಟಿ:
ಸಿಎಂ ಬದಲಾವಣೆ ಸೃಷ್ಟಿ ಮಾಡಿರೋದು ಬಿಜೆಪಿಯವರು. ಜನರನ್ನ ಡೈವರ್ಟ್ ಮಾಡೋಕೆ ಹಿಂಗೆ ಮಾಡ್ತಾ ಇದ್ದಾರೆ ದಿನ ಒಂದೊಂದು ಮಾತಾಡೋದು, ಸುಳ್ಳು ಹೇಳೋದು ಮಾಡ್ತಾ ಇದ್ದಾರೆ. ಜೋಶಿ, ಅಶೋಕ್, ಜಗದೀಶ್ ಶೆಟ್ಟರ್ ಹಿಂಗೆಲ್ಲಾ ಮಾತಾಡ್ತಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆಯಂತಹ ಯಾವುದೇ ಪ್ರಸಂಗ ಇಲ್ಲ. ನಾವು ಎಲ್ಲರೂ ಒಂದಾಗಿ ಇದ್ದೇವೆ ಎಂದು ಪುನರುಚ್ಚರಿಸಿದರು.