Asianet Suvarna News Asianet Suvarna News

ಗೌರ್ನರ್‌ರಿಂದ ರಾಜ್ಯದಲ್ಲಿ ಪ್ರಜಾಪ್ರಭುತ್ವ ಹಾಳು: ಸಚಿವ ಎನ್.ಚಲುವರಾಯಸ್ವಾಮಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲಾ. ರಾಜ್ಯಪಾಲರು ಸಂಬಂಧವೇ ಇಲ್ಲದೆ ವಿಚಾರವನ್ನು ಪ್ರಾಸಿಕ್ಯೂಷನ್ಗೆ ಕೊಡಿಸಿದ್ದಾರೆ. ನ್ಯಾಯಾಲಯದಲ್ಲಿ ಆ ಪ್ರಕರಣ ನಿಲ್ಲಲ್ಲ ಅಂತ ಅವರಿಗೂ ಗೊತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. 

minister n chaluvarayaswamy slams on governer over siddaramaiahs muda case gvd
Author
First Published Aug 22, 2024, 10:29 PM IST | Last Updated Aug 22, 2024, 10:29 PM IST

ಚಿಕ್ಕಬಳ್ಳಾಪುರ (ಆ.22): ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲಾ. ರಾಜ್ಯಪಾಲರು ಸಂಬಂಧವೇ ಇಲ್ಲದೆ ವಿಚಾರವನ್ನು ಪ್ರಾಸಿಕ್ಯೂಷನ್ಗೆ ಕೊಡಿಸಿದ್ದಾರೆ. ನ್ಯಾಯಾಲಯದಲ್ಲಿ ಆ ಪ್ರಕರಣ ನಿಲ್ಲಲ್ಲ ಅಂತ ಅವರಿಗೂ ಗೊತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. 

ತಾಲೂಕಿನ ಬನ್ನಿಕುಪ್ಪೆ ಮತ್ತು ಯಲುವಹಳ್ಳಿ ಗ್ರಾಮದ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ, ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಗರ ಹೊರವಲಯದ ಜಡಿಲ ತಿಮ್ಮನಹಳ್ಳಿ ಬಳಿಯ ಜೈನ್ ಆಸ್ಪತ್ರೆ ಹತ್ತಿರ ಕೆ. ಎಸ್.ಎಸ್.ಸಿ ಕಟ್ಟಡ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸೆಂಟರ್‌ಆಫ್ ಎಕ್ಸಲೆನ್ಸಿ ಕಟ್ಟಡ ಉದ್ಘಾಟನೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕಕ್ಕೆ ರಾಜಪಾಲರು ಬಂದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುವುದಕ್ಕೆ, ದೇಶದಲ್ಲೇ ಪ್ರಾಮಾಣಿಕ ಮುಖ್ಯಮಂತ್ರಿ ಎಂದೇ ಹೆಸರು ಮಾಡಿದವರು ನಮ್ಮಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ನೀಡುವುದಿಲ್ಲ. 

ಜೈಲಿಗೆ ಹೋದರೂ ಸೀಟು ಬಿಡುವುದಿಲ್ಲ ಎಂಬ ಮನಸ್ಥಿತಿ ಸಿದ್ದರಾಮಯ್ಯನವರಿಗಿದೆ: ಶಾಸಕ ಸಿಮೆಂಟ್ ಮಂಜುನಾಥ್

ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿ ಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರದಲ್ಲಿ ಕಾನೂನು ಹೋರಾಟ ಮಾಡುತ್ತೇವೆ. ಜೊತೆಗೆ ಪಕ್ಷದ ವತಿಯಿಂದಲೂ ಹೋರಾಟ ನಡೆಸುತ್ತೇವೆ ಎಂದರು. ರಾಜ್ಯದಲ್ಲಿ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯ ಮಂತ್ರಿಯಾಗಿದ್ದಾರೆ, ಇದನ್ನು ಸಹಿಸದ ಬಿಜೆಪಿಯವರು ವಿನಾಕಾರಣ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯ ಮಂತ್ರಿಗಳನ್ನು ರಾಜೀನಾಮೆ ಕೊಡಿಸುವಂತ ಷಡ್ಯಂತ್ರ ಯಾಕೆ ಮಾಡುತ್ತಿದ್ದೀರಾ? ರಾಜ್ಯಪಾಲರ ಬಳಿ ಹಲವು ಆರೋಪಗಳ ಪಟ್ಟಿಯೇ ಇದೆ, 

ಸಿದ್ದರಾಮಯ್ಯನವರನ್ನು ಮಾತ್ರ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಹೇಳಿದರು. ದ್ವೇಷ ರಾಜಕಾರಣ ಮಾಡುವ ಕಾರಣಕ್ಕೆ ಬಿಜೆಪಿ ಮತ್ತು ಜೆಡಿಎಸ್ ನವರು ಈ ವಿಷಯ ಇಟ್ಟುಕೊಂಡು ಮೈಸೂರು ಪಾದಯಾತ್ರೆ ಮಾಡಿದರು. ಇದರಿಂದ ಯಾವ ಪ್ರಯೋಜನ 'ವಾಗಿದೆ ಎಂದರು. ರಾಜ್ಯಪಾಲರಿಗೆ ನಾವು ಮನವಿ ಮಾಡುತ್ತೇವೆ, ಸಿದ್ದರಾಮಯ್ಯ ವಿರುದ್ಧದ ಕೇಸ್ ವಾಪಸ್ ತೆಗೆದುಕೊಳ್ಳಿ, ಇಲ್ಲದಿದ್ದರೆ ರಾಜಭವನಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮಾಡು ವುದಾಗಿ ಎಚ್ಚರಿಕೆ ನೀಡಿದರು. ರಾಜ್ಯ ಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದಾರೆ, ದ್ವೇಷ ಕಾರಣ ಮಾಡುವ ಮೂಲಕ ರಾಜ್ಯ ಸರ್ಕಾ ರವನ್ನು ಅಸ್ಥಿರಗೊಳಿಸುವ ಕೆಲಸ ಮಾಡಲಾಗುತ್ತಿದೆ, ಸಿದ್ದರಾಮಯ್ಯ ಯಾವ ಕಾರಣಕ್ಕೆ ರಾಜೀನಾಮೆ ಕೊಡಬೇಕು? 

ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷ ಜಯಭೇರಿ: ಕಾಂಗ್ರೆಸ್‌ಗೆ ಮುಖಭಂಗ

ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ಕೊಡುವುದಿಲ್ಲ ಎಂದರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಮೇಲೆ ಯಾಕೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ? ಕುಮಾರಸ್ವಾಮಿಯವರದ್ದು ತನಿಖೆ ಎಲ್ಲಾ ಮುಗಿದಿದ್ದರೂ ಯಾಕೆ ಕೊಟ್ಟಿಲ್ಲ ? ಇದು ರಾಜಕೀಯ ಅಲ್ಲವೇ? ಇಡಿ, ಐಟಿ, ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರವು ಎಷ್ಟು ದಿನ ಆಟವಾಡುತ್ತದೆಯೋ ನೋಡೋಣ ಎಂದು ಹೇಳಿದರು. ದೇಶದ ಬಹುತೇಕ ಕಾಂಗ್ರೆಸ್ ಸರ್ಕಾರವಿದ್ದ ರಾಜ್ಯಗಳಲ್ಲೆಲ್ಲ ರಾಜ್ಯಪಾಲರ ದುರುಪ ಯೋಗ 'ವಾಗಿದೆ. ಕ್ಯಾಬಿನೆಟ್ ಸಲಹೆ ಪರಿಗಣನೆ ಮಾಡಿಲ್ಲ. ಕುಮಾರಸ್ವಾಮಿ, ಜನಾರ್ಧನ ರೆಡ್ಡಿ, ನಿರಾಣಿ, ಶಶಿಕಲಾ ಜೊಲ್ಲೆ ಪ್ರಕರಣಗಳು ಏನಾಗಿವೆ ಎಂದು ಪ್ರಶ್ನಿಸಿದರು.

Latest Videos
Follow Us:
Download App:
  • android
  • ios