Asianet Suvarna News Asianet Suvarna News

ಡಿಸಿಎಂ ಚರ್ಚೆ ಬಗ್ಗೆ ನಾನು ಮಾತಾಡಲ್ಲ: ಸಚಿವ ಚಲುವರಾಯಸ್ವಾಮಿ

ನಮ್ಮದು ಜಾತ್ಯಾತೀತ ನಿಲುವು ಇರುವ ಪಕ್ಷ ಕಾಂಗ್ರೆಸ್. ವೈಯಕ್ತಿಕವಾಗಿ ಕೆಲವರು ಮಾತಾಡಿದ್ದಾರೆ ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷದ ಜವಾಬ್ದಾರಿ ಅಧ್ಯಕ್ಷರು, ಮುಖ್ಯಮಂತ್ರಿ ಇದಾರೆ ನೋಡಿಕೊಳ್ತಾರೆ. ಡಿಸಿಎಂ ಚರ್ಚೆ ವಿಚಾರದ ಕುರಿತು ನಾನು ಮಾತಾಡಲ್ಲ ಎಂದ ಕೃಷಿ ಸಚಿವ ಚಲುವರಾಯಸ್ವಾಮಿ 
 

Minister N Cheluvarayaswamy React to DCM Post in Karnataka grg
Author
First Published Jun 26, 2024, 11:42 AM IST

ಬೆಳಗಾವಿ(ಜೂ.26):  ನಾನು ಯಾರು ಪರ ಇಲ್ಲ, ಯಾರ ವಿರೋಧ ಇಲ್ಲ. ಡಿಸಿಎಂ ಸ್ಥಾನ ಖಾಲಿ ಇಲ್ಲ ಖಾಲಿ ಇದ್ದಾಗ ನೋಡ್ತಾರೆ. ನಮ್ಮದು ಜಾತ್ಯಾತೀತ ನಿಲುವು ಇರುವ ಪಕ್ಷ ಕಾಂಗ್ರೆಸ್. ವೈಯಕ್ತಿಕವಾಗಿ ಕೆಲವರು ಮಾತಾಡಿದ್ದಾರೆ ಪಕ್ಷ ತೀರ್ಮಾನ ಮಾಡುತ್ತೆ. ಪಕ್ಷದ ಜವಾಬ್ದಾರಿ ಅಧ್ಯಕ್ಷರು, ಮುಖ್ಯಮಂತ್ರಿ ಇದಾರೆ ನೋಡಿಕೊಳ್ತಾರೆ. ಡಿಸಿಎಂ ಚರ್ಚೆ ವಿಚಾರದ ಕುರಿತು ನಾನು ಮಾತಾಡಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. 

ಚನ್ನಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ವಾಸ್ತವ್ಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಡಿ.ಕೆ. ಶಿವಕುಮಾರ್  ಅಧ್ಯಕ್ಷರು ನೋಡಿಕೊಳ್ಳುತ್ತಿದ್ದಾರೆ. ಚನ್ನಪಟ್ಟಣಕ್ಕೆ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಡಿಕೆಶಿ ಅಥವಾ ಡಿಕೆ ಸುರೇಶ್ ಯಾರು ಅಂತಾ ತೀರ್ಮಾನ ಆಗಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಕುಳಿತು ಚರ್ಚೆ ಮಾಡುತ್ತಾರೆ ಎಂದು ಹೇಳಿದ್ದಾರೆ. 

ಲೋಕಸಭಾ ಚುನಾವಣೆ 2024: ಬೆಳಗಾವಿ ಕಾಂಗ್ರೆಸ್‌ ಸೋಲಿಗೆ ಯಾರು ಹೊಣೆ?

ಮಂಡ್ಯದಲ್ಲಿ ನನ್ನ ಸೋಲಿಸಲು ಯತ್ನಿಸಿದ್ರೂ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಚಲುವರಾಯಸ್ವಾಮಿ, ನಮ್ಮನ್ನ ಸೋಲಿಸಲು ನೋಡಿದ್ರು ಆಗ ಜನ ಗೆಲ್ಲಿಸಿದ್ರು. ನಾನು ಜೆಡಿಎಸ್ ನಲ್ಲಿ ಇಲ್ಲಾ ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಬೇಕು. ನಮ್ಮ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡಿದ್ದೇವೆ. ಕುಮಾರಸ್ವಾಮಿ ಅವರು ಕೆಲಸ ಮಾಡಲಿ ಒಂದು ವರ್ಷ ಏನೂ ಮಾತಾಡಲ್ಲ. ಕುಮಾರಸ್ವಾಮಿ ಹೊಸದಾಗಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ತಂದೆ ಮಾಡಲು ಆಗದ್ದನ್ನ ಕೆಲಸ ಮಾಡ್ತೇನಿ ಅಂತ ಭರವಸೆ ಕೊಟ್ಟಿದ್ದಾರೆ. ಅವರು ಕೆಲಸ ಮಾಡಿದ್ರೇ ನಾನು ಹೆಚ್ಚು ಖುಷಿ ಪಡ್ತೀನಿ. ಈಗ ಕುಮಾರಸ್ವಾಮಿ ಬಗ್ಗೆ ಟೀಕೆ ಟಿಪ್ಪಣಿ ಮಾಡಲ್ಲ. ದೇವೆಗೌಡರ ಕುಟುಂಬದ ಬಗ್ಗೆ ವೈಯಕ್ತಿಕವಾಗಿ ಮಾತಾಡಿಲ್ಲ. ಕೋರ್ಟ್ ಅದರ ಬಗ್ಗೆ ತೀರ್ಮಾನ ಮಾಡುತ್ತೆ. ಕುಮಾರಸ್ವಾಮಿ ಅವರು ಡಿವೈಡ್ ಆಗಿದ್ದೇವೆ ಅಂತಾ ಹೇಳ್ತಿದ್ದಾರೆ. ಆದರೆ ಹೀಗಾಗಬಾರದಿತ್ತು ಅದನ್ನ ಕಾನೂನು ನೋಡುತ್ತೆ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios