ಸಿದ್ದರಾಮಯ್ಯನವರನ್ನು ಕೆಳಗಿಳಿಸಲು ಸಾಧ್ಯವೆ?: ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಚುನಾವಣೆಗೂ ಮುನ್ನವೇ ಕೇಂದ್ರದಲ್ಲಿ ಮಂತ್ರಿಯಾಗಲು ಡಜನ್ ಗಟ್ಟಲೆ ಆಕಾಂಕ್ಷೆಗಳು ರೆಡಿಯಾಗುತ್ತಿದ್ದಾರೆ. ಮಂತ್ರಿಯಾಗುವ ಕನಸಿನಲ್ಲಿರುವ ಅಭ್ಯರ್ಥಿಗಳು ಮೊದಲು ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ
ಮೂಡಲಗಿ(ಏ.25): ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತೆ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆಂದು ಗೋಕಾಕ ಶಾಸಕರು ದಿನ ಬೆಳಗಾದರೇ ಹೇಳಿಕೊಂಡು ತಿರುಗುತ್ತಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಬೀಳಿಸೋಕೆ ಪ್ರಯತ್ನಿಸಿದರೇ ನಾಡಿನ ಸಮಸ್ತ ಜನರು ಅದರಲ್ಲೂ ಹಿಂದುಳಿದ ವರ್ಗಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಇಂಥ ಒಬ್ಬ ನಾಯಕನನ್ನು ಕೆಳಗಿಳಿಸಲು ಸಾಧ್ಯವೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರಶ್ನಿಸಿದರು.
ಅರಭಾವಿ ವಿಧಾನಸಭಾ ಕ್ಷೇತ್ರದ ಮೂಡಲಗಿ ಪಟ್ಟಣದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗೂ ಮುನ್ನವೇ ಕೇಂದ್ರದಲ್ಲಿ ಮಂತ್ರಿಯಾಗಲು ಡಜನ್ ಗಟ್ಟಲೆ ಆಕಾಂಕ್ಷೆಗಳು ರೆಡಿಯಾಗುತ್ತಿದ್ದಾರೆ. ಮಂತ್ರಿಯಾಗುವ ಕನಸಿನಲ್ಲಿರುವ ಅಭ್ಯರ್ಥಿಗಳು ಮೊದಲು ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ಕಳೆದ 4 ಅವಧಿಯಲ್ಲಿ ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯೇ ಆರಿಸಿಬರುತ್ತಿದ್ದು, ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ಬಂದೇ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯಿಂದ ದೇಶಭಕ್ತಿ ಪಾಠ ಕಲಿಯಬೇಕಿಲ್ಲ: ಲಕ್ಷ್ಮಣ ಸವದಿ
ಬಿಜೆಪಿ ಕೊಟ್ಟಿದ್ದ ಒಂದೂ ಭರವಸೆ ಈಡೇರಿಸಿಲ್ಲ: ಸವದಿ
ಚಕ್ರವರ್ತಿ ಸೂಲಿಬೆಲೆ ಎಂಬ ಅರಬೆಂದ ವ್ಯಕ್ತಿಗಳಿಂದ ಜನರ ಮುಂದೆ ಸುಳ್ಳು ಹೇಳಿಸುವುದೇ ಬಿಜೆಪಿ ಕೆಲಸ. 2014 ರಲ್ಲಿ ಬಿಜೆಪಿ ಹೇಳಿದ ಒಂದೇ ಒಂದು ಮಾತನ್ನೂ ಈಡೇರಿಸಿಲ್ಲ ಎಂದು ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ಕಿಡಿಕಾರಿದರು.
ನದಿ ಜೋಡಣೆ ಭರವಸೆ ಏನಾಯಿತು. ಪೆಟ್ರೋಲ್, ಡೀಸೆಲ್ ರೇಟ್ ಕಡಿಮೆ ಮಾಡ್ತೀವಿ ಅಂದಿದ್ದು ಕೇವಲ ಭರವಸೆ ಆಗಿಯೇ ಉಳಿಯಿತು. ರಸಗೊಬ್ಬರ ದರ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದ ಕೇಂದ್ರ ರೈತರಿಗೆ ಅನ್ಯಾಯ ಮಾಡಿದೆ ಎಂದು ದೂರಿದರು.
ಬಿಜೆಪಿಯಲ್ಲಿ ಹಿಂದುಳಿದ ವರ್ಗಗಳ ನಾಯಕನಾಗಿ ಕೆ.ಎಸ್.ಈಶ್ವರಪ್ಪ ಒಬ್ಬರೇ ಇದ್ದದ್ದು, ಈ ಚುನಾವಣೆಯಲ್ಲಿ ಅವರನ್ನೂ ಮುಗಿಸಿಬಿಟ್ಟರು. ಇದರಿಂದ ಹಿಂದುಳಿದ ವರ್ಗಗಳ ಮೇಲೆ ಬಿಜೆಪಿಯವರಿಗೆ ಅಭಿಮಾನ ಇಲ್ಲ ಎಂದು ತೋರುತ್ತದೆ. ಇದಕ್ಕೆ ಹಾಲು ಮತ ಸಮುದಾಯದವರು ಬಿಜೆಪಿ ವಿರುದ್ಧ ಸೇಡು ತೀರಿಸಿಕೊಳ್ಳಬೇಕು. 40 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದರೂ ಈಶ್ವರಪ್ಪಗೆ ಬಿಜೆಪಿ ಅನ್ಯಾಯ ಎಸಗಿದೆ ಎಂದು ಆರೋಪಿಸಿದರು.
ಬೃಹತ್ ಮೆರವಣಿಗೆ
ಮೂಡಲಗಿ ಸಮಾವೇಶಕ್ಕೂ ಮುನ್ನ ಪುರಸಭೆಯಿಂದ ಆರಂಭಗೊಂಡ ಮೆರವಣಿಗೆ ಸಂಗಪ್ಪ ಸರ್ಕಲ್ ಮಾರ್ಗವಾಗಿ ಬಸವ ಮಂಟಪ ತಲುಪಿತು. ಸುಮಾರು 5 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಇದಕ್ಕೂ ಮೊದಲು ಅರಭಾವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದುರದುಂಡಿ, ರಾಜಾಪೂರ, ಶಿವಾಪೂರ, ಖಾನಟ್ಟಿ, ಮುನ್ಯಾಳ ಗ್ರಾಮಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಜಂಟಿ ಪ್ರಚಾರ ನಡೆಸಿದರು. ಧರ್ಮಟ್ಟಿ, ಸುಣಧೋಳಿ ಗ್ರಾಮಗಳಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪ್ರಚಾರ ಕೈಗೊಂಡರು.
ಮಠಕ್ಕೆ ಭೇಟಿ:
ಮೂಡಲಗಿಯ ಶ್ರೀ ಶಿವಭೋಧರಂಗ ಮಠಕ್ಕೆ ಭೇಟಿ ನೀಡಿದ ಸಚಿವರು, ಶ್ರೀಪಾದ ಅಮೃತ ಸ್ವಾಮೀಜಿ ಹಾಗೂ ಸಮರ್ಥ್ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಈ ವೇಳೆ ಮುಖಂಡರಾದ ಅರವಿಂದ್ ದಳವಾಯಿ, ಅನಿಲ್ ದಳವಾಯಿ, ಬಿ.ಬಿ.ಹಂದಿಗುಂದ್, ಎಸ್.ಆರ್.ಸೋನವಾಲ್ಕರ್, ಪ್ರಕಾಶ್ ಅರಳಿ, ಲಖನ ಸವಸುದ್ದಿ, ರಮೇಶ್ ಉಟಗಿ, ಸುರೇಶ್ ಮಗದುಮ್, ಭರಮಣ್ಣ ಉಪ್ಪಾರ್, ರವಿ ಮೂಡಲಗಿ, ಲಕ್ಕಣ್ಣ ಸವಸುದ್ದಿ, ಅಜಿತ್ ಬೆಳಕೋಡ, ರಾಮಣ್ಣ ಬೆಳಕೋಡ, ಮಲ್ಲಿಕಾರ್ಜುನ ಗೋರೂಶಿ, ಲಗಮ್ನನ ಕಳಸನ್ನವರ್, ಉಮೇಶ್ ಬಿ ಪಾಟೀಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಬಿಜೆಪಿಯಿಂದ ಭಾರತದ ಚಿತ್ರಣವೇ ಬದಲು: ಮಾಜಿ ಸಚಿವೆ ಶಶಿಕಲಾ ಜೊಲ್ಲೆ
ಹಿಂದುಳಿದ ವರ್ಗಗಳ ನಾಯಕ ಎನಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವರಾಜ ಅರಸು ಅವರಂತೆಯೇ ಹಿಂದುಳಿದ ವರ್ಗಗಳಿಗೆ ಅತಿಹೆಚ್ಚು ಅನುಕೂಲ ಮಾಡಿಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಎಲ್ಲ ವರ್ಗಗಳಿಗೆ ತುಂಬಾ ಅನುಕೂಲ ಆಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ.
ನಿಜವಾದ ದೇಶ ಭಕ್ತರು ಕಾಂಗ್ರೆಸಿಗರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಬಿಜೆಪಿ ಹುಟ್ಟಿರಲಿಲ್ಲ ಎಂದು ಅಥಣಿ ಮತಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.