ಕಾಂಗ್ರೆಸ್-ಜೆಡಿಎಸ್ ಅಭಿವೃದ್ಧಿಗೆ ಮಾರಕ: ಸಚಿವ ಮುರುಗೇಶ ನಿರಾಣಿ
ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಳೆದ 4 ವರ್ಷ ಸುಸ್ಥಿರ ಸರ್ಕಾರ ನೀಡಿದ್ದೇವೆ. ರೈತರು, ಮಹಿಳೆಯರು, ಯುವಕರು ಹಾಗೂ ಶ್ರಮಿಕರ ಕಲ್ಯಾಣಕ್ಕಾಗಿ ದುಡಿದಿದ್ದೇವೆ. ಕಾಂಗ್ರೆಸ್ ಕೇವಲ ಗರೀಬ್ ಕಲ್ಯಾಣ ಹೆಸರಿನಲ್ಲಿ ಕೇವಲ ಪ್ರಚಾರ ಪಡೆದಿದೆ: ನಿರಾಣಿ
ಬೀಳಗಿ(ಏ.09): ಕಳೆದ ಐದು ವರ್ಷಗಳ ಅವಧಿಯಲ್ಲಿ ಬೀಳಗಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಎಲ್ಲ ಸ್ತರದ ಜನತೆಯನ್ನು ಮುಟ್ಟಿವೆ. ಬೀಳಗಿ ಪಟ್ಟಣದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಂಡ ಫಲವಾಗಿ ಪಟ್ಟಣ ಅಭಿವೃದ್ಧಿಯಿಂದ ಕಂಗೊಳಿಸುತ್ತಿದೆ ಎಂದು ಸಚಿವ ಮುರಗೇಶ ನಿರಾಣಿ ಹೇಳಿದರು.
ಬೀಳಗಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ನಂತರ ಕಾರ್ಯಕರ್ತರು ಹಾಗೂ ಪಟ್ಟಣದ ನಾಗರಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದ 24/7 ಕುಡಿಯುವ ನೀರಿನ ಸೌಕರ್ಯಕ್ಕಾಗಿ 40 ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಡಿವೈಡರ್ ರಸ್ತೆ, ಬೀದಿದೀಪ, ದೇವಸ್ಥಾನಗಳ ಜೀರ್ಣೋದ್ಧಾರ ಹೀಗೆ ಜನತೆಗೆ ಕಲ್ಪಿಸಬೇಕಾದ ಎಲ್ಲ ಸೌಕರ್ಯಗಳನ್ನು ಈ 5 ವರ್ಷಗಳ ಅವಧಿಯಲ್ಲಿ ನೀಡಲಾಗಿದೆ. ಈ ಬಾರಿಯ ಮತ ಅಭಿವೃದ್ಧಿಗೆ ಮೀಸಲಿಟ್ಟು, ಬಿಜೆಪಿ ಬೆಂಬಲಿಸುವ ಮೂಲಕ ಮತ್ತೊಮ್ಮೆ ಆಶೀರ್ವದಿಸಿ ಗೆಲ್ಲಿಸಬೇಕು ಎಂದು ವಿನಂತಿಸಿಕೊಂಡರು.
ಕಾಂಗ್ರೆಸ್ ಟಿಕೆಟ್ ಫೈಟ್‌ಗೆ ಸ್ವಾಮೀಜಿಗಳ ಎಂಟ್ರಿ: ಉಮಾಶ್ರೀಗೆ ಟಿಕೆಟ್ ನೀಡದಂತೆ ಮಠಾಧೀಶರ ಒತ್ತಡ
ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿವೆ. ಯಡಿಯೂರಪ್ಪ ಹಾಗೂ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಳೆದ 4 ವರ್ಷ ಸುಸ್ಥಿರ ಸರ್ಕಾರ ನೀಡಿದ್ದೇವೆ. ರೈತರು, ಮಹಿಳೆಯರು, ಯುವಕರು ಹಾಗೂ ಶ್ರಮಿಕರ ಕಲ್ಯಾಣಕ್ಕಾಗಿ ದುಡಿದಿದ್ದೇವೆ. ಕಾಂಗ್ರೆಸ್ ಕೇವಲ ಗರೀಬ್ ಕಲ್ಯಾಣ ಹೆಸರಿನಲ್ಲಿ ಕೇವಲ ಪ್ರಚಾರ ಪಡೆದಿದೆ. ಇದನ್ನು ಅರಿತು ಸರ್ವ ಜನಾಂಗದವರು ಬಿಜೆಪಿ ಬೆನ್ನಿಗೆ ನಿಲ್ಲುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ತಾಲೂಕಾಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಪಪಂ ಅಧ್ಯಕ್ಷ ವಿಠ್ಠಲ ಬಾಗೇವಾಡಿ, ಮಲ್ಲಿಕಾರ್ಜುನ ಅಂಗಡಿ, ಮಾಜಿ ಅಧ್ಯಕ್ಷ ಸಂಗಪ್ಪ ಕಟಗೇರಿ, ವ್ಹಿ.ಜಿ.ರೇವಡಿಗಾರ, ಶ್ರೀಶೈಲ ದಳವಾಯಿ, ಸಿದ್ದು ಮಾದರ, ಪಡಿಯಪ್ಪ ಕಳ್ಳಿಮನಿ, ವಿಠ್ಠಲ ನಿಂಭಾಳ್ಕರ ಹಾಗೂ ಇನ್ನೂ ಅನೇಕರು ಇದ್ದರು.
ಬಿಜೆಪಿಗೆ ಬೆಂಬಲ:
ಬೀಳಗಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜೈ ಕರ್ನಾಟಕ ಸಂಘದಿಂದ ಮುರಗೇಶ ನಿರಾಣಿಯವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ವಿಪ ಸದಸ್ಯ ಹಣಮಂತ ನಿರಾಣಿ ಹಾಗೂ ಸಂಗಮೇಶ ನಿರಾಣಿ ಸಮ್ಮುಖದಲ್ಲಿ ಬೀಳಗಿ, ಸುನಗ, ಸಿದ್ದಾಪೂರ, ಕೊರ್ತಿ ಗ್ರಾಮದ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಘಟಕದವರು ಹಾಗೂ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಅಲ್ಲದೇ ಬೀಳಗಿ ಪಟ್ಟಣ, ಚಿಕ್ಕ ಹಂಚಿನಾಳ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.