ಬಿಜೆಪಿ ಸಂಘಟನೆಗೆ ಒತ್ತು ನೀಡಿ: ಸಚಿವ ನಿರಾಣಿ
ಬೇರು ಮಟ್ಟದಿಂದ ಪಕ್ಷ ಸಂಘಟನೆಯಾಗಬೇಕಾದರೆ ಕಾರ್ಯಕರ್ತರ ಶ್ರಮ ಪ್ರಮುಖವಾಗಿದೆ. ಬಿಜೆಪಿ ಪಕ್ಷ ಬಲ ವರ್ದನೆಗೆ ಕಾರ್ಯಕರ್ತರೆ ಜೀವಾಳವಾಗಿದ್ದಾರೆ: ಮುರಗೇಶ ನಿರಾಣಿ
ಜೇವರ್ಗಿ(ಜ.03): ಬುನಾದಿ ಭದ್ರವಾಗಿದ್ದರೆ ಕಟ್ಟಡ ಸುಭದ್ರವಾಗಲು ಸಾದ್ಯ ಆ ನಿಟ್ಟಿನಲ್ಲಿ ಗ್ರಾಮೀಣ ಮಟ್ಟದ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಾರೆ. ಅಂತಹ ಕಾರ್ಯಕರ್ತರನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರಗೇಶ ನಿರಾಣಿ ಅಭಿಪ್ರಾಯ ಪಟ್ಟರು.
ಸೋಮವಾರ ತಾಲ್ಲೂಕಿನ ಕೋಳಕೂರ ಗ್ರಾಮದ ಹಿರೇಮಠದ ಆವರಣದಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬೇರು ಮಟ್ಟದಿಂದ ಪಕ್ಷ ಸಂಘಟನೆಯಾಗಬೇಕಾದರೆ ಕಾರ್ಯಕರ್ತರ ಶ್ರಮ ಪ್ರಮುಖವಾಗಿದೆ. ಬಿಜೆಪಿ ಪಕ್ಷ ಬಲ ವರ್ದನೆಗೆ ಕಾರ್ಯಕರ್ತರೆ ಜೀವಾಳವಾಗಿದ್ದಾರೆ. ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಅಭಿವೃದ್ದಿಗೆ ನಾನಾ ಮಹತ್ತರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದು, ರೈತರಿಗೆ ಕಿಸಾನ ಸಮ್ಮಾನ ಯೋಜನೆ ಜಾರಿಗೆ ತಂದಿದ್ದಾರೆ. ಕೇಂದ್ರದ ಜೊತೆಗೆ ರಾಜ್ಯ ಸರ್ಕಾರವು ರೈತರಿಗೆ ಸಹಾಯ ಧನ ಕಲ್ಪಿಸುತ್ತಿದೆ.ಜನ ಪರ ರೈತ ಪರ ಯೋಜನೆಗಳಿಗೆ ಕಾಯಕಲ್ಪ ಕಲ್ಪಿಸುವದರ ಮೂಲಕ ಜನಾನುರಾಗಿ ಸರ್ಕಾರ ಎನಿಸಿಕೊಂಡಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವ ಮೂಲಕ ಬಿಜೆಪಿ ಪಕ್ಷವನ್ನು ಮತ್ತಷ್ಟುಬಲ ಪಡಿಸಬೇಕ್ಕಾಗಿದೆ ಎಂದು ಅವರು ಹೇಳಿದರು.
100 ದಿನ ಚುರುಕಾಗಿ ಕೆಲಸ ಮಾಡಿ ಪಕ್ಷ ಅಧಿಕಾರಕ್ಕೆ ತನ್ನಿ, ಶಕ್ತಿ ಕೇಂದ್ರದ ಸಭೆಯಲ್ಲಿ ಬಿ.ಎಲ್.ಸಂತೋಷ್
ಕಾರ್ಯಕ್ರಮದಲ್ಲಿ ವಿದಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ತಾಲ್ಲುಕು ಘಟಕದ ಅಧ್ಯಕ್ಷ ಭೀ?ಮರಾವ ಗುಜಗೂಂಡ, ಆದಪ್ಪ ಸಾಹು ಸಿಕೇದ್, ಬಸವರಾಜ ಸಾಹು ಜಮಶೆಟ್ಟಿ, ಅಶೋಕ ಪಾಟೀಲ, ಬಸಣ್ಣಗೌಡ ಪಾಟೀಲ, ಸಾತಣ್ಣಗೌಡ ಪಾಟೀಲ, ಶಿವಪುತ್ರಪ್ಪ ಆಡಿನ, ಸಂತೋಷ ಮಲ್ಲಾಬಾದ, ಅರವಿಂದ ಚವ್ಹಾಣ, ಯಶವಂತರಾಯಗೌಡ ಬಣಮಗಿ, ಗೌರಿಶಂಕರ ಬಣಮಗಿ, ನಾಗಣ್ಣ ಗೌನಳ್ಳಿ ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.