ಚಿಕ್ಕಬಳ್ಳಾಪುರ, (ಜೂನ್.06): ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಸ್ವತಃ ಸಿಎಂ ಬಿಎಸ್ ಯಡಿಯಯೂರಪ್ಪ ಅವರು ಕಡ್ಡಿ ಮುರಿದಂತೆ ಹೇಳಿದ್ದು, ರಾಜ್ಯ ಬಿಜೆಪಿ ಸಂಚಲನ ಮೂಡಿಸಿದೆ.

ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸಿಎಂ ಹೇಳಿದ್ದೇ ತಡ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ.

ರಾಜೀನಾಮೆ ಕೊಟ್ಟು ಹೋಗ್ತೀನಿ: ಸಿಎಂ ಮಾತಿಗೆ ಅಧ್ಯಕ್ಷರ ಪ್ರತಿಕ್ರಿಯೆ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬಕಾರಿ ಸಚಿವ ಎಂ.ಟಿ.ಬಿ.ನಾಗರಾಜ್, ಬಿಜೆಪಿಯಲ್ಲಿ ಪರ್ಯಾಯ ನಾಯಕರು ಬೇಕಾದಷ್ಟು ಜನ ಇದ್ದಾರೆ. ಎರಡು ಮೂರು ಬಾರಿ ಮಂತ್ರಿಗಳಾಗಿದ್ದು, ಸಿಎಂ ಸ್ಥಾನ ನಿಭಾಯಿಸಬಲ್ಲ‌ ನಾಯಕರಿದ್ದಾರೆ, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಏನೇ‌ ನಿರ್ಧಾರ ತೆಗೆದುಕೊಂಡರೂ ನಾವು ‌ಬದ್ಧರಾಗಿರುತ್ತೇವೆ ಎಂದರು.

ದೆಹಲಿಯಲ್ಲಿ ಏನೋ ಒಂದು ರೀತಿ ಬೆಳವಣಿಗೆಗಳು ಆಗುತ್ತಿವೆ. ಏನು ಬೆಳವಣಿಗೆ ಆಗುತ್ತಿದೆ ಅನ್ನೋದು ಎರಡು ಮೂರು ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದರು.

ನಾನು ಹತ್ತಾರು ಬಾರಿ ಹೇಳಿದ್ದೇನೆ. ಹೈಕಮಾಂಡ್ ಯಾವುದೇ ತಿರ್ಮಾನ ತೆಗೆದುಕೊಂಡರೂ ಯಡಿಯೂರಪ್ಪ ಒಪ್ಪಿಕೊಳ್ತಾರೆ. ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ, ಪಕ್ಷ ದೊಡ್ಡದು. ಬಿಎಸ್​​ವೈ ಪಕ್ಷವನ್ನ ಕಟ್ಟಿ‌ಬೆಳೆಸಿದ್ದಾರೆ, ಆದರೆ ಅವರಿಗೆ ಸ್ವಲ್ಪ ಸಮಸ್ಯೆಯಿದೆ. ವಯಸ್ಸಾಗಿದೆ, ಆರೋಗ್ಯ ಸಮಸ್ಯೆಯಿದೆ, ಆದರೂ ದಿನಕ್ಕೆ 12 ಗಂಟೆ ಕೆಲಸ ಮಾಡ್ತಿದ್ದಾರೆ. ಇವತ್ತು ಅವರಾಗಿಯೇ ಹೇಳಿದ್ದಾರೆ, ಹೈಕಮಾಂಡ್ ಹೇಳಿದ್ರೆ ಅವರು ಬದ್ದವಾಗಿಯೇ ಇದ್ದಾರೆ ಎಂದು ಹೇಳಿದರು.