ಸಚಿವ ನಾರಾಯಣಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಮಂಡ್ಯ, (ಡಿ.14): ಕುಮಾರಸ್ವಾಮಿ ಈ ಹಿಂದೆ ನಮಗೆ ಸಾಕಷ್ಟು ನೋವು ಕೊಟ್ಟಿದ್ದಾರೆ. ನಮಗೆ ಚಪ್ಪಲಿಯಿಂದೆಲ್ಲಾ ಹೊಡೆಸಿದ್ದಾರೆ ಎಂದು ಸಚಿವ ನಾರಾಯಣಗೌಡ ಟೀಕಾ ಪ್ರಹಾರ ನಡೆಸಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಈ ಹಿಂದೆ ಕುಮಾರಸ್ವಾಮಿ ನಮಗೆ ಸಾಕಷ್ಟು ನೋವು ಕೊಟ್ಟಿದ್ದಾರೆ. ನಮಗೆ ಚಪ್ಪಲಿಯಲ್ಲೆಲ್ಲ ಹೊಡೆಸಿದ್ದಾರೆ. ಅವರು ನಾನೀಗ ಸಿಎಂ ಆಗ್ತೀನಿ ಅಂದುಕೊಂಡರೆ ಅದು ಅವರ ಭ್ರಮೆ. ಆ ಭ್ರಮೆಯಿಂದ ಕುಮಾರಸ್ವಾಮಿ ಮೊದಲು ಹೊರಬರಬೇಕು ಎಂದು ವ್ಯಂಗ್ಯವಾಡಿದರು.
BJP ಜೊತೆ JDS ವಿಲೀನ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಕುಮಾರಸ್ವಾಮಿ
ಪವರ್ ಇದ್ದಾಗ ಏನೂ ಮಾಡಲಿಲ್ಲ. ಈಗ ಪವರ್ ಇಲ್ಲ. ಆದ್ರೂ ಅದು ಇದು ಅಂತಾ ಮಾತಾಡುತ್ತಾರೆ. JDS ಹೆಸರಿನಲ್ಲಿ ನಿಂತ್ರೆ ಕೆ.ಆರ್.ಪೇಟೆಯಲ್ಲಿ ಒಂದು ಚಿಕ್ಕ ಮಗು ಕೂಡ ಗೆಲ್ಲುತ್ತೆ ಅಂತಿದ್ರು. ಈಗ ಅವರ ಮಗ ಸಹ ಗೆಲ್ಲಲು ಸಾಧ್ಯವಾಗಿಲ್ಲ. ಆ ನೋವು ಅವರಿಗೆ ಇದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಇದೇ ವೇಳೆ ಬಿಜೆಪಿ ಜತೆ ಜೆಡಿಎಸ್ ಪಕ್ಷದ ವಿಲೀನ ವದಂತಿ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವ ನಾರಾಯಣಗೌಡ, ನಾನು ಸಿಎಂ ಆಗುತ್ತೇನೆ, ನಿಮ್ಮನ್ನ ಮಂತ್ರಿ ಮಾಡುತ್ತೇನೆ ಅಂದಿದ್ದಾರೆ. ಹೀಗೆ ಅಂದುಕೊಂಡರೆ ಅದು ಕುಮಾರಸ್ವಾಮಿಯವರ ಭ್ರಮೆ. ವಿಲೀನ ವಿಚಾರ ಮೇಲ್ಮಟ್ಟಕ್ಕೆ ಬಿಟ್ಟಿದ್ದು, ಬಿಜೆಪಿಗೆ ಇದರ ಅಗತ್ಯವಿಲ್ಲ, ಬಿಜೆಪಿಗೆ 120 ಸೀಟ್‌ಗಳು ಇವೆ. ಯಡಿಯೂರಪ್ಪರನ್ನ ಅವರು ಟಚ್ ಸಹ ಮಾಡಲು ಸಾಧ್ಯವಿಲ್ಲ ಎಂದು ಗುಡುಗಿದರು.