Asianet Suvarna News Asianet Suvarna News

ಸಿದ್ದರಾಮಯ್ಯ ಕೊಟ್ಟ ಮಾತನಂತೆ‌ ನಡೆಯುತ್ತಿದ್ದಾರೆ, ಅದಕ್ಕೆ ಬಿಜೆಪಿಯವರಿಗೆ ಹೊಟ್ಟೆ ಕಿಚ್ಚು: ಮಧು ಬಂಗಾರಪ್ಪ

2 ಸಾವಿರ ಕೊಡ್ತಾರೆ, ಕಮಿಷನ್ ತಿನ್ನೋಕ್ಕಾಗಲ್ಲ. ಇವರು ಬಂದ್ರೆ ಗ್ಯಾರಂಟಿ ಕ್ಲೋಸ್ ಮಾಡೋದು ಕಮಿಷನ್ ಬಗ್ಗೆ ಚಿಂತೆ ಮಾಡೋದೆ ಬಿಜೆಪಿಯವರ ಕೆಲಸ. ಆ ಯೋಚನೆಯಲ್ಲೇ ಬಿಜೆಪಿ ಇರುತ್ತೆ. ನಮ್ಮ ಕಾಂಗ್ರೆಸ್ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತೆ. ಬಿಜೆಪಿ ರಾಜಭವನನ್ನ ದುರುಪಯೋಗ ಪಡಿಸಿಕೊಂಡಿರುವುದು ಎದ್ದು ಕಾಣುತ್ತಿದೆ ಎಂದು ಕಿಡಿ ಕಾರಿದ ಸಚಿವ ಮಧು ಬಂಗಾರಪ್ಪ 

minister Madhu Bangarappa Slams Karnataka BJP Leaders grg
Author
First Published Aug 30, 2024, 4:51 PM IST | Last Updated Aug 30, 2024, 4:51 PM IST

ಮಂಡ್ಯ(ಆ.30): ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ. ಸಿದ್ದರಾಮಯ್ಯ ದೊಡ್ಡ ನಾಯಕ. ಸಿದ್ದರಾಮಯ್ಯ, ದೇವರಾಜ ಅರಸ್, ಬಂಗಾರಪ್ಪ, ವೀರಪ್ಪ ಮೊಯ್ಲಿ ಹಿಂದುಳಿದ ವರ್ಗಕ್ಕೆ ಹಲವಾರು ಯೋಜನೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಕೊಟ್ಟ ಮಾತನಂತೆ‌ ನಡೆಯುತ್ತಿದ್ದಾರೆ. ಬಿಜೆಪಿಯವರಿಗೆ ಅದಕ್ಕೆ ಹೊಟ್ಟೆ ಕಿಚ್ಚು ಎಂದು ಬಿಜೆಪಿ ನಾಯಕರ ವಿರುದ್ಧ ಸಚಿವ ಮಧು ಬಂಗಾರಪ್ಪ ಹರಿಹಾಯ್ದಿದ್ದಾರೆ. 

ನಾಳೆ ಕಾಂಗ್ರೆಸ್ ರಾಜಭವನಕ್ಕೆ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, 2 ಸಾವಿರ ಕೊಡ್ತಾರೆ, ಕಮಿಷನ್ ತಿನ್ನೋಕ್ಕಾಗಲ್ಲ. ಇವರು ಬಂದ್ರೆ ಗ್ಯಾರಂಟಿ ಕ್ಲೋಸ್ ಮಾಡೋದು ಕಮಿಷನ್ ಬಗ್ಗೆ ಚಿಂತೆ ಮಾಡೋದೆ ಬಿಜೆಪಿಯವರ ಕೆಲಸ. ಆ ಯೋಚನೆಯಲ್ಲೇ ಬಿಜೆಪಿ ಇರುತ್ತೆ. ನಮ್ಮ ಕಾಂಗ್ರೆಸ್ ಸರ್ಕಾರ ಒಳ್ಳೆಯ ಕೆಲಸ ಮಾಡುತ್ತೆ. ಬಿಜೆಪಿ ರಾಜಭವನನ್ನ ದುರುಪಯೋಗ ಪಡಿಸಿಕೊಂಡಿರುವುದು ಎದ್ದು ಕಾಣುತ್ತಿದೆ ಎಂದು ಕಿಡಿ ಕಾರಿದ್ದಾರೆ. 

ಸರ್ಕಾರದ ಬಳಿ ಹಣವಿಲ್ಲದಿದ್ರೆ 12000 ಶಿಕ್ಷಕರ ನೇಮಕ ಸಾಧ್ಯವ? : ಮಧು ಬಂಗಾರಪ್ಪ

12 ವರ್ಷದ ಹಿಂದೆ ತುಕ್ಕು ಹಿಡಿದಿರುವ ಮುಡಾ ಪ್ರಕರಣಕ್ಕೆ ಜೀವ ಕೊಡುವುದರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯ ಜೊತೆ ಶಾಸಕರು, ರಾಜ್ಯದ ಜನತೆ ಇದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡ್ತಾರೆ ಎಂದು ಹೇಳಿದ್ದಾರೆ. 

ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರದ  ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ, ಅದನ್ನು ಹೈಕಾಮಾಂಡ್  ತೀರ್ಮಾನ ಮಾಡುತ್ತೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ವರಿಷ್ಠ ನಿರ್ಧಾರಕ್ಕೆ ನಾವೇಲ್ಲರೂ ಬದ್ಧ ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಕುಮಾರಸ್ವಾಮಿ ಬಗ್ಗೆ ಕೇಳ್ತಿದ್ದಂತೆ ಸಚಿವ ಬಂಗಾರಪ್ಪ ಗರಂ ಆಗಿ, ಕುಮಾರಸ್ವಾಮಿಗೆ ಉತ್ತರ ಕೊಡೋಕೆ ನಾನು ಬಂದಿಲ್ಲ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios